Hubli News: ಹುಬ್ಬಳ್ಳಿ: ಮುಡಾ ವಿಚಾರವಾಗಿ ನ್ಯಾಯಾಧೀಶರು ರಾಜ್ಯಪಾಲರ ನಡೆ ಎತ್ತಿ ಹಿಡಿದಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಮೊಂಡತನ ಬಿಟ್ಟು ರಾಜೀನಾಮೆ ನೀಡಲಿ ಎಂದು ಸಂಸದ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.
ಮುಡಾ ಹಗರಣ ಕುರಿತು ನ್ಯಾಯಾಧೀಶರ ತೀರ್ಪು ತುಂಬಾ ಕುತೂಹಲ ಮೂಡಿಸಿತ್ತು. ಇಂದು ನ್ಯಾಯಾಧೀಶರು ತೀರ್ಪು ಪ್ರಕಟ ಮಾಡಿ ಸಿಎಂ ರೀಟ್ ಅರ್ಜಿ ವಜಾ ಮಾಡಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ನೇರ ಇನ್ವಾಲ್ಮೇಮಟೆ ಇದೆ. ಸಿಎಂ ಅವರ ಪತ್ನಿಯವರ ಇನ್ವಾಲ್ಮೇಂಟ್ ಇದೆ. ಸಿಎಂ ಅವರ ರೀಟ್ ಅರ್ಜಿ ವಜಾ ಆಗಿದೆ. ಹೈಕೋರ್ಟ್ ಆದೇಶದ ಪ್ರಕಟ ಹಿನ್ನೆಲೆ ಈಗ ತನಿಖೆ ಪ್ರಾರಂಭಿಸಬೇಕಾಗುತ್ತದೆ. ಸಿಎಂ ಸ್ಥಾನದಲ್ಲಿರುವವರ ಮೇಲೆ ಎಫಐಆರ್ ದಾಖಲು ಮಾಡಿ ತನಿಖೆ ಆಗಬೇಕಾಗುತ್ತದೆ. ಇಂತಹ ಸಮಯದಲ್ಲಿ ಸಿಎಂ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.
ನೈತಿಕಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಿದ್ದರೆ ಎಲ್ಲರು ಸ್ವಾಗತಿಸುತ್ತಾರೆ. ಅದನ್ನು ಬಿಟ್ಟು ಸಿದ್ದರಾಮಯ್ಯನವರು ರಾಜೀನಾಮೆ ನೀಡುವುದಿಲ್ಲ ಅಂತಾ ಮೊಂಡತನ ತೋರುವುದು ಸರಿಯಲ್ಲ. ನ್ಯಾಯಾಲಯದಲ್ಲಿ ಸಿಎಂ ಅವರಿಗೆ ಹೋರಾಟಕ್ಕೆ ಅವಕಾಶವಿದೆ, ಮಾಡಲಿ. ಮುಡಾ ನಿಷ್ಪಕ್ಷಪಾತ ತನಿಖೆ ನಡೆಯಬೇಕಾದ್ರೇ ಸಿಎಂ ರಾಜೀನಾಮೆ ನೀಡಲೇಬೇಕು. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರ ರಾಜೀನಾಮೆ ಪಡೆಯಬೇಕು ಎಂದು ಶೆಟ್ಟರ್ ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಪಕ್ಷದ ಒಬ್ಬ ಸಿಎಂ ವಿರುದ್ಧ ಎಫ್‌ಐಆರ್ ಆದಾಗ್ಯೂ ಹೈಕಮಾಂಡ್ ರಾಜೀನಾಮೆ ಕೇಳದಿದ್ದರೆ ಅವರ ಸಂದೇಶ ಏನು..? ಮುಡಾ ವಿಚಾರವನ್ನು ಕಾಂಗ್ರೆಸ್ ಹೈಲಮಾಂಡ ಗಂಭೀರವಾಗಿ ತೆಗೆದುಕೊಳ್ಳಬೇಕು. ಹೈಕಮಾಂಡ ಸಿದ್ದರಾಮಯ್ಯವರ ರಾಜೀನಾಮ ಪಡೆದುಕೊಳ್ಳದಿದ್ದರೆ ದೇಶದ ಜನಕ್ಕೆ ಉತ್ತರ ನೀಡಬೇಕಾಗುತ್ತದೆ. ಬೇರೆ ಪಕ್ಷಗಳ ಭ್ರಷ್ಟಾಚಾರ ಬಗ್ಗೆ ಮಾತಾಡೋ ನೈತಿಕತೆಯನ್ನು ಕಾಂಗ್ರೆಸ್ ಕಳೆದುಕೊಳ್ಳತ್ತದೆ. ತಕ್ಷಣವೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕು ಎಂದು ಶೆಟ್ಟರ್ ಆಗ್ರಹಿಸಿದ್ದಾರೆ.
ರಾಜ್ಯಪಾಲರ ಕುರಿತು ಕಾಂಗ್ರೆಸ್ ನಾಯಕರ ಟೀಕೆ ಟಿಪ್ಪಣಿ ವಿಚಾರದ ಬಗ್ಗೆ ಮಾತನಾಡಿದ ಶೆಟ್ಟರ್, ಕಾಂಗ್ರೆಸ್ ನಾಯಕರಿಗೆ ಸಂವಿಧಾನದ ಮೇಲೆ ಗೌರವ ಇದಿದ್ದರೆ ರಾಜ್ಯಪಾಲರ ವಿರುದ್ಧ ಟೀಕೆ ಮಾಡುತ್ತಿರಲಿಲ್ಲ. ರಾಜ್ಯಪಾಲರ ಪ್ರತಿ ನಡೆಗೂ ಕಾಂಗ್ರೆಸ್‌ನವರು ಟೀಕಿಸುತ್ತಿದ್ದಾರೆ. ಮುಡಾ ವಿಚಾರದಲ್ಲಿ ರಾಜ್ಯಪಾಲರ ಸಿಎಂ ವಿರುದ್ಧ ಪ್ರಾಸುಕ್ಯೂಷನ್ ಅನುಮತಿ ನ್ಯಾಯಾಲಯ ಎತ್ತಿ ಹಿಡಿದಿದೆ. ಕಾಂಗ್ರೆಸ್ ನಾಯಕರ ಟೀಕೆಗೆ ಇಲ್ಲಿ ಅರ್ಥವೇನಿದೆ..? ಕಾಂಗ್ರೆಸ್ ನಾಯಕರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಒಂದು ಕಡೆ ಸಂವಿಧಾನ ಪ್ರತಿ ಹಿಡಿದು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಇನ್ನೊಂದು ಕಡೆ ಸಂವಿಧಾನಿಕ ಹುದ್ದೆಯಲ್ಲಿರುವವರ ಬಗ್ಗೆ ಹಗುರವಾಗಿ ಮಾತಾಡುತ್ತಾರೆ. ಮೊನ್ನೆ ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ ಸೇರಿ ಕೆಲವು ಕಾಂಗ್ರೆಸಿಗರು ಸಂವಿಧಾನ ಪ್ರತಿ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ್ದರು. ಬಿಜೆಪಿ ಸಂವಿಧಾನ ವಿರೋಧಿ ಅಂತಾ ಬಿಂಬಿಸಲು ರಾಹುಲ್ ಪ್ರಯತ್ನಿಸಿದರು. ಆದರೆ ರಾಜ್ಯದಲ್ಲಿ ಅವರ ಪಕ್ಷದವರ ನಡೆದುಕೊಳ್ಳುತ್ತಿರುವುದು ಹೇಗೆ..? ನಿಜವಾಗಿಯೂ ಕಾಂಗ್ರೆಸ್‌ಗೆ ಸಂವಿಧಾನದ ಮೇಲೆ ಗೌರವ ಇದ್ದರೆ ಸಿಎಂ ರಾಜೀನಾಮೆ ನೀಡಿತನಿಖೆ ಎದುರಿಸಲಿ ಎಂದು ಶೆಟ್ಟರ್ ಹೇಳಿದ್ದಾರೆ.
ನ್ಯಾಯಾಂಗ ಹೋರಾಟ ಮಾಡುತ್ತೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್, ಸದ್ಯ ಸಿಎಂ ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಕಾನೂನು ಹೋರಾಟಕ್ಕೆ ನಮ್ಮದೇನೂ ಅಡ್ಡಿ ಇಲ್ಲ. ಈಗ ಮೊದಲು ಹೈಕೋರ್ಟ್ ಆದೇಶ ಸ್ವಾಗತಿಸಿ ತನಿಖೆ ಎದುರಿಸಲಿ. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಚಾಲೇಂಜ್ ಮಾಡಬಹುದು. ಈ ಹಿಂದೆ ಬಹಳ ಪ್ರಕರಣಗಳನ್ನು ಸುಪ್ರೀಂನಲ್ಲಿ ಚಾಲೇಂಜ್ ಮಾಡಲಾಗಿದೆ. ಕಾನೂನು ಹೋರಾಟ ಅಂತಾ ಈಗ ರಾಜೀನಾಮೆಯಿಂದ ಹಿಂದೆ ಸರಿಯುವುದು ಸರಿಯಲ್ಲ. ರಾಜೀನಾಮೆ ನೀಡಲು ಸಿದ್ದರಾಮಯ್ಯನವರ ಮೊಂಡತನ ಸರಿಯಲ್ಲ. ರಾಜೀನಾಮೆ ನೀಡದಿದ್ದರೆ ಇದನ್ನು ಜನತಾ ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಬಿಜೆಪಿ ಸಿಎಂ ಭ್ರಷ್ಟಾಚಾರವಮ್ನು ಜನರ ಬಳಿ ತೆಗೆದುಕೊಂಡು ಹೋಗುತ್ತದೆ ಎಂದು ಶೆಟ್ಟರ್ ಹೇಳಿದ್ದಾರೆ.
ನಾಳೆ ಸಿಎಂ ಶಾಸಕಾಂಗ ಸಭೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್, ಅವರ ಪಕ್ಷದ ಶಾಸಕಾಂಗ ಸಭೆ ಕರೆಯಲಿ. ಅವರ ಪಕ್ಷದ ವಿಚಾರ, ರಾಜೀನಾಮೆ ನೀಡಿದ ಬಳಿಕ ಎಲ್ಲವನ್ನು ಚರ್ಚಿಸಲಿ. ರಾಜೀನಾಮೆ ನೀಡಿ ಸಿದ್ದರಾಮಯ್ಯನವರು ಏನು ಬೇಕಾದ್ರೂ ಹೆಜ್ಜೆ ಇಡಲಿ ಎಂದು ಶೆಟ್ಟರ್ ಹೇಳಿದ್ದಾರೆ.




