ಚಾಮರಾಜನಗರ: ತನ್ನ ಹುಟ್ಟು ಹಬ್ಬದ ದಿನದಂದೇ, ಮರಣಪತ್ರವನ್ನು ಬರೆದಿಟ್ಟು, ಉಪನ್ಯಾಸಕಿಯೊಬ್ಬರು ಸಾವನ್ನಪ್ಪಿರೋ ಘಟನೆ, ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರದ ಜೆಎಸ್ಎಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಂತ ಚಂದನಾ (26) ಎಂಬುವರೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವಂತವರಾಗಿದ್ದಾರೆ.
ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ನಿವಾಸಿಯಾಗಿದ್ದಂತ ಚಂದನಾ, ಚಾಮರಾಜನಗರ ಜೆಎಸ್ಎಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು. ಕಾಲೇಜು ಹಾಸ್ಟೆಲ್ ನಲ್ಲಿಯೇ ವಾಸವಾಗಿದ್ದರು. ಇಂತಹ ಅವರು ಹಾಸ್ಟೆಲ್ ನಲ್ಲಿ ಹುಟ್ಟು ಹಬ್ಬದ ದಿನವೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ




