ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಯಾವುದೇ ಒಂದು ವ್ಯವಸ್ಥೆಯೂ ಸರಿಯಾಗಿಲ್ಲ. ಒಂದಿಲ್ಲೊಂದು ರೀತಿಯಲ್ಲಿ ಅವ್ಯವಸ್ಥೆಯಿಂದ ಸುದ್ಧಿಯಾಗಿತ್ತಲೇ ಇದೆ. ಇಲ್ಲಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಅಂಧ ದರ್ಬಾರಿನಿಂದ ಆಡಿದ್ದೇ ಆಟ ಆಗಿದೆ. ಬೇಜವಾಬ್ದಾರಿ ಕಮೀಷನರ್ ಹಾಗೂ ಅಧಿಕಾರಿ ವರ್ಗದಿಂದ ಇಲ್ಲಿ ಹೇಳುವವರು ಇಲ್ಲ ಕೇಳುವವರೂ ಇಲ್ಲ.
ಅವಳಿನಗರದಲ್ಲಿ ಮೃತಪಟ್ಟವರಿಗೆ ಅಂತಿಮ ಸಂಸ್ಕಾರಕ್ಕೆ ಮಹಾನಗರ ಪಾಲಿಕೆಯಿಂದ ಶ್ರದ್ಧಾಂಜಲಿ ವಾಹನ ಬಿಡಲಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ವಾಹನ ನಿಂತ ಜಾಗೆಯಲ್ಲಿಯೇ ಕೊಳೆಯುತ್ತಿದೆ. ಅಲ್ಲದೇ ರವಿ ಆ್ಯಂಡ್ ಜಯಾ ಬೋಪಲಾಪೂರ ಫೌಂಡೇಶನ್ ನ್ಯೂಯಾರ್ಕ್ ನಿಂದ ಮತ್ತೊಂದು ಮುಕ್ತಿವಾಹನ ನೀಡಲಾಗಿದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಜನಪ್ರತಿನಿಧಿಗಳ ದಿವ್ಯನಿರ್ಲ್ಯಕ್ಷದಿಂದ ಇಂತಹ ವ್ಯವಸ್ಥೆ ಕೂಡ ಉಪಯೋಗಕ್ಕೆ ಬಾರದೇ ನಿಂತ ಜಾಗೆಯಲ್ಲಿ ತುಕ್ಕು ಹಿಡಿಯುತ್ತಿದೆ. ಜನರಿಗೆ ಅದರಲ್ಲೂ ಮಧ್ಯಮ ವರ್ಗದ ಹಾಗೂ ಬಡವರಿಗೆ ಅನುಕೂಲವಾಗಲಿ ಅಂತ ಶ್ರದ್ಧಾಂಜಲಿ ವಾಹನವನ್ನು ಬಿಡಲಾಗಿದೆ. ಆದರೆ ಇವುಗಳ ಬಳಕೆ ಮಾತ್ರ ಆಗುತ್ತಿಲ್ಲ.
ಇನ್ನೂ ಯಾವುದೇ ಕೆಲಸ ಇಟ್ಟುಕೊಂಡು ಪಾಲಿಕೆಗೆ ಬಂದರೂ ಇಲ್ಲಿನ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾರ್ವಜನಿಕರ ಚಪ್ಪಲಿ ಸವೇಸುತ್ತಾರೆ ವಿನಃ ಯಾವುದೇ ಜನರಿಗೆ ಅನುಕೂಲದ ಕೆಲಸವಂತೂ ಮಾಡುತ್ತಿಲ್ಲ. ಕೊಡುಗೆ ಕೊಟ್ಟವರಿಗೂ ಕೊಡಬಾರದಿತ್ತು ಎಂಬುವಂತೇ ಮಾಡುತ್ತಿದ್ದಾರೆ. ಜನರಿಗೆ ಮುಕ್ತಿ ನೀಡುವ ವಾಹನಗಳೇ ಮೂಲೆಗುಂಪಾಗಿವೆ.
Benjamin Netanyahu : ಪ್ಯಾಲೆಸ್ತೀನ್ -ಇಸ್ರೇಲ್ ನಡುವೆ ಯುದ್ಧ : ಅಖಾಡಕ್ಕಿಳಿದ ಪ್ರಧಾನಿ
ಬಸ್ ನಲ್ಲಿ ಬಿಟ್ಟು ಹೋಗಿದ್ದ 3ಲಕ್ಷ ಮೌಲ್ಯದ ಚಿನ್ನಾಭರಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಕಂಡಕ್ಟರ್..!!
ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ಪರಭಾರೆ :ನಗರಸಭೆ ನಡೆ ಖಂಡಿಸಿ ಪ್ರತಿಭಟನೆ..!