Sunday, September 8, 2024

Latest Posts

ಜಿ-20 ಶೃಂಗಸಭೆಯಲ್ಲಿ ಕೊರೊನಾ ಲಸಿಕೆಯಬಗ್ಗೆ ಹೇಳುವ ಮೂಲಕ ಚಾಲನೆ ನೀಡಿದರು..!

- Advertisement -

www.karnatakatv.net : ಜಿ-20 ಶೃಂಗಸಭೆಯನ್ನು ಇಟಲಿಯ ಪ್ರಧಾನಿ ಮಾರಿಯೋ ಡ್ರಾಗಿ ಬಡ ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಲಸಿಕೆಯನ್ನು ಪಡೆಯುವಂತಾಗಬೇಕು ಎಂದು ಈ ಶೃಂಗಸಭೆಯನ್ನು ಚಾಲನೆ ಮಾಡಿದರು.

ಕೊವಿಡ್ ಲಸಿಕೆ ಅಂತರ ನೈತಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಡ್ರಾಗಿ ಅವರು, ವಿಶ್ವದ ಬಡ ದೇಶಗಳಲ್ಲಿ ಕೇವಲ ಶೇ 3 ರಷ್ಟು ಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದು, ಶ್ರೀಮಂತ ರಾಷ್ಟ್ರಗಳಲ್ಲಿ ಶೇ 70 ರಷ್ಟು ಜನರು ಕೊವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ ಎಂದು ಹೇಳಿದರು. ಕಡಿಮೆ-ಆದಾಯದ ದೇಶಗಳಿಗೆ ಹೆಚ್ಚಿನ ಲಸಿಕೆ ಪೂರೈಸಲು ಸಾಮೂಹಿಕ ಸಹಾಯಕ್ಕಾಗಿ ಶೃಂಗಸಭೆಯ ಮೂಲಕ ಡ್ರಾಗಿ ಕರೆ ನೀಡಿದರು. ಡ್ರಾಗಿ ಅವರು ರೋಮ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಜಿ-20 ಶೃಂಗಸಭೆಯ ಆತಿಥ್ಯ ವಹಿಸಿದ್ದಾರೆ.

ಇವತ್ತಿನ ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆ, ಜಾಗತಿಕ ಕನಿಷ್ಠ ಕಾರ್ಪೋರೇಟ್ ತೆರಿಗೆ ದರ, ಕೊವಿಡ್-19 ಸಾಂಕ್ರಾಮಿಕದಿoದ ಆರೋಗ್ಯದಲ್ಲಿ ಚೇತರಿಕೆ, ಜಾಗತಿಕ ಅಭಿವೃದ್ಧಿ ಇತ್ಯಾದಿ ವಿಚಾರಗಳನ್ನು ಇಂದು ನಾಯಕರು ವ್ಯಾಪಕವಾಗಿ ಚರ್ಚಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಜಿ-20 ನಾಯಕರ ಫೋಟೋವನ್ನು ಶೇರ್ ಮಾಡಿಕೊಂಡಿದೆ. ಜಾಗತಿಕ ಒಳಿತಿಗಾಗಿ ಇರುವ ಅತಿಮುಖ್ಯವಾದ ವೇದಿಕೆಯಾದ ಜಿ-20 ಸಂಘಟನೆಯ ನಾಯಕರು ಇಂದು ರೋಮ್ ನಲ್ಲಿ ಭೇಟಿಯಾದರು ಎಂದು ಹೇಳಿದೆ.

- Advertisement -

Latest Posts

Don't Miss