www.karnatakatv.net :ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಹೆದ್ದಾರಿಯಲ್ಲಿ ದಿಡೀರ್ ಭೂಕುಸಿತ ಸಂಭವಿಸಿದ್ದು ವಾಹನ ಸವಾರರು ಆತಂಕಗೊಂಡ ಘಟನೆ ನಡೆದಿದೆ.
ಚಾಮರಾಜನಗರ ಪಟ್ಟಣದ ಆರ್.ಟಿ. ಓ ರಸ್ತೆ ಬಳಿ ಇರುವ ಮೇಲುಸೇತುವೆ ಬಳಿಯ ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು ಚಾಮರಾಜನಗರ ಗುಂಡ್ಲುಪೇಟೆ ಹೆದ್ದಾರಿಯು ಕೆಲ ಕಾಲ ರಸ್ತೆ ಸಂಚಾರ ಅಸ್ಯವ್ಯಸ್ತಗೊಂಡಿತು.
ಹೆದ್ದಾರಿ ರಸ್ತೆಯಲ್ಲಿ ಸುಮಾರು 40 ಅಡಿ ಭೂಕುಸಿತದಿಂದ ಆತಂಕಗೊಂಡ ಕಾರಣ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಆತಂಕಗೊಂಡ್ರು. ಏಕಾಏಕಿ ರಸ್ತೆ ಕುಸಿದ ಪರಿಣಾಮ ವಾಹನ ಸವಾರರು ಸಹಜವಾಗಿಯೇ ಆತಂಕಗೊಂಡಿದ್ದಾರೆ.
ರಸ್ತೆಯ ಮಧ್ಯ ಭಾಗದಲ್ಲಿಯೇ ಕುಸಿತವುಂಟಾಗಿ ಭಾರೀ ವಾಹನಗಳ ಓಡಾಟದಿಂದ ಮತ್ತಷ್ಟು ಅನಾಹುತ ಎದುರಾಗಬಹುದು ಅನ್ನೋ ಆತಂಕ ಶುರುವಾಗಿದೆ. ಇನ್ನು ರಸ್ತೆಯಲ್ಲಿ ಕಂಡುಬಂದ ಕಂದಕವನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಹೀಗಾಗಿ ಈ ಹೆದ್ದಾರಿಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಪ್ರಸಾದ್ , ಕರ್ನಾಟಕ ಟಿವಿ- ಚಾಮರಾಜನಗರ