Thursday, June 19, 2025

Latest Posts

K Y Nanjegowda : ಬಿ.ಕೆ.ಹರಿಪ್ರಸಾದ್ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ : ಶಾಸಕ ಕೆ.ವೈ. ನಂಜೇಗೌಡ

- Advertisement -

Kolar News : ಬಿ.ಕೆ.ಹರಿಪ್ರಸಾದ್ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಸಿಎಂ ಹಾಗೂ ಡಿಸಿಎಂ ವಿರುದ್ದ ಹೇಳಿಕೆ ನೀಡುತ್ತಿರುವುದು ಸರಿಕಾಣುತ್ತಿಲ್ಲ , ಪಕ್ಷದ ವರಿಷ್ಠ ರು ಇವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಹೇಳಿಕೆ ನೀಡಿದ್ದಾರೆ .

ಮಾಲೂರು ತಾಲ್ಲೂಕಿನ ಮಾಸ್ತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ ವೈ ನಂಜೇಗೌಡ, ಬಿಕೆ ಹರಿಪ್ರಸಾದ್ ಸಿಎಂ ಹಾಗೂ ಡಿಸಿಎಂ ವಿರುದ್ದ ನೀಡಿರುವ ಹೇಳಿಕೆಗಳು ಬೇಸರ ಉಂಟು ಮಾಡಿವೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ರೀತಿ ಅವಕಾಶ ಪಡೆದವರು ಹರಿಪ್ರಸಾದ್, ಎಐಸಿಸಿವರೆಗೆ ಅವರಿಗೆ ಸ್ಥಾನಮಾನಗಳು ಸಿಕ್ಕಿವೆ. ಆದರೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವಿರುದ್ಧವೇ ಈಗ ಮಾತನಾಡುತ್ತಿದ್ದಾರೆ ‘ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯ ಇಲ್ಲ ಎಂಬುದಾಗಿ ಹೇಳಿದ್ದಾರೆ. ಮಂತ್ರಿ ಮಾಡಿಲ್ಲವೆಂದು ಕೊಟ್ಟ ಅವಕಾಶ ಮರೆತು ಪಕ್ಷದ ವಿರುದ್ಧವಾಗಿ ಮಾತನಾಡುವುದು ಖಂಡನೀಯ’ ಎಂದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಹೋರಾಟಗಳಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಅವರಷ್ಟು ದೊಡ್ಡ ನಾಯಕ ಹರಿಪ್ರಸಾದ್ ಅಲ್ಲ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಅವರ ಮೇಲೆ ಕೆಪಿಸಿಸಿ ಹಾಗೂ ಎಐಸಿಸಿ ಶಿಸ್ತಿನ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು, ಲೋಕಸಭೆ ಚುನಾವಣೆ ಹತ್ತಿರ ಇರಬೇಕಾದ ಈ ಸಮಯದಲ್ಲಿ ಪಕ್ಷದ ಒಬ್ಬ ಹಿರಿಯ ನಾಯಕ ಈ ರೀತಿ ಮಾತನಾಡುವುದು ಸರಿ ಅಲ್ಲ. ಹೀಗಾಗಿ, ತಕ್ಷಣ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

Basavaraj Bommai : ಹುಬ್ಬಳ್ಳಿ : ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸಮರ್ಥನೆ

Pradeep Shettar : ಪ್ರದೀಪ್ ಶೆಟ್ಟರ್ ಹಾಗೂ ನಾನು ಆತ್ಮೀಯರು, ಸಹೋದರರು ಇದ್ದ ಹಾಗೆ: ಶಾಸಕ ಮಹೇಶ ತೆಂಗಿನಕಾಯಿ

Pralhad Joshi : ಬಿಜೆಪಿ – ಜೆಡಿಎಸ್ ಮೈತ್ರಿ ಇನ್ನೂ ಫೈನಲ್ ಆಗಿಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

 

- Advertisement -

Latest Posts

Don't Miss