Thursday, July 24, 2025

Latest Posts

ಜಮೀನು ವಿವಾದ: ಕೋಲಾರದಲ್ಲಿ ತಹಶೀಲ್ದಾರ್ ಎದುರೇ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

- Advertisement -

ಕೋಲಾರ: ಜಮೀನು ವಿವಾದದ ಕಾರಣದಿಂದಾಗಿ, ತಾವು ಉಳುಮೆ ಮಾಡುತ್ತಿದ್ದಂತ ಭೂಮಿಗೆ ಸಾಗುವಳಿ ಚೀಟಿ ನೀಡಿದ ಕಾರಣ, ತಹಶೀಲ್ದಾರ್ ಎದುರೇ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ದೊಡ್ಡವಲ್ಲಬ್ಬಿ ಗ್ರಾಮದಲ್ಲಿ ನಡೆದಿದೆ.

ಕೋಲಾರ ತಾಲೂಕಿನ ದೊಡ್ಡವಲ್ಲಬ್ಬಿ ಗ್ರಾಮದ ರೈತ ಅಶ್ವಥ್ ನಾರಾಯಣ ಎಂಬುವರು ಇದೇ ಗ್ರಾಮದಲ್ಲಿನದ 3.16 ಎಕರೆ ಜಮೀನನ್ನು, ತಂದೆ ಮಾಜಿ ಯೋಧ ನಾಗಪ್ಪ ಅವರ ಕಾಲದಿಂದ ಉಳುಮೆ ಮಾಡಿಕೊಂಡು ಬರ್ತಾ ಇದ್ದರು.

ಹೀಗೆ ಉಳುಮೆ ಮಾಡುತ್ತಿದ್ದಂತ ಜಮೀನಿಗೆ ಸಾಗುವಳಿ ಚೀಟಿ ನೀಡೋದಕ್ಕೆ ಹಲವು ಭಾರೀ ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದರು. ಆದ್ರೇ ಅವರ ಜಮೀನಿಗೆ ದೊಡ್ಡವಲ್ಲಬ್ಬಿ ಗ್ರಾಮದ ಕೆಲ ಗ್ರಾಮಸ್ಥರು ತಕರಾರು ಅರ್ಜಿ ಸಲ್ಲಿಸಿದ್ದರು.

ಈ ಹಿನ್ನಲೆಯಲ್ಲೇ ಅಶ್ವಥ್ ಮಾರಾಯಣ ಅವರ ಜಮೀನಿಗೆ ಇಂದು ತಹಶೀಲ್ದಾರ್ ಸಾಗುವಳಿ ಚೀಟಿ ನೀಡುವ ಸಂಬಂಧ ಪರಿಶೀಲನೆಗಾಗಿ ಆಗಮಿಸಿದ್ದರು. ಆಗ ತಮಗೆ ಯಾವುದೇ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದಾಗಿ ತಹಶೀಲ್ದಾರ್ ನಾಗರಾಜ್ ಎದುರೇ ಮನನೊಂದು ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.

ರೈತ ಜಮೀನಿನನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೇ, ಕೂಡಲೇ ಅವರನ್ನು ತಹಶೀಲ್ದಾರ್ ನಾಗರಾಜ್ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ. ಅವರ ಆರೋಗ್ಯ ಸುಧಾರಿಸಿದೆ ಎಂಬುದಾಗಿ ತಿಳಿದು ಬಂದಿದೆ.

- Advertisement -

Latest Posts

Don't Miss