www.karnatakatv.net : ಬೆಳಗಾವಿ: ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಬಳಸಿಕೊಂಡು ನಿರ್ಮಾಣ ಆಗುತ್ತಿರುವ ಕಾಮಿಡಿ, ಎಂಟರ್ಟೈನ್ಮೆಂಟ್ ಉಡಾಳ ಕಂಪನಿ ಸಿನೆಮಾಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಆಕ್ಷನ್ ಕಟ್ ಹೇಳಿದರು.
ರವಿವಾರ ಬೆಳಗಾವಿಯ ಸಿಂದ್ದೊಳ್ಳಿ ಕ್ರಾಸ್ ಬಳಿ ಇರುವ ಇಂಡಾಲ ಕಾಲೋನಿಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿ ಉಡಾಳ ಕಂಪನಿ ಸಿನೆಮಾಗೆ ಲಕ್ಷಿ ಹೆಬ್ಬಾಳಕರ್ ಆಕ್ಸನ್ ಕಟ್ ಹೇಳಿದರು.
ಪಕ್ಕಾ ಉಡಾಳ ಕಂಪನಿ, ಹೆಸರೆ ತಿಳಿಸುವಂತೆ ಸಂಪೂರ್ಣ ಎಂಟರ್ಟೈನ್ಮೆಂಟ್ ಸಿನೆಮಾ ಇದಾಗಿದೆ. ಉತ್ತರ ಕರ್ನಾಟಕದ ಸೊಗಸಾದ ಭಾಷೆ ಈ ಸಿನೆಮಾದಲ್ಲಿ ಕಾಣಲಿದೆ. ಕಥೆ, ಸಂಭಾಷಣೆ ಸೇರಿದಂತೆ ಸಿನಿಮಾ ಚಿತ್ರಿಕರಣ ಕೂಡಾ ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ಚಿತ್ರೀಕರಣ ಆಗಲಿದೆ. ಸಿನೆಮಾದಲ್ಲಿ ಎರಡು ಹಾಡುಗಳು ಇರಲಿದೆ. ಈ ಸಿನೆಮಾದಲ್ಲಿ ಒಂದು ಪೈಟ್ ಕೂಡಾ ನೋಡಲು ಸಿಗುತ್ತದೆ. ನಿಜ ಜೀವನದಲ್ಲಿ ಯುವಕರು ಬದುಕು ರೀತಿ ಈ ಸಿನೆಮಾದಲ್ಲಿ ಕಾಣಬಹುದು.
ಪಕ್ಕಾ ಉಡಾಳ ಕಂಪನಿ ಚಿತ್ರದ ಡೈರೆಕ್ಟರ್ – ಸಂಜಯ್ ಎಚ್, ಪ್ರೊಡ್ಯೂಸರ್ ನಿರಂಜ ಸ್ಚಾಮಿ ಅವರು ಇರಲಿದ್ದಾರೆ ಪಕ್ಕಾ ಉಡಾಳ ಕಂಪನಿ ಸಿನೆಮಾದಲ್ಲಿ ನಾಯಕಿಯಾಗಿ ಪ್ರಿಯಾ ಸವದಿ, ನಾಯಾಕ ನಟನಾಗಿ ಸಂದೀಪ್ ಎಸ್. ಎನ್ ಅಭಿನಯಿಸಲಿದ್ದಾರೆ.
ಕ್ಯಾಮರಾ ಮ್ಯಾನ್ ಆಗಿ ಕೃಷ್ಣ ನಾಯ್ಕರ್, ಚಿತ್ರದಲ್ಲಿ ಸಂಗೀತ- ರವಿ ಸೇರಿದಂತೆ ಅನಿಲ ಹುದಲಿ, ವಿರೇಂದ್ರ ಕೋಕಾಟಿಮಠ, ಕುಮಾರ್ ಹಟ್ಟಿಹೋಳಿ ಅವರು ಕಾರ್ಯ ನಿರ್ವಹಣೆ ಮಾಡಲಿದ್ದಾರೆ.