Wednesday, September 11, 2024

Latest Posts

ಸಿದ್ದರಾಮಯ್ಯ ಹೇಳಿಕೆ ಹಿಂಪಡೆಯಲಿ; ವರ್ತೂರ್ ಪ್ರಕಾಶ್ ಕಿಡಿ

- Advertisement -

Political News
ಬೆಂಗಳೂರು(ಫೆ.13): ಈಗಾಗಲೇ ರಾಜಕೀಯ ರಂಗದಲ್ಲಿ 2023 ರ ಚುನಾವಣೆಯ ಕಾಲ ಹತ್ತಿರದಲ್ಲಿದೆ. ಈ ಹಿನ್ನಲೆಯಲ್ಲಿ ಆರೋಪ, ಪ್ರತ್ಯಾರೋಪಗಳು ಪಕ್ಷಗಳಲ್ಲಿ ಕೇಳಿ ಬರುತ್ತಿರುವ ಹಿನ್ನಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವರ್ತೂರ್ ಪ್ರಕಾಶ್ ಅವರಿಗೆ ನೀಡಿದ ಹೇಳಿಕೆಯನ್ನು 24 ಗಂಟೆಯೊಳಗೆ ಹಿಂಪಡೆದುಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

ಈಗಾಗಲೇ ಕೋಲಾರ ಟಕೆಟ್ ಆಕಾಂಕ್ಷಿ ವರ್ತೂರು ಪ್ರಕಾಶ್ ಅವರು ಹಾಗೂ ಸಿದ್ದರಾಮಯ್ಯ ನಡುವೆ ಟ್ವೀಟ್ ವಾರ್ ನಡೆದಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದ ವರ್ತೂರು ಪ್ರಕಾಶ್, ಅಂದು ಜೆಡಿಎಸ್ ನಿಂದ ಕಾಂಗ್ರೆಸ್ ಕಡೆಗೆ ಬಂದಿದ್ದು ನೀವು ಬರೀ ಕೈಯಲ್ಲಿ. ಚಾಮುಂಡೇಶ್ವರಿಯಿಂದ ರಾಜಕೀಯ ಪುನರ್ಜನ್ಮ ಸಿಗಲು ಈ ವರ್ತೂರ್ ಪ್ರಕಾಶ್ ಕಾರಣ ಅಲ್ವಾ? ಅಂದು ನಾ ಇರದೇ ಇದ್ದರೆ, ಇಂದು ನೀವು ಚಿಲ್ಲರೆ ಆಗುತ್ತಿದ್ರಿ ಎಂದು ಟ್ವೀಟ್ ಮಾಡಿದ್ದಾರೆ.

ಈ ಮಾತುಗಳಿಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ನಾನು ಚಿಲ್ಲರೆಗಳ ಮಾತಿಗೆ ಪ್ರತಿಕ್ರಿಯಿಸಲ್ಲ ಎಂದಿದ್ದಾರೆ. ಇದಕ್ಕೆ ಮಿರಿ ಮಿರಿ ಕೆಂಡಾಮಂಡಲವಾದ ವರ್ತೂರು 24 ಗಂಟೆಯ ಒಳಗಾಗಿ ಈ ಪದವನ್ನು ವಾಪಸ್​ ಪಡೆಯಬೇಕು, ಇಲ್ಲವಾದರೇ ನೀವಾಡಿದ ಮಾತಿಗೆ  ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

- Advertisement -

Latest Posts

Don't Miss