ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಕೇಸ್ ಹೈಕೋರ್ಟ್ನಲ್ಲಿ ವಿಚಾರಣೆ ನಡೀತಿದೆ.. ಇದ್ರ ನಡುವೇ ಸ್ವಾಮೀಜಿಯೊಬ್ಬರು ನುಡಿದ ಭವಿಷ್ಯವೊಂದು ಭಾರೀ ಅಚ್ಚರಿ ಮೂಡಿಸಿದೆ. ಅದೇನಂದ್ರೆ, ಕರ್ನಾಟಕದಲ್ಲಿ ಮೊದಲ ಮಹಿಳಾ ಸಿಎಂ ಆಗ್ತಾರೆ ಅನ್ನೋದು.. ಹೀಗಾಗಿ, ಲಕ್ಷ್ಮಿ ಹೆಬ್ಬಾಳ್ಕರ್ ಅವ್ರು ಮೊದಲ ಮಹಿಳಾ ಸಿಎಂ ಆಗ್ತಾರೆ ಅನ್ನೋ ಮಾತುಗಳು ಕೇಳಿಬರ್ತಿವೆ.
ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಕೆಳಗಿಳೀಬೇಕು ಅಂತ ಸಾಕಷ್ಟು ಕೂಗು ಕೇಳಿಬರ್ತಿದೆ. ಕಾಂಗ್ರೆಸ್ನಲ್ಲೇ ಸಿಎಂ ಆಕಾಂಕ್ಷಿಗಳ ನಡುವೆ ರೇಸ್ ನಡೀತಿದೆ.. ಈ ಲಿಸ್ಟ್ನಲ್ಲಿ ಈಗ ಹೊಸ ಹೆಸರು ಕೇಳಿಬಂದಿದೆ.. ಅವ್ರೇ ಲಕ್ಷ್ಮಿ ಹೆಬ್ಬಾಳ್ಕರ್.. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಹಾಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವ್ರೇ ಮುಂದಿನ ಸಿಎಂ ಆಗ್ಬೇಕು ಅನ್ನೋ ಮಾತು ಕೇಳಿಬಂದಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಸಿಎಂ ಆಗ್ಬೇಕು ಅಂತ ಹೇಳಿರೋದು ಅವರ ಅಭಿಮಾನಿಗಳು.. ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಅಭಿಮಾನಿಗಳು ಲಕ್ಷ್ಮಿ ಹೆಬ್ಬಾಳ್ಕರ್ ಮುಂದಿನ ಸಿಎಂ ಎಂದು ಪೋಸ್ಟರ್ ಮಾಡಿ ವೈರಲ್ ಮಾಡಿದ್ದಾರೆ.. ಒಂದ್ಕಡೆ ಕಾಂಗ್ರೆಸ್ನಲ್ಲೇ ಹಿರಿಯ ಶಾಸಕರು, ಸಚಿವರುಗಳು, ನಾನೂ ಸಿಎಂ ಆಗ್ಬೇಕು ಅಂತಿದ್ದಾರೆ. ಅದೇ ರೀತಿ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಕೂಡ ಮುನ್ನೆಲೆಗೆ ಬಂದಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಸಿಎಂ ಆಗ್ತಾರೆ ಅನ್ನೋಕೂ ಒಂದು ಕಾರಣ ಇದೆ.. ರಾಜ್ಯದ ಮಹಿಳೆಯೊಬ್ಬರಿಗೆ ಮುಖ್ಯಮಂತ್ರಿ ಆಗೋ ಯೋಗವಿದೆ ಅಂತ ಕೋಡಿಮಠದ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.. ಅದ್ಯಕ್ಕೆ ಕಾಂಗ್ರೆಸ್ನಲ್ಲಿ ಮಹಿಳಾ ನಾಯಕಿಯರ ಪಟ್ಟಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವ್ರೇ ಟಾಪ್ ಲೀಡರ್.. ಮಹಿಳಾ ಮತ್ತು ಕಲ್ಯಾಣ ಸಚಿವೆಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತಮ ಆಡಳಿತ ನಿರ್ವಹಿಸಿದ್ದಾರೆ… ಇನ್ನೊಂದ್ಡೆ ಲಕ್ಷ್ಮೀ ಅವ್ರು ಡಿಕೆಶಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ
ಒಂದ್ವೇಳೆ ಸಿದ್ದರಾಮಯ್ಯ ಸಿಎಂ ಕುರ್ಚಿ ಇಂದ ಇಳಿದ್ರೆ, ಡಿಕೆಶಿಗೆ ಸಿಎಂ ಆಗೋದನ್ನೂ ತಪ್ಪಿಸೋಕೆ ಪ್ರಯತ್ನಿಸ್ತಾರೆ.. ಸಿದ್ದರಾಮಯ್ಯ ತಮ್ಮ ಆಪ್ತರಿಗೆ ಸಿಎಂ ಮಾಡೋಕೆ ಟ್ರೈ ಮಾಡ್ಬೋದು… ಹೈಕಮಾಂಡ್ ಈ ಎಲ್ಲಾ ತಲೆ ನೋವು ತಪ್ಪಿಸಿಕೊಳ್ಳೋಕೆ, ಮಹಿಳೆಯನ್ನೇ ಸಿಎಂ ಮಾಡಿದ್ರೂ ಮಾಡಬಹುದು.. ಆಗ ಹೈಕಮಾಂಡ್ಗೆ ಸಿಗೋ ಮೊದಲ ಹೆಸರೇ ಲಕ್ಷ್ಮೀ ಹೆಬ್ಬಾಳ್ಕರ್… ಕೋಡಿಮಠದ ಸ್ವಾಮೀಜಿಗಳು ಹೇಳಿದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಎಂ ಆದ್ರೂ ಆಗಬಹುದು
ಮೊದಲ ಮಹಿಳಾ ಸಿಎಂ ಕೂಗಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಸ್ಪಷ್ಟನೆ ಕೊಟ್ಟಿದ್ದಾರೆ.. ನಾನು ಸಿಎಂ ಆಕಾಂಕ್ಷಿ ಅಲ್ಲ, ಸಿದ್ದರಾಮಯ್ಯ ಎಲ್ಲಿವರೆಗೂ ಇರ್ತಾರೋ ಅಲ್ಲಿವರೆಗೂ ನಮ್ಮ ಬೆಂಬಲ ಅವರಿಗೆ ಇರುತ್ತೆ ಅಂದಿದ್ದಾರೆ. ನಾವೆಲ್ಲಾ ಸಿಎಂ ಬೆನ್ನಿಗೆ ಗಟ್ಟಿಯಾಗಿ ನಿಲ್ತೀವಿ ಅಂತ ಹೇಳಿ ಅಭಿಮಾನಿಗಳ ಬಾಯಿ ಮುಚ್ಚಿಸೋಕೆ ನೋಡಿದ್ದಾರೆ.. ಲಕ್ಷ್ಮೀ ಹೆಬ್ಬಾಳ್ಕರ್ ಅವ್ರು ಏನೇ ಹೇಳ್ಳಿ, ಅಭಿಮಾನಿಗಳ ಈ ಕೂಗು ಅವ್ರನ್ನ ಖುಷಿಗೊಳಿಸಿರೋದಂತೂ ಸತ್ಯ..