- Advertisement -
www.karnatakatv.net :ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ರೆಸಾರ್ಟ್ನೊಳಕ್ಕೆ ಚಿರತೆಯೊಂದು ಬಂದು ಅಡ್ಡಾಡಿ ಮತ್ತೆ ಕಾಡಿನತ್ತ ಹೊರಹೋಗಿರುವ ರೋಮಾಂಚಕ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪದ ವಿಂಡ್ ಫ್ಲವರ್ ರೆಸಾರ್ಟ್ನಲ್ಲಿ ನಡೆದಿದೆ.
ರೆಸಾರ್ಟ್ನಲ್ಲಿರುವ ರಿಸೆಪ್ಷನ್ ಬಳಿ ಚಿರತೆ ಅಡ್ಡಾಡಿ ನೌಕರರ ಸದ್ದಿನಿಂದ ಹೊರಕ್ಕೆ ಓಡಿ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ. ಏನೇ ಆಗಲಿ ರೆಸಾರ್ಟ್ ಮಾಲೀಕರು ಇತ್ತಾ ಪ್ರವಾಸಿಗರ ಹಿತದೃಷ್ಟಿಯಿಂದ ಹೆಚ್ಚು ಭದ್ರತೆಯನ್ನು ಮಾಡಿಕೊಳ್ಳಬೇಕಾಗಿದೆ.
ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ
- Advertisement -