Film News:
ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಕಳೆದ ಒಂದೂವರೆ ತಿಂಗಳ ಹಿಂದೆ, ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ಜೊತೆಗಿನ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಆಕೆಯೊಂದಿಗೆ ಡೇಟಿಂಗ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಸುಷ್ಮಿತಾ ಜೊತೆಗೆ ತಾವು ಅತೀ ಸಲುಗೆಯಿಂದ ಇರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು.
ಸುಷ್ಮಿತಾ ಜೊತೆ ತಾವು ಡೇಟಿಂಗ್ ಮಾಡುತ್ತಿರುವ ವಿಷಯವನ್ನು ಮೋದಿ ಬಹಿರಂಗ ಪಡಿಸುತ್ತಿದ್ದಂತೆಯೇ ಸುಷ್ಮಿತಾ ವಿದೇಶಕ್ಕೆ ಹಾರಿದ್ದಾರೆ. ತಮ್ಮ ನಡುವೆ ಅಂಥದ್ದೇನೂ ಇಲ್ಲ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ, ಮೋದಿ ಪೋಸ್ಟ್ ಮಾಡಿದ್ದ ಫೋಟೋಗಳು ಹಲವು ಅನುಮಾನಗಳಿಗೆ ಕಾರಣವಾದವು. ಡೇಟಿಂಗ್ ಮಾಡದೇ ಅಷ್ಟೊಂದು ಕ್ಲೋಸ್ ಆಗಿರಲು ಸಾಧ್ಯವೆ? ಎಂದು ಹಲವರು ಪ್ರಶ್ನೆ ಮಾಡಿದ್ದರು. ಆದರೂ, ಮೋದಿ ತಮ್ಮ ನಿಲುವಿಗೆ ಬದ್ಧರಾಗಿ ಉಳಿದರು.
ಮೊನ್ನೆಯಷ್ಟೇ ಸುಷ್ಮಿತಾ ಸೇನ್ ತಮ್ಮ ಮಾಜಿ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ವಿದೇಶದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದರು. ಮಾಜಿ ಬಾಯ್ ಫ್ರೆಂಡ್ ಜೊತೆ ಮತ್ತೆ ಸುಷ್ಮಿತಾ ಒಂದಾದರಾ ಎನ್ನುವ ಪ್ರಶ್ನೆಗಳು ಕೂಡ ಮೂಡಿದವು. ಈ ವಿಷಯ ಲಲಿತ್ ಮೋದಿಗೆ ಭಾರೀ ಮುಜುಗರ ಉಂಟು ಮಾಡಿದೆ ಅನಿಸತ್ತೆ. ಹಾಗಾಗಿಯೇ ಸುಷ್ಮಿತಾ ಅವರಿಂದ ಅಂತರ ಕಾಪಾಡಿಕೊಳ್ಳಲು ಅವರು ಮುಂದಾಗಿದ್ದಾರೆ ಎನ್ನಲಾಗಿದೆ.
ಮಾಜಿ ಬಾಯ್ ಫ್ರೆಂಡ್ ಜೊತೆ ಸುಷ್ಮಿತಾ ವಿದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಲಲಿತ್ ಮೋದಿ, ಆಕೆಯನ್ನು ಸೋಷಿಯಲ್ ಮೀಡಿಯಾದಿಂದ ಅನ್ ಫ್ರೆಂಡ್ ಮಾಡಿದ್ದಾರೆ. ಇನ್ಸ್ಟಾದಲ್ಲಿ ತಮ್ಮ ಹೆಸರಿನ ಮುಂದೆ ಸುಷ್ಮಿತಾ ಹೆಸರು ಹಾಕಿಕೊಂಡಿದ್ದನ್ನು ಕೂಡ ಅವರು ತಗೆದಿದ್ದಾರೆ. ಅಲ್ಲಿಗೆ ಸುಷ್ಮಿತಾ ಪ್ರೀತಿಗೆ ಎಳ್ಳು ನೀರು ಬಿಟ್ಟಂತಾಗಿದೆ ಎಂದು ಹೇಳಲಾಗಿದೆ.
ಇದು ಕಂಟೆಂಟ್ ಗೆ ಸಿಕ್ಕ ಮೊದಲ ಗೆಲುವು…”ಧೈರ್ಯಂ ಸರ್ವತ್ರ ಸಾಧನಂ” ಆಡಿಯೋ ಹಕ್ಕು ಭಾರೀ ಮೊತ್ತಕ್ಕೆ ಮಾರಾಟ