ಕರ್ನಾಟಕ ಟಿವಿ ಬೆಂಗಳೂರು : ಕೊರೊನಾ ಭಾರತಕ್ಕೆ ಭೀಕರವಾಗಿ ಕಾಡ್ತಿದೆ, ಪ್ರಧಾನಿ ಮೋದಿ ಮೊದಲ ಲಾಕ್ ಘೋಷಣೆ ಮಾಡಿ ಇಂದಿಗೆ 100 ದಿನ ಆಗಿದೆ. ಇದೀಗ ಲಾಕ್ ಡೌನ್ ಇಲ್ಲ, ಅನ್ ಲಾಕ್ ಮಾಡಲಾಗಿದೆ. ಆದ್ರೆ, ಕೊರೊನಾ ಸುನಾಮಿ ರೀತಿ ಅಪ್ಪಳಿಸುತ್ತಿದ್ದು ಜನ ಭಯಭೀತರಾಗಿದ್ದಾರೆ. ಜೀವನ ನಡೆಸೋದು ಕಷ್ಟವಾಗಿದೆ. ಮೊದಮೊದಲು ಎಲ್ಲರೂ ಸಹಾಯ ಮಾಡಿದ್ರು, ನಂತರ ಸುಮ್ಮನಾದ್ರೂ.. ಆದ್ರೆ, ಬೆಂಗಳೂರಿನ ಬಿಜೆಪಿ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಇಂದಿಗೂ ಸಹ ನಿತ್ಯನಿರಂತರವಾಗಿ ತನ್ನ ಕ್ಷೇತ್ರದ ಜನರಿಗೆ ಫುಡ್ ಕಿಟ್ ವಿತರಣೆ ಮಾಡ್ತಿದ್ದಾರೆ.. ಒಂದೇ ದಿನ ವಿತರಣೆ ಮಾಡಿದ್ರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ ಎಂದು ದಿನಕ್ಕೆ ತಲಾ 5 ಸಾವಿರ ಕುಟುಂಬಗಳಿಗೆ ಕಿಟ್ ವಿತರಣೆ ಮಾಡ್ತಿದ್ದಾರೆ.. ಹೀಗೆ ಒಂದು ವಾರಗಳ ಕಾಲ ಕಿಟ್ ವಿತರಣೆ ಮಾಡಲಿದ್ದಾರೆ.. ಲಾಕ್ ಡೌನ್ ಘೋಷಣೆಯಾದಾಗಿನಿಂದ ಪ್ರತೀ ಮನೆಗೂ ಪ್ರತಿ ತಿಂಗಳು ಲಗ್ಗೆರೆ ನಾರಾಯಣಸ್ವಾಮಿ ಫುಡ್ ಕಿಟ್ ವಿತರಣೆ ಮಾಡ್ತಿದ್ದಾರೆ. ದೇವರು ನಮಗೆ ಕೊಟ್ಟಿದ್ದಾನೆ ನಾವು ಜನರಿಗೆ ಕೊಡ್ತೇವೆ. ಜನರ ಕಷ್ಟಕ್ಕೆ ನೆರವಾಗಬೇಕು ಅನ್ನೋದು ನಾರಾಯಣಸ್ವಾಮಿ ಅಭಿಪ್ರಾಯ ಇಂದು ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಮುನಿರತ್ನ ಸೇರಿದಂತೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಭಾಗಿಯಾಗಿದ್ರು.
ದೊಡ್ಡಬಳ್ಳಾಪುರದಲ್ಲಿ 40 ಸಾವಿರ ಕಿಟ್ ವಿತರಿಸಿದ ಲಗ್ಗೆರೆ ನಾರಾಯಣಸ್ವಾಮಿ
ಬಿಜೆಪಿ ಮುಖಂಡರಾದ ನಾರಾಯಣಸ್ವಾಮಿ ಕೇವಲ ಲಗ್ಗೆರೆಯಲ್ಲಿ ಮಾತ್ರವಲ್ಲ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 40 ಸಾವಿರ ಫುಡ್ ಕಿಟ್ ಗಳನ್ನ ವಿತರಣೆ ಮಾಡಿದ್ದಾರೆ.. ದೊಡ್ಡಬಳ್ಳಾಪುರ ನಾರಾಯಣಸ್ವಾಮಿಯವರ ತವರೂ ಸಹ.. ಹೀಗಾಗಿ ತವರಿನ ಜನರಿಗೆ ನಾರಾಯಣಸ್ವಾಮಿ ನೆರವಾಗಿದ್ದಾರೆ.. ನಾರಾಯಣಸ್ವಾಮಿಕಾರ್ಯಕ್ಕೆ ದೊಡ್ಡಬಳ್ಳಾಪುರ ಬಿಜೆಪಿ ಮುಖಂಡರು ಕೈಜೋಡಿಸಿದ್ದಾರೆ.
ಆರ್ ಎಸ್ ಎಸ್ ನ ಕಲ್ಲಡ್ಕ ಪ್ರಭಾಕರ್ ಭಟ್ಟರಿಂದಲೂ ನಾರಾಯಣಸ್ವಾಮಿ ಕಾರ್ಯ ಶ್ಲಾಘನೆ
ಇನ್ನು ರಾಜ್ಯದ ಆರ್ ಎಸ್ ಎಸ್ ಪ್ರಭಾವಿ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಸಹ ಲಗ್ಗೆರೆ ನಾರಾಯಣಸ್ವಾಮಿಯವರ ಫುಡ್ ಕಿಟ್ ವಿತರಣಾ ಸ್ಥಳಕ್ಕೆ ಭೇಟಿ ನೀಡಿ ಅವರ ಕಾರ್ಯವನ್ನ ಶ್ಲಾಘಿಸಿದ್ದಾರೆ. ನಾರಾಯಣಸ್ವಾಮಿಯವರ ಪತ್ಮಿ ಮಂಜುಳಾ ನಾರಾಯಣಸ್ವಾಮಿ ಹಾಲಿ ಲಗ್ಗೆರೆ ವಾರ್ಡ್ ಕಾರ್ಪೋರೇಟರ್ ಆಗಿದ್ದು ಪತಿ, ಪತ್ನಿ ಇಬ್ಬರೂ ಕ್ಷೇತ್ರದ ಜನರ ನೆರವಿಗೆ ಹಗಲು ರಾತ್ರಿ ದುಡಿಯುತ್ತಿದ್ದಾರೆ.
ಶಿವಕುಮಾರ್, ಕರ್ನಾಟಕ ಟಿವಿ, ಬೆಂಗಳೂರು