ಕಳೆದ ವರ್ಷ ಆಸ್ಟ್ರೇಲಿಯಾ ರಾಜ್ಯಗಳಲ್ಲಿ ಸಣ್ಣದಾಗಿ ಅಭಿಯಾನ ಇದೀಗ ದೇಶವ್ಯಾಪಿ ವ್ಯಾಪಿಸಿದೆ. ಲಕ್ಷಾಂತರ ಮಕ್ಕಳಿಗೆ ಜಾಲತಾಣ ಖಾತೆಗಳಾದ ಫೇಸ್‌ಬುಕ್, ಇನ್ಸ್ಟಾಗ್ರಾಂ, ಥ್ರೆಡ್ಸ್, ಎಕ್ಸ್, ಯುಟ್ಯೂಬ್, ಸ್ನಾಪ್‌ಚಾಟ್, ರೆಡ್ಡಿಟ್, ಕಿಕ್, ಟ್ವಿಚ್ ಗಳನ್ನ ನಿಷೇಧಿಸಲಾಗಿದೆ. ಈಗಾಗಲೇ 10 ಜಾಲತಾಣಗಳಲ್ಲಿ ಖಾತೆ ಹೊಂದಿದ್ದ ಮಕ್ಕಳ ಖಾತೆ ಈಗಾಗಲೇ ರದ್ದುಪಡಿಸಲಾಗಿದೆ.

ಹೊಸಬರಿಗೂ ಕಠಿಣ ನಿಯಮಗಳ ಮೂಲಕವೇ ಖಾತೆ ತೆರೆಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಒಂದು ವೇಳೆ ಜಾಲತಾಣ ಕಂಪನಿಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಖಾತೆ ನಿಷೇಧಿಸದೇ ಇದ್ದರೆ, ಹೊಸದಾಗಿ ಈ ವಯೋಮಾನದ ಮಕ್ಕಳಿಗೆ ಖಾತೆ ತೆರೆಯಲು ಅವಕಾಶ ನೀಡಿದರೆ ಅಂಥ ಕಂಪನಿಗಳಿಗೆ 290 ಕೋಟಿ ರೂ.ವರೆಗೆ ದಂಡ ವಿಧಿಸಲಾಗುವುದು. ಈವರೆಗೂ 16ಕ್ಕಿಂತ ಕಡಿಮೆ ವಯಸ್ಸಿನ ಅಂದಾಜು 10 ಲಕ್ಷ ಜಾಲತಾಣ ಖಾತೆಗಳು ಬುಧವಾರ ರದ್ದಾಗಿವೆ ಎಂಬ ಅಂದಾಜಿದೆ.
ವರದಿ : ಲಾವಣ್ಯ ಅನಿಗೋಳ




