Thursday, December 12, 2024

Latest Posts

ಲಕ್ಷ್ಮಿ ಗುಂಟ್ರಾಳ ಮೇಲೆ ಹಲ್ಲೆ ಪ್ರಕರಣ; ಶಾಸಕ ಅಬ್ಬಯ್ಯ ಕೈವಾಡ..!

- Advertisement -

www.karnatakatv.net :ಹುಬ್ಬಳ್ಳಿ:  ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ್ 69 ರಿಂದ ಸ್ಪರ್ಧಿಸಿದ್ದ, ಕಾಂಗ್ರೆಸ್ ಪರಾಜಿತ್ ಅಭ್ಯರ್ಥಿ ಶ್ರೀನಿವಾಸ ಬೆಳದಡಿ ಅವರು ರಾಜಕೀಯ ಪ್ರೇರಿತವಾಗಿ ಕೊಲೆ ಮಾಡುವ ಉದ್ದೇಶದಿಂದಲೇ ಎಐಎಂಐಎಂ ಪಕ್ಷದ ಪರಾಜಿತ್ ಅಭ್ಯರ್ಥಿ ಲಕ್ಷ್ಮಿ ವಿಜಯ ಗುಂಟ್ರಾಳ ಮೇಲೆ ಹಲ್ಲೇ ಮಾಡಿದ್ದಾರೆ. ಇದರ ಹಿಂದೆ ಶಾಸಕ ಪ್ರಸಾದ್ ಅಬ್ಬಯ್ಯ ಅವರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಎಂದು ಎಐಎಂಐಎಂ ಪಕ್ಷದ ಮುಖಂಡ ವಿಜಯ ಗುಂಟ್ರಾಳ ಗಂಭೀರವಾಗಿ ಆರೋಪ ಮಾಡಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿ, ಶ್ರೀನಿವಾಸ ಬೆಳದಡಿ ಮುಂಚೆಯಿಂದಲೂ ನನ್ನ ವಿರುದ್ಧ ಅನೇಕ ಅಪಪ್ರಚಾರ, ತೇಜೋವದೆ ಮಾಡುವ ಮೂಲಕ ಸಾಮಾಜಿಕ ಹಾಗೂ ರಾಜಕೀಯವಾಗಿ ನನ್ನನ್ನು ಹತ್ತಿಕ್ಕುವ ಸಂಚನ್ನು ನಿರಂತರವಾಗಿ ರೂಪಿಸುತ್ತಾ ಬಂದಿದ್ದಾರೆ. ನಾನು ಕಾಂಗ್ರೆಸ್ ಪಕ್ಷ ಬಿಡಲು ಇವರ ಸಂಚುಗಳೇ ಕಾರಣ. ಪಾಲಿಕೆ ಚುನಾವಣೆಯಲ್ಲಿ ಎಐಎಂಐಎಂ ಪಕ್ಷದ ಮೂರು ಅಭ್ಯರ್ಥಿಗಳು ಜಯಭೇರಿ ಭಾರಿಸಿದ ಕಾರಣ ಹತಾಶರಾಗಿ ಸ್ಥಳೀಯ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಶ್ರೀನಿವಾಸ ಬೆಳದಡಿಗೆ ನಮ್ಮ ಮೇಲೆ  ಹಲ್ಲೇ ನಡೆಸಲು ಪ್ರಚೋದನೆ ನೀಡಿರಬಹದು. ಈ ಎಲ್ಲ ಕಾರಣದಿಂದಲೇ ಶ್ರೀನಿವಾಸ ಬೆಳದಡಿ ಮತ್ತು 15 ಜನರ ತಂಡ ನಮ್ಮ ಮೇಲೆ ಕೊಲೆ ಮಾಡುವ ದುರುದ್ದೇಶದಿಂದಲೇ ಮಾರಣಾಂತಿಕ ದೈಹಿಕ ಹಲ್ಲೇ ನಡೆಸಿದ್ದಾರೆ. ಈ ಬಗ್ಗೆ ಬೆಂಡಿಗೇರಿ ಪೋಲಿಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿ, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಮಾಡಿಸಿ ಎಮ್.ಎಲ್.ಸಿ ಮಾಡಿಸಿದ್ದೇವೆ. ಆದರೂ ಸಹಿತ ಪೋಲಿಸ್ ಇನ್ಸ್ಪೆಕ್ಟರ್ ಹಲ್ಲೆಕೋರರನ್ನು ಬಂಧಿಸದೇ ಆರೋಪಿಗಳಿಂದ ನಮ್ಮ ವಿರುದ್ದವೇ ಪ್ರತಿ ದೂರನ್ನು ತೆಗೆದುಕೊಂಡು, ಪರೋಕ್ಷವಾಗಿ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ. ಇವರ ಹಿಂದೆ ಶಾಸಕರ ಕೈವಾಡ ಕಂಡು ಬರುತ್ತಿದೆ. ಕೂಡಲೇ  ಪೋಲಿಸ್ ಆಯುಕ್ತರು 16 ಜನ ಆರೋಪಿಗಳನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಟಿವಿ- ಹುಬ್ಬಳ್ಳಿ

- Advertisement -

Latest Posts

Don't Miss