Friday, July 11, 2025

Latest Posts

ತಡರಾತ್ರಿ ಆಟೋ ಡ್ರೈವರ್‌ ಮನೆಯಲ್ಲಿ ಊಟ ಮಾಡಿದ ದೆಹಲಿ ಮುಖ್ಯಮಂತ್ರಿ..!

- Advertisement -

Dehali News:

ಆಮ್ ಆದ್ಮಿ ಪಕ್ಷದ ಸಂಚಾಲಕ,ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಅಹಮದಾಬಾದ್‌ನಲ್ಲಿ ಆಟೋ ಡ್ರೈವರ್‌ಗೆ ನೀಡಿದ ಭರವಸೆಯನ್ನು ಉಳಿಸಿಕೊಂಡರು. ಮತ್ತು ತಡರಾತ್ರಿ ಅವರ ಮನೆಗೆ ತೆರಳಿ ಊಟ ಮಾಡಿದರು.

ಆದರೆ, ಆಟೋ ಚಾಲಕನ ಮನೆಗೆ ತಲುಪುವ ಮುನ್ನವೇ ಸಿಎಂ ಕೇಜ್ರಿವಾಲ್ ಮತ್ತು ಅಹಮದಾಬಾದ್ ಪೊಲೀಸರ ನಡುವೆ ಹೈವೋಲ್ಟೇಜ್ ಡ್ರಾಮಾ ನಡೆದಿದೆ. ಅರವಿಂದ್ ಕೇಜ್ರಿವಾಲ್ ಕೇಜ್ರಿವಾಲ್ ಮುಂದೆ ಹೋಗದಂತೆ ಪೊಲೀಸರು ತಡೆದಿದ್ದರು. ವಾಸ್ತವವಾಗಿ, ಅಹಮದಾಬಾದ್ ಪೊಲೀಸರು ಅರವಿಂದ್ ಕೇಜ್ರಿವಾಲ್ ಅವರನ್ನು ಆಟೋ ಚಾಲಕ ವಿಕ್ರಮ್ ದಾಂತನಿಯ ಮನೆಗೆ ಹೋಗದಂತೆ ತಡೆದಿದ್ದರು.

ಭದ್ರತಾ ಕಾರಣಗಳನ್ನು ಉಲ್ಲೇಖಿಸಿ, ಪ್ರೋಟೋಕಾಲ್ ಪ್ರಕಾರ ಅರವಿಂದ್ ಕೇಜ್ರಿವಾಲ್ರನ್ನು ತಡೆಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಈ ಸಂರ‍್ಭದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಗುಜರಾತ್ ಪೊಲೀಸ್ ಅಧಿಕಾರಿಗಳ ನಡುವೆ ತೀವ್ರ ವಾಗ್ವಾದವೂ ನಡೆಯಿತು.ಆದಾಗ್ಯೂ, ಇದರ ಹೊರತಾಗಿಯೂ, ಅರವಿಂದ್ ಕೇಜ್ರಿವಾಲ್ ಬಿಗಿ ಭದ್ರತೆಯ ನಡುವೆ ಆ ಆಟೋ ಚಾಲಕನ ಮನೆಗೆ ತಲುಪಿದರು ಮತ್ತು ಆಹಾರವನ್ನೂ ಸೇವಿಸಿದರು ಎಂದು ತಿಳಿದು ಬಂದಿದೆ.

ವಿಧಾನಮಂಡಲದ ಮಳೆಗಾಲದ 2ನೇ ದಿನದ ಅಧಿವೇಶನ

ನಿರ್ಮಾಣವಾಗಲಿದೆಯಾ ಪ್ರವೀಣ್ ನೆಟ್ಟಾರ್ ಕನಸಿನ ಮನೆ..?! ಕಟೀಲ್ ಭರವಸೆ ಮಾತೇನು..?!

ಪಶ್ಚಿಮ ಘಟ್ಟ ಮಳೆಗೆ ಉಕ್ಕಿ ಹರಿದ ಸಪ್ತ ನದಿಗಳು

- Advertisement -

Latest Posts

Don't Miss