Political News: ಸತೀಶ್ ಜಾರಕಿಹೊಳಿ ಕೆಂಗಣ್ಣಿಗೆ ಗುರಿಯಾಗಿರುವ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಮತ್ತು ಮಹೇಂದ್ರ ತಮ್ಮಣ್ಣವರ್ ಗೌಪ್ಯ ಮಾತುಕತೆ ನಡೆಸಿದ್ದಾರೆ.
ಅಥಣಿಯಲ್ಲಿರುವ ಲಕ್ಷ್ಮಣ್ ಸವದಿ ಮನೆಗೆ ಮಹೇಂದ್ರ ತಮ್ಮಣ್ಣವರ್ ಭೇಟಿ ನೀಡಿ, ಮಾತುಕತೆ ನಡೆಸಿದ್ದು, ಈ ಮಾತುಕತೆ ಬಗ್ಗೆ ಇಬ್ಬರೂ ನಾಯಕರು ಎಲ್ಲಿಯೂ ಮಾತನಾಡಿಲ್ಲ.
ಇನ್ನು ಮೊನ್ನೆಯಷ್ಟೇ ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಸತೀಶ್ ಜಾರಕಿಹೊಳಿ, ಸಭೆ ನಡೆಸಿದ್ದು, ಈ ಸಭೆಯಲ್ಲಿ ಅಥಣಿಯ ಶಾಸಕರು, ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಲಿಲ್ಲ. ಈ ಲೋಕಸಭೆ ಚುನಾವಣೆ ಎಲ್ಲ ನಾಯಕರ ಒಂದಾಗುವುದಕ್ಕೆ ಒಂದು ನೆಪವಾಗಿತ್ತು. ಆದರೆ ಅಥಣಿ ಶಾಸಕರು ಅದನ್ನು ಕಳೆದುಕೊಂಡಿದ್ದಾರೆಂದು ಸತೀಶ್ ಜಾರಕಿಹೊಳಿ, ಪರೋಕ್ಷವಾಗಿ ಸವದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇನ್ನು ಸತೀಶ್ ಜಾರಕಿಹೊಳಿ ಆರೋಪಕ್ಕೆ ಉತ್ತರಿಸಿರುವ ಸವದಿ, ನಾನು ಮುಂದೊಂದು ದಿನ ಅವರ ಆರೋಪಕ್ಕೆ ಉತ್ತರಿಸುತ್ತೇನೆ ಎಂದಿದ್ದಾರೆ.