Thursday, October 23, 2025

Latest Posts

ಕೈಗೂಸನ್ನು ಎತ್ತಿಕೊಂಡು ಫುಡ್ ಡೆಲಿವರಿ ಮಾಡ್ತಾಳೆ ಈ ತಾಯಿ

- Advertisement -

zomato news:

ಝೊಮ್ಯಾಟೋದ ಈ ಮಹಿಳಾ ಡೆಲಿವರಿ ಏಜೆಂಟ್  ಕೈಗೂಸನ್ನು ಎತ್ತಿಕೊಂಡೇ ಮನೆಮನೆಗೆ ತೆರಳಿ ಫುಡ್​ ಡೆಲಿವರಿ ಮಾಡುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ.  ಸುಮಾರು 10 ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಈ ವಿಡಿಯೋ ಮೆಚ್ಚಿದ್ದಾರೆ. ಸೌರಭ್ ಪಂಜಾನ್ವಿ ಎನ್ನುವ ಫುಡ್ ಬ್ಲಾಗರ್​ ಈ ವಿಡಿಯೋ ಚಿತ್ರೀಕರಿಸಿದ್ದಾರೆ. ಅಚ್ಚರಿಗೊಂಡು ನಿತ್ಯದ ಕಾರ್ಯವಿಧಾನದ ಬಗ್ಗೆ ಸೌರಭ್ ಅವಳೊಂದಿಗೆ ಮಾತಿಗಿಳಿದಾಗ, ಹೌದು ನಾನು ಮಗುವನ್ನು ಹೀಗೆ ಕಟ್ಟಿಕೊಂಡೇ ಇಡೀ ದಿನ ಕೆಲಸ ಮಾಡುತ್ತೇನೆ. ಜೊತೆಗೆ ಇನ್ನೊಂದು ಮಗುವೂ ಇದೆ. ಒಟ್ಟಿಗೆ ಕರೆದೊಯ್ಯುತ್ತೇನೆ ಎಂದಿದ್ದಾಳೆ.  ಈ ವಿಡಿಯೋ 1 ಮಿಲಿಯನ್​ ವೀಕ್ಷಣೆ ಗಳಿಸಿದೆ.

ನೆಟ್ಟಿಗರು ಇವಳ ಸಾಹಸದಿಂದ ಸ್ಫೂರ್ತಿಗೊಂಡು, ‘ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನೂ ಮಾಡಬಹುದು ಎನ್ನುವುದಕ್ಕೆ ಇವರು ಉತ್ತಮ ಉದಾಹರಣೆ. ಇಂಥವರನ್ನು ನೋಡಿ ಕಲಿಯಬೇಕು’ ಎಂದಿದ್ದಾರೆ.

ಈ ವಿಡಿಯೋಗೆ ಪ್ರತಿಕ್ರಿಯಿಸಿದ ಝೊಮ್ಯಾಟೋ, ‘ ಮಕ್ಕಳ ಆರೈಕೆಗೆ ಸಂಬಂಧಿಸಿದ ಸೌಲಭ್ಯಗಳನ್ನು ಒದಗಿಸುವ ಹಿನ್ನೆಲೆಯಲ್ಲಿ ಈ ಮಹಿಳಾ ಡೆಲಿವರಿ ಏಜೆಂಟ್​ ಸಂಪರ್ಕ ವಿವರವನ್ನು ಹಂಚಿಕೊಳ್ಳಲು ಕೇಳಿಕೊಂಡಿದೆ.’

ಒಟ್ಟಾರೆ ತಾಯಿಯ ತ್ಯಾಗ ಪರಿಶ್ರಮಕ್ಕೆ ಸರಿ ಸಾಟಿ ಯಾವುದೂ ಇಲ್ಲ ಎಂಬುವುದು ಮತ್ತೆ ಮತ್ತೆ ಸಾಬೀತಾಗುತ್ತಳೇ ಇದೆ. ಇಂತಹ ವೀಡಿಯೋ ಸುದ್ದಿಗಳಿಂದಾದರೂ ವೃದ್ಧಾಶ್ರಮದಲ್ಲಿ ತಂದೆ ತಾಯಿಯನ್ನು ಧೂಕುತ್ತಿರುವವರಿಗೆ ಬುದ್ದಿ ಬರಬೇಕಾಗಿದೆ.

 

ಬೆಳಗಾವಿಯಲ್ಲಿ ಬೋನಿಗೆ ಬೀಳದ ಚಿರತೆ: ಗ್ರಾಮಸ್ಥರಲ್ಲಿ ಆತಂಕ

 

ಕೊಡಗಿನಲ್ಲಿ 4 ದಿನ ನಿಷೇದಾಜ್ಞೆ ಜಾರಿ: ಡಿ.ಸಿ.ಸತೀಶ್

ಶಿವಮೊಗ್ಗ: ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ ಕುರಿತು ಸೂಚನೆಗಳು

 

- Advertisement -

Latest Posts

Don't Miss