ಬೆಳಗಾವಿ: ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರಕ್ಕೆ ಕಾಂಗ್ರೆಸ್ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಚಿವೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡ್ರೆ ಸ್ವಾಗತಿಸುತ್ತೇನೆ. ಎಲೆಕ್ಷನ್ ಯಾವ ರೀತಿ ಮಾಡಬೇಕು ಎಂಬುದು ನಮಗೆ ಗೊತ್ತಿದೆ, ಜನರ ಆಶೋತ್ತರಗಳೇನು ಎಂಬುದು ನಮಗೆ ಗೊತ್ತು ಈಗಾಗಲೆ ಕೊಟ್ಟಿರುವ ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಒಳ್ಳೆಯ ರೀತಿಯಲ್ಲಿ ಸರ್ಕಾರ ನಡೆಸುತ್ತಿದ್ದೇವೆ. ಆದರೆ ಅವರ ಮುಖವಾಡ ಕಳಚಿತು ಎಂದು ಜೆಡಿಎಸ್ ವಿರುದ್ಧ ಆಕ್ರೋಶ ಹೊರಹಾಕಿದರು.
ಈ ಹಿಂದೆ ಜೆಡಿಎಸ್ ಯುಪಿಎ ಒಕ್ಕೂಟದಲ್ಲಿತ್ತು ಎಂಬ ಪ್ರಶ್ನೆಗೆ ಸಚಿವೆ ಅದರ ಬಗ್ಗೆ ಹಿರಿಯರು, ದೊಡ್ಡವರು ಮಾತನಾಡುತ್ತಾರೆ ಎಂದಿ ಜಾರಿಕೊಂಡಿರು.
ಬಿಜೆಪಿ-ಜೆಡಿಎಸ್‌ನವರು ಕಾಂಗ್ರೆಸ್ ಸೇರ್ಪಡೆಯ ಆಸಕ್ತಿಯಿಂದ ಮೈತ್ರಿ ಮಾಡಿಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆಗೆ ಸಚಿವೆ ನನಗೆ ಯಾರ್ಯಾರು ಕಾಂಗ್ರೆಸ್ ಗೆ ಬರುತ್ತಿದ್ದಾರೆ ಯಾರಿಗೆಲ್ಲ ಪಕ್ಷದ ಮೇಲೆ ಭಯ ಇದೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೆಬ್ಬಾಳ್ಕರ್ ಉತ್ತರಿಸಿದರು.
Drought: ನಮ್ಮ ಪತ್ರಕ್ಕೆ ಪ್ರಧಾನಿ ಉತ್ತರ ಕೊಡದಿದ್ದರೆ ಬರಗಾಲ ಘೋಷಣೆ: ಸಿಎಂ