Thursday, July 24, 2025

Latest Posts

ಅಲ್ಲಿಯೂ ಎಲೆಕ್ಷನ್ ಸ್ಕ್ಯಾಮ್ : ರಾಹುಲ್‌ ಗಾಂಧಿ ಸ್ಫೋಟಕ ಆರೋಪ!

- Advertisement -

ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ಎನ್‌ಡಿಎ ಮೈತ್ರಿಕೂಟ ಸದ್ಯ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿದೆ. ಆದರೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ವಿಪಕ್ಷಗಳು ಬಿಜೆಪಿ ಹಾಗೂ ಎನ್‌ಡಿಎ ವಿರುದ್ಧ ಚುನಾವಣಾ ಅಕ್ರಮದ ಆರೋಪಗಳನ್ನು ಮಾಡಿದ್ದವು. ಆದರೆ ಆ ವೇಳೆ ಅದು ಅಷ್ಟೊಂದು ಪ್ರಭಾವ ಬೀರಿರಲಿಲ್ಲ.

ಇದೀಗ ಲೋಕಸಭಾ ಚುನಾವಣೆಯಲ್ಲಿನ ಅಕ್ರಮಗಳ ಕುರಿತು ಲೋಕಸಭೆಯ ವಿಪಕ್ಷನಾಯಕ ರಾಹುಲ್‌ ಗಾಂಧಿ ಸಂಸತ್ತಿನ ಹೊರಗಡೆ ಮಾತನಾಡಿದ್ದಾರೆ. ಈ ವೇಳೆ, ಚುನಾವಣಾ ಅಕ್ರಮ ಇದು ಕೇವಲ ಬಿಹಾರದ ಮಾತ್ರವಲ್ಲ, ಮಹಾರಾಷ್ಟ್ರದಲ್ಲೂ ದೊಡ್ಡ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈಗಾಗಲೇ ನಾವು ಚುನಾವಣಾ ಆಯೋಗಕ್ಕೆ ವೋಟರ್‌ ಲಿಸ್ಟ್‌ ತೋರಿಸುವಂತೆ ಒತ್ತಾಯಿಸಿದ್ದೇವೆ. ಆದರೂ ಅದನ್ನು ತೋರಿಸಲಿಲ್ಲ, ವಿಡಿಯೋ ಕೇಳಿದ್ದೇವೆ, ಅದಕ್ಕೆ ಸಂಬಂಧಿಸಿದ ಕಾನೂನನ್ನು ಬದಲಾಯಿಸಿದ್ದಾರೆ. ಮಹಾರಾಷ್ಟ್ರದಲ್ಲಿ 1 ಕೋಟಿ ಹೊಸ ಮತದಾರರು ದಾಖಲಾಗಿದ್ದಾರೆ ಇದು ಚುನಾವಣೆಯಲ್ಲಿನ ಕಳ್ಳಾಟವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ರೆಡ್ಡಿ – ರಾಮುಲು ಮೇಲೆ ಸೋಮಣ್ಣ ಕೋಪವೇಕೆ?

ಇನ್ನೂ ಕರ್ನಾಟಕದಲ್ಲಿಯೂ ನಾವು ರಿಸರ್ಚ್‌ ಮಾಡಿದ್ದೇವೆ. ಅಲ್ಲಿಯೂ ಬೃಹತ್‌ ಪ್ರಮಾಣದಲ್ಲಿ ಕಳ್ಳಾಟವನ್ನು ಪತ್ತೆ ಹಚ್ಚಿದ್ದೇವೆ. ಈ ಬಗ್ಗೆ ನಾವು ಬ್ಲ್ಯಾಕ್‌ ಹಾಗೂ ವೈಟ್‌ನಲ್ಲಿಯೂ ಚುನಾವಣಾ ಆಯೋಗಕ್ಕೂ ತೋರಿಸುತ್ತೇವೆ. ಮಾಧ್ಯಮಗಳ ಎದುರೂ ಇಡುತ್ತೇವೆ. ಇದೆಲ್ಲ ಹೇಗೆ ನಡೆಯುತ್ತಿದೆ ಎಂಬುವುದರ ಬಗ್ಗೆ ನಮಗೆ ಗೊತ್ತಿದೆ ಎಂದು ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.

ಆದರೆ ನಾವು ರಿಸರ್ಚ್‌ ಮಾಡುವಾಗ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇವು. ಅದರಲ್ಲಿ ಆಳವಾಗಿ ಅವಲೋಕಿಸಿದಾಗ ಏನು ಸಮಸ್ಯೆಯಿದೆ ಎನ್ನುವುದು ಗೊತ್ತಾಯಿತು. ಕಾಗದ ಹಾಳೆಯಲ್ಲಿ ಒಂದು ವೋಟರ್‌ ಲಿಸ್ಟ್‌ ಬರುತ್ತದೆ. ಅದರಲ್ಲಿನ ಹೆಸರುಗಳನ್ನು ಕೂಲಂಕುಷವಾಗಿ ಪರೀಕ್ಷಿಸುತ್ತಿರಲಿಲ್ಲ ಎಂದು ಚುನಾವಣಾ ಪ್ರಕ್ರಿಯೆಯ ಲೋಪಗಳನ್ನು ಎತ್ತಿ ತೋರಿಸಿದ್ದಾರೆ.

ಆದರೆ ಆ ಒಂದು ಕ್ಷೇತ್ರದಲ್ಲಿನ ಎಲ್ಲಾ ವೋಟರ್‌ ಲಿಸ್ಟ್‌ ಪಡೆದು ಆರು ತಿಂಗಳ ಅವಧಿಯಲ್ಲಿ ಅವುಗಳನ್ನು ಡಿಜಿಟಲೀಕರಣ ಮಾಡಿದ್ದೇವು. ಆಗ ನಿಜವಾಗಿಯೂ ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ನಮಗೆ ತಿಳಿದು ಬರುತ್ತದೆ. ಯಾರು ಮತ ಚಲಾವಣೆ ಮಾಡುತ್ತಾರೆ? ಹೇಗೆ ಮತ ಚಲಾವಣೆ ಮಾಡಲಾಗುತ್ತದೆ ಹಾಗೂ ನೂತನ ಮತದಾರರು ಹೇಗೆ ಉತ್ಪತ್ತಿಯಾಗುತ್ತಾರೆ. ಈ ಎಲ್ಲದರ ಬಗ್ಗೆ ನಾವು ಸಂಪೂರ್ಣವಾಗಿ ವಿವರಗಳನ್ನು ಕಲೆ ಹಾಕಿದ್ದೇವೆ ಎಂದು ರಾಹುಲ್‌ ಗಾಂಧಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಆದರೆ ಇದೀಗ ನಮ್ಮ ರಿಸರ್ಚ್‌ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ತಿಳಿದುಕೊಂಡಿದೆ. ಹೀಗಾಗಿ ಬಿಹಾರದಲ್ಲಿ ನೂತನ ಪದ್ದತಿಯನ್ನು ಅನುಸರಿಸಲು ಮುಂದಾಗಿದೆ. ಹಾಲಿ ವೋಟರ್‌ ಲಿಸ್ಟ್‌ ಡಿಲೀಟ್ ಮಾಡಿ, ಹೊಸದಾಗಿ ಪಟ್ಟಿ ತಯಾರಿಸಲಾಗುತ್ತಿದೆ. ಇದೆಲ್ಲ ನೋಡಿದಾಗ ಭಾರತದಲ್ಲಿ ಚುನಾವಣಾ ಕಳ್ಳಾಟಗಳು, ಅಕ್ರಮಗಳು ನಡೆಯುತ್ತಿವೆ ಎನ್ನುವುದು ಗೊತ್ತಾಗುತ್ತದೆ. ಈ ವಾಸ್ತವತೆಯನ್ನು ನಾವು ಅರಿತಿದ್ದೇವೆ ಎಂದು ಹೇಳಿದ್ದಾರೆ ಎಂದು ಕಾಂಗ್ರೆಸ್‌ ಸಂಸದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ಪ್ರಮುಖವಾಗಿ ರಾಹುಲ್‌ ಗಾಂಧಿ ಆರೋಪದಂತೆ ರಾಜ್ಯದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿಯೇ ಈ ರೀತಿಯ ಕಳ್ಳಾಟಗಳು ನಡೆದಿರಬಹುದಾ?. ಹೀಗೊಂದೂ ಪ್ರಶ್ನೆ ಮೂಡುತ್ತಿದೆ. ಯಾಕೆಂದರೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಡಾ. ಸಿ.ಎನ್.‌ ಮಂಜುನಾಥ ಸ್ಪರ್ಧಿಸಿದ್ದರು. ಅಲ್ಲದೆ ಕಾಂಗ್ರೆಸ್‌ನಿಂದ ಡಿಕೆ ಸುರೇಶ್‌ ಕಣದಲ್ಲಿದ್ದರು. ತೀವ್ರ ಜಿದ್ದಾ ಜಿದ್ದಿನ ಕಣವಾಗಿದ್ದ ಈ ಕ್ಷೇತ್ರದಲ್ಲಿ ಗೆಲುವಿಗಾಗಿ ಉಭಯ ಪಕ್ಷಗಳು ಇನ್ನಿಲ್ಲದ ಕಸರತ್ತುಗಳಿಗೆ ಮುಂದಾಗಿದ್ದವು. ಹೀಗಾಗಿಯೇ ಗೆಲುವಿಗೆ ಜೋತು ಬಿದ್ದು ಅಕ್ರಮಗಳು ನಡೆದಿವೆಯಾ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ.

- Advertisement -

Latest Posts

Don't Miss