- Advertisement -
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಒಂದಾಗಿದೆ. ಆದ್ರೆ, ಜೂನ್, ಜುಲೈ ತಿಂಗಳ ಹಣ ಮಹಿಳೆಯರಿಗೆ ಖಾತೆಗಳಿಗೆ ಜಮೆ ಆಗಿರಲಿಲ್ಲ. ಹೀಗಾಗಿ, ಯೋಜನೆ ಬಗ್ಗೆ ಸಾಕಷ್ಟು ವದಂತಿಗಳ ಹಬ್ಬಿದ್ದವು.
ಈ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದು, ಜೂನ್ ಹಾಗೂ ಜುಲೈ ತಿಂಗಳ ಹಣ ಬಿಡುಗಡೆಯಾಗಿದೆ ಎಂದಿದ್ದಾರೆ. ಗುರುವಾರವೇ ಎರಡು ತಿಂಗಳ ಹಣ ಖಾತೆಗಳಿಗೆ ಜಮೆ ಆಗಿದೆ. ಆಗಸ್ಟ್ 25ರೊಳಗೆ ಮತ್ತೊಂದು ಕಂತಿನ ಹಣ ಜಮೆ ಆಗಲಿದೆ. ಗೃಹಲಕ್ಷ್ಮಿ ದೊಡ್ಡ ಯೋಜನೆಯಾಗಿದೆ. ತಾಂತ್ರಿಕ ದೋಷದ ಕಾರಣದಿಂದ ಕೆಲವರ ಖಾತೆಗಳಿಗೆ ಹಣ ಜಮೆ ಆಗಿಲ್ಲ. ಎಲ್ಲರ ಖಾತೆಗಳಿಗೂ ಹಣ ಜಮೆ ಆಗಲಿದೆ ಎಂದು ಹೆಬ್ಬಾಳ್ಕರ್ ತಿಳಿಸಿದ್ದಾರೆ.
- Advertisement -