Devotional:
ಹಿಂದೂ ಪಂಚಾಂಗದ ಪ್ರಕಾರ, ದೀಪಾವಳಿಯ ಲಕ್ಷ್ಮಿ ಪೂಜೆಯನ್ನು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಮಾಡಲಾಗುತ್ತದೆ. ದೀಪಾವಳಿ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ. ಈ ದಿನ ಪ್ರದೋಷ ಕಾಲದಲ್ಲಿ ಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ .ಧಾರ್ಮಿಕ ನಂಬಿಕೆಗಳ ಪ್ರಕಾರ, ದೀಪಾವಳಿಯಂದು ಲಕ್ಷ್ಮಿ ಉದ್ಬವವಾಗಿದ್ದಳು ಎನ್ನಲಾಗಿದೆ ಹಾಗೂ ಕಾರ್ತಿಕ ಅಮಾವಾಸ್ಯೆಯಯಂದು ಲಕ್ಷ್ಮಿ ದೇವಿ ಭೂಮಿಗೆ ಬಂದಿದ್ದಳು ಎಂಬ ನಂಬಿಕೆ ಇದೆ. ಆದಕಾರಣ ದೀಪಾವಳಿಯಂದು ಲಕ್ಷ್ಮೀಪೂಜೆ ಮಾಡಲಾಗುತ್ತದೆ. ಲಕ್ಷ್ಮೀದೇವಿಯನ್ನು ಸ್ವಾಗತಿಸಲು ಮನೆ ತುಂಬ ದೀಪಗಳನ್ನು ಹಚ್ಚಲಾಗುತ್ತದೆ. ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಮೂಲಕ ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗುವ ಸಂಕೇತ ಇದಾಗಿದೆ. ದೀಪಾವಳಿಯ ಅಮವಾಸ್ಯೆಯಂದು ರಾತ್ರಿ ಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಲಕ್ಷ್ಮಿ ಜೊತೆ ಗಣೇಶ ಹಾಗೂ ಕುಬೇರನನ್ನು ಪೂಜಿಸುತ್ತಾರೆ. ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಪೂಜೆಯನ್ನು ಹೇಗೆ ಮಾಡಬೇಕು ಎಂದು ತಿಳಿದು ಕೊಳ್ಳೋಣ .
ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದರೆ ನೀವು ಚಿನ್ನ, ಬೆಳ್ಳಿ ಅಥವಾ ಲೋಹದಿಂದ ಮಾಡಿದ ಲಕ್ಷ್ಮಿ ಪಾದಗಳನ್ನು ಇಟ್ಟು ಪೂಜೆ ಮಾಡಬೇಕು. ಲಕ್ಷ್ಮಿ ಆರಾಧನೆಯು ಶಂಖವಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಿ ಪೂಜೆ ವೇಳೆ ದಕ್ಷಿಣಾಭಿಮುಖವಾದ ಶಂಖವನ್ನು ಪೂಜಿಸುವ ಮೂಲಕ ಸಂತೋಷ ಮತ್ತು ಸಮೃದ್ಧಿಯನ್ನು ನೀವು ಪಡೆಯಬಹುದು. ಶ್ರೀಯಂತ್ರವನ್ನು ಕೂಡ ಪೂಜೆ ಮಾಡಬೇಕು. ಶ್ರೀಯಂತ್ರವಿಲ್ಲದೆ ಲಕ್ಷ್ಮಿಯ ಪೂಜೆ ಅಪೂರ್ಣ.
ಮನೆಗೆ ಲಕ್ಷ್ಮಿ ಪ್ರವೇಶವಾಗಬೇಕೆಂದ್ರೆ ಮೊದಲು ನೀವು ನಿಮ್ಮ ಮನೆಯನ್ನು ಸ್ವಚ ಗೊಳಿಸಬೇಕು .ಹಾಗೂ ಹಬ್ಬದ ದಿನ ಮನೆಯ ಮುಖ್ಯ ದ್ವಾರಕ್ಕೆ ಹಚ್ಚ ಹಸಿರಿನ ಮಾವಿನ ಎಲೆಗಳ ತೋರಣ ಕಟ್ಟಬೇಕು, ಮನೆ ಮುಂದೆ ರಂಗೋಲಿ ಹಾಕಿ, ದೀಪಗಳನ್ನು ಬೆಳಗಬೇಕು. ಹಿಂದೂ ಧರ್ಮದಲ್ಲಿ ಪೂಜೆ ಅಂದ್ರೆ ವೀಳ್ಯದೆಲೆ ಇರಲೇಬೇಕು. ಲಕ್ಷ್ಮಿ ಪೂಜೆ ವೇಳೆ ವೀಳ್ಯದೆಲೆ ಬಳಕೆ ಮಾಡಿ. ವೀಳ್ಯದೆಲೆ ಮೇಲೆ ಸ್ವಸ್ತಿಕ್ ಗುರುತು ಹಾಕಿ. ತಾಯಿ ಲಕ್ಷ್ಮಿಯನ್ನು ಗಜಲಕ್ಷ್ಮಿ ಎಂದೂ ಕರೆಯುತ್ತಾರೆ. ಹಾಗಾಗಿ ನೀವು ಲಕ್ಷ್ಮಿ ಪೂಜೆ ವೇಳೆ ತಪ್ಪದೆ ಕಬ್ಬನ್ನು ಬಳಕೆ ಮಾಡಬೇಕು. ಲಕ್ಷ್ಮಿ ಪೂಜೆ ವೇಳೆ ಒಂದು ಪಾತ್ರೆಯಲ್ಲಿ ಕೊತ್ತಂಬರಿ ಬೀಜವನ್ನು ಹಾಕಿ, ದೇವಿ ಮುಂದೆ ಇಡಬೇಕು,ಇದರಿಂದ ಒಳ್ಳೆಯ ಫಲ ಸಿಗುತ್ತದೆ. ಇದನ್ನು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ಯಾವಾಗಲೂ ಕಮಲದ ಹೂವಿನ ಮೇಲೆ ಕುಳಿತುಕೊಳ್ಳುತ್ತಾಳೆ.ಹಾಗಾಗಿ ನೀವು ದೀಪಾವಳಿ ದಿನ ಲಕ್ಷ್ಮಿಗೆ ಕಮಲದ ಹೂವನ್ನು ಅರ್ಪಿಸಬೇಕು.
ಲಕ್ಷ್ಮಿ ಪೂಜೆಯ ವಿಧಾನ:
ಲಕ್ಷ್ಮಿ ಪೂಜೆ ಮಾಡುವಾಗ ಗಣೇಶನನ್ನು ಲಕ್ಷ್ಮಿಯ ಬಲಭಾಗದಲ್ಲಿಡುವುದು ಮರೆಯಬಾರದು .ಲಕ್ಷ್ಮಿ ದೇವಿ ಮತ್ತು ಗಣೇಶನ ಮೂರ್ತಿಯು ಪೂರ್ವಕ್ಕೆ ಮುಖಮಾಡಿರಬೇಕು. ನಂತರ ಕಲಶಸ್ಥಾಪನೆ ಮಾಡಬೇಕು, ಕಲಶದ ಮೇಲೆ ಅರ್ಧ ಕೆಂಪು ಬಟ್ಟೆಯಿಂದ ಸುತ್ತಿದ ತೆಂಗಿನ ಕಾಯಿಯನ್ನು ಇಡಬೇಕು. ಮತ್ತು ತುಪ್ಪದ ದೀಪಗಳನ್ನು ಬೆಳಗಬೇಕು .ಗಣೇಶನ ಮುಂದೆ ಸಣ್ಣ ದೀಪಗಳನ್ನು ಬೆಳಗಿಸಬೇಕು .ನಂತರ ನೀವು ಪೂಜೆಗೆ ನೀರು, ಮೌಲಿ ದಾರ, ಚಂದನ, ಅಕ್ಕಿ, ಧೂಪ,ಬತ್ತಿ, ಬೆಲ್ಲ,ಹೂವು, ನೈವೇದ್ಯ ಇತ್ಯಾದಿಗಳನ್ನು ಪೂಜೆ ಮಾಡುವ ಸ್ಥಳದಲ್ಲಿ ಇಡಬೇಕು. ಪೂಜೆಯನ್ನು ಆರಂಭಿಸುವ ಮುನ್ನ ಪವಿತ್ರೀಕರಣ ಮಾಡಿ. ನಂತರ ಎಲ್ಲಾ ದೀಪಗಳನ್ನು ಬೆಳಗಿ ದೇವರಿಗೆ ನಮಸ್ಕರಿಸಿ. ಮೊದಲ ಪುರುಷರು ಮತ್ತು ಮಹಿಳೆಯರು ಗಣೇಶನಿಗೆ, ಲಕ್ಷ್ಮಿಗೆ ಮತ್ತು ಇತರ ದೇವತೆಗಳಿಗೆ ಶೋಡಶೋಪಚಾರ ಪೂಜೆ, ಶ್ರೀಸೂಕ್ತ, ಲಕ್ಷ್ಮಿ ಸೂಕ್ತ ಮತ್ತು ಪುರುಷ ಶ್ರೀಸೂಕ್ತವನ್ನು ಪಠಿಸಿ ಆರತಿಯನ್ನು ಬೆಳಗಿಸಬೇಕು .ಲಕ್ಷ್ಮಿ ಪೂಜೆ ಮಾಡುವ ವೇಳೆ ದೇವಿಗೆ ನೀವು ಖೀರ್ ಅರ್ಪಿಸಬೇಕು ಲಕ್ಷ್ಮಿಗೆ ಪ್ರಿಯವಾದ ಸಿಹಿ ಖೀರ್ ಎನ್ನಲಾಗಿದೆ. ಒಣ ಹಣ್ಣುಗಳಿಂದ ಮಾಡಿದ ಖೀರ್ ಅರ್ಪಿಸುವುದು ಹೆಚ್ಚು ಶುಭಕರ.
2023ರ ನಂತರ ಈ ಮೂರು ರಾಶಿಗಳಿಗೆ ಶುರುವಾಗಲಿದೆ ಕೆಟ್ಟ ಸಮಯ ನಿಮ್ಮ ರಾಶಿಯು ಕೂಡ ಇದರಲ್ಲಿ ಇದ್ಯಾ …?