Friday, November 22, 2024

Latest Posts

Lal bagh: ನಾಳೆ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ಉದ್ಗಾಟಿಸಲಿರುವ ಸಿದ್ದರಾಮಯ್ಯ..!

- Advertisement -

ಬೆಂಗಳೂರು: ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಹಮ್ಮಿಕೊಂಡಿರುವ 214 ನೇ ಪ್ಲವರ್ ಶೋ ಆರಂಭವಾಗಲಿದ್ದು ನಾಳೆ ಸಾಯಂಕಾಲ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಗಾಟನೆ ಮಾಡಲಿದ್ದಾರೆ. ಸಾರ್ವಜನಿಕರಿಗೆ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಬಂದೋಬಸ್ತ ಮಾಡಲಾಗಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಲಕ್ಷಾಂತರ ಜನರು ಫವರ್ ಶೋ ವಿಕ್ಷಣೆಗೆ ಬರಲಿದ್ದು ಪ್ರೇಕ್ಷಕರಿಗೆ ಟ್ರಾಫಿಕ್ ಸಮಸ್ಯೆ ಆಗದಂತೆ ಪಾರ್ಕಿಂಗ್ ವ್ಯವಸ್ತೆ ಮಾಡಲಾಗಿದೆ. ಇನ್ನು ಪ್ರವೇಶ ಶುಲ್ಕದ ಬಗ್ಗೆ ಹೇಳುವುದಾದರೆ ದೊಡ್ಡವರಿಗೆ 70 ಚಿಕ್ಕ ಮಕ್ಕಳಿಗೆ 30 ರೂ ಇದ್ದು ಶಾಲಾ ಮಕ್ಕಳಿಗೆ ಉಚಿತ ವಿಕ್ಷಣೆಗೆ ಅನುವು ಮಾಡಿಕೊಡಲಾಗಿದೆ.

ವಿಧಾನಸೌಧ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪರಿಕಲ್ಪನೆಯಲ್ಲಿ ಈ ವರ್ಷದ ಫ್ಲವರ್ ಶೋ ಮೂಡಿ ಬರುತ್ತಿದೆ. ಇನ್ನು ಬರೋಬ್ಬರಿ 2 ಕೋಟಿ ಖರ್ಚುಮಾಡುತ್ತಿದ್ದು, 69 ಬಗೆಯ ಹೂಗಳು ಈ ಬಾರಿ ಫ್ಲವರ್ ಶೋ ಅಂದವನ್ನ ಹೆಚ್ಚಿಸಲಿವೆ.

ಈ ವರ್ಷ 10 ರಿಂದ 12 ಲಕ್ಷದಷ್ಟು ಜನರು ಬರುವ ಸಾಧ್ಯತೆ ಇದೆ. ಫಲಪುಷ್ಪ ಪ್ರದರ್ಶನದಲ್ಲಿ ಹಲವು ಕಲೆಗಳ ಸಾರುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಒಟ್ಟು 10 ದಿನಗಳ ಕಾಲ ಫ್ಲವರ್ ಶೋ ಇರಲಿದೆ.ನಾಲ್ಕು ಗೇಟುಗಳಿಂದಲೂ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಗಿದೆ.

Maluru : ಗ್ರಾಮ ಪಂಚಾಯಿತಿ ನಡೆ ವಿರುದ್ದ ಪ್ರತಿಭಟನೆ ಕೈಗೊಂಡ ಗ್ರಾಮಸ್ಥರು

Jagadish Shetter: ಪಕ್ಷ ಸಂಘಟನೆಯ ಕುರಿತು ಚರ್ಚಿಸಲು ದೆಹಲಿಗೆ ಜಗದೀಶ್​ ಶೆಟ್ಟರ್.

Arun Kumar Puttila : ಉಪ್ಪಿನಂಗಡಿ ಹೆದ್ದಾರಿ ಕಾಮಗಾರಿಯಿಂದ ದುರ್ನಾತ ಸಮಸ್ಯೆ: ಅರುಣ್ ಪುತ್ತಿಲ ಭೇಟಿ ನಂತರ ಎಚ್ಚೆತ್ತ ಅಧಿಕಾರಿಗಳು

- Advertisement -

Latest Posts

Don't Miss