ಬೆಳಗಾವಿ : ಶಶಿಕಲಾ ಜೊಲ್ಲೆ ಮೇಲಿನ ಮೊಟ್ಟೆ ಹಗರಣದ ತನಿಖೆಯಾಗಲಿ; ಇಡಿ ದಾಳಿ ಬಗ್ಗೆ ಕಾದು ನೋಡೋಣ ಮೊಟ್ಟೆ ಹಗರಣದ ಆರೋಪ ಎದುರಿಸುತ್ತಿರುವ ಶಶಿಕಲಾ ಜೊಲ್ಲೆ ಅವರಿಗೆ ಮತ್ತೆ ಮಂತ್ರಿ ಸ್ಥಾನ ನೀಡಲಾಗಿದೆ. ಅವರು ಮತ್ತಷ್ಟು ಪ್ರಬಲರಾಗಿದ್ದಾರೆ. ಅವರ ಮೇಲಿನ ಹಗರಣದ ಕುರಿತು ಸರ್ಕಾರ ತನಿಖೆ ನಡೆಸಬೇಕು ಎಂದು ಸತೀಶ ಒತ್ತಾಯಿಸಿದರು.
ಜೊಲ್ಲೆ ಅವರು ಸಚಿವರಾಗುವುದಕ್ಕಿಂತ ಮುಂಚೆಯೇ ಝಿರೋ ಟ್ರಾಫಿಕ್ ನಲ್ಲಿ ಆಗಮಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಅಧಿಕಾರವನ್ನು ಯಾವ ರೀತಿ ಬೇಕಾದರು ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದರು.
ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಮನೆ ಮೇಲೆ ಇಡಿ ದಾಳಿ ಬಗ್ಗೆ ಈಗಲೇ ಏನನ್ನು ಹೇಳಲು ಆಗಲ್ಲ:
ಶಾಸಕ ಹಾಗೂ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಮನೆ ಮೇಲೆ ಇಂದು ಇಡಿ ದಾಳಿ ಆಗಿರುವ ಬಗ್ಗೆ ಈಗಲೇ ಏನನ್ನು ಹೇಳಲು ಆಗುವುದಿಲ್ಲ. ಈ ಬಗ್ಗೆ ಕಾದು ನೋಡೋಣ ಎಂದು ಗೋಕಾಕ ನಗರದಲ್ಲಿ ಪ್ರತಿಕ್ರಿಯೆ ನೀಡಿದರು.
ನಾಗೇಶ್, ಕರ್ನಾಟಕ ಟಿವಿ, ಬೆಳಗಾವಿ