Lakshmi Hebbalkar : ಪದ್ಮಜಾದೇವಿ ಹಲಗೇಕರ್ ಪಾರ್ಥಿವ  ಶರೀರದ ದರ್ಶನ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Belagavi News : ಬೆಳಗಾವಿಯ ರಾಜಶ್ರೀ ಹಲಗೇಕರ್ ಅವರ ತಾಯಿಯ ಪದ್ಮಜಾ ದೇವಿ ಹಲಗೇಕರ್ ದೈವಾಧೀನರಾಗಿರುವ ವಿಚಾರ ಕೇಳಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಂತಾಪ ಸೂಚಿಸಿದರು.

ಬೆಳಗಾವಿಯ ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಹಲಗೇಕರ್ ಅವರ ತಾಯಿ, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ಅವರ ಅತ್ತೆ, ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ದಿ.ನಾಥಾಜಿರಾವ್ ಹಲಗೇಕರ್ ಅವರ ಪತ್ನಿ ಪದ್ಮಜಾದೇವಿ ಹಲಗೇಕರ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು,  ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಆವರಣಕ್ಕೆ ತೆರಳಿ, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಭಗವಂತ ಮೃತರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಹಲಗೇಕರ್ ಬಂಧು- ಬಳಗದವರಿಗೆ ನೋವು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.

ಬೆಳಗಾವಿ : ಒಳಚರಂಡಿ ನಿರ್ಮಾಣದ ಕಾಮಗಾರಿಗೆ ಚಾಲನೆ

Santhosh Lad : ಜೋಶಿಯವರದ್ದು ಬೇಸ್ ಲೆಸ್ ಆರೋಪ : ಸಚಿವ ಸಂತೋಷ್ ಲಾಡ್

Dress Shop Owner : ಹುಬ್ಬಳ್ಳಿ : ಬಟ್ಟೆ ಅಂಗಡಿ ಮಾಲಕಿ ಅನುಮಾನಾಸ್ಪದ ಸಾವು..!

About The Author