ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷ ಸಂಬಂಧ ಮಾಸ್ಕೋದಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಚೀನಾದ ರಾಜ್ಯ ಕೌನ್ಸಿಲರ್ ವಾಂಗ್ ಯಿ ಮಹತ್ವದ ಮಾತುಕತೆ ನಡೆಸಿದ್ದರು. ಸುಮಾರು 2 ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ ಗಡಿ ಸಂಘರ್ಷ ಶಮನ ಮಾಡಬಲ್ಲ ಐದು ಅಂಶಗಳ ಯೋಜನೆ ಉಭಯ ರಾಷ್ಟ್ರಗಳು ಸಮ್ಮತಿಸಿವೆ ಎನ್ನಲಾಗಿದೆ.

ಗಡಿಯಲ್ಲಿ ಸದ್ಯ ಭುಗಿಲೆದ್ದಿರೋ ಸಂಘರ್ಷದ ವಾತಾವರಣ ಅಸಲಿಗೆ ಎರಡೂ ರಾಷ್ಟ್ರಗಳಿಗೆ ಬೇಕಾಗಿಲ್ಲ.ಅಲ್ಲದೇ ಉಭಯ ರಾಷ್ಟ್ರಗಳ ಹಿತದೃಷ್ಠಿಯಿಂದ ಗಡಿಯಲ್ಲಿನ ಗಲಾಟೆ ಪೂರಕ ವಾತಾವರಣವಲ್ಲ. ಹೀಗಾಗಿ ಉಭಯ ರಾಷ್ಟ್ರಗಳ ನಾಯಕರು ಶಾಂತಿ ಮಾತುಕತೆ ಮುಂದುವರಿಸಬೇಕು, ಗಡಿಯಲ್ಲಿ ಸೈನಿಕರು ಅಂತರ ಕಾಯ್ದುಕೊಳ್ಳಬೇಕು, ಗಡಿ ಶಮನ ತ್ವರಿತವಾಗಿ ಕಡಿಮೆ ಮಾಡಬೇಕು ಸೇರಿದಂತೆ ಒಟ್ಟು 5 ಅಂಶಗಳ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.




