Tuesday, October 22, 2024

Latest Posts

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : 8000 ಹುದ್ದೆಗಳಿಗೆ ಅರ್ಜಿ ಆಹ್ವಾನ

- Advertisement -

ಕರ್ನಾಟಕ ಟಿವಿ : ಎಲ್ಐಸಿ 8 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅಕ್ಟೋಬರ್ 1ಕ್ಕೆ ಅರ್ಜಿ ಸಲ್ಲಿಕೆ ಅಂತ್ಯವಾಗಲಿದ್ದು ಈ ಕೂಡಲೇ ಅರ್ಜಿಯನ್ನ ಸಲ್ಲಿಸಿ. ಯಾವ ಹುದ್ದೆಗೆ ಏನು ಅರ್ಹತೆ..? ಪರೀಕ್ಷಾ ಶುಲ್ಕ ಎಷ್ಟು.? ಈ ಬಗ್ಗೆ ಕಂಪ್ಲೀಟ್  ಡೀಟೇಲ್ಸ್ ಇಲ್ಲಿದೆ ನೋಡಿ.

ದೇಶಾದ್ಯಂತ ವಿವಿಧ ಹುದ್ದೆಗಳಿಗೆ ಎಲ್ಐಸಿ ಅರ್ಜಿ ಆಹ್ವಾನಿಸಿದೆ. ಸೆಪ್ಟಂಬರ್ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಅಕ್ಟೋಬರ್ 1 ರಂದು ಅರ್ಜಿ ಸಲ್ಲಿಸಲು ಕೊನೆ ದಿನಾಅಂಕವಾಗಿದೆ. ಎಲ್ಐಸಿ ಡಾಟ್ ಇನ್ ವೆಬ್ ಸೈಟ್ ಗೆ ಹೋಗಿ ಈ ಕೂಡಲೇ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.

ಎಲ್ಐಸಿ ನೇಮಕಾತಿ

ಅರ್ಜಿ ಸಲ್ಲಿಕೆ ಆರಂಭ : ಸೆಪ್ಟಂಬರ್ 17

ಅರ್ಜಿ ಸಲ್ಲಿಕೆ ಕಡೆ ದಿನಾಂಖ : ಅಕ್ಟೋಬರ್ 1

ಪರೀಕ್ಷಾ ಪ್ರವೇಶ ಪತ್ರವನ್ನಅಕ್ಟೋಬರ್ 15 ರಿಂದ 22ರಲ್ಲಿ ಡೌನ್ ಲೋಡ್ ಮಾಡಿಕೊಳ್ಳಬೇಕು

ಅಕ್ಟೋಬರ್ 21, 22 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ

ವಿದ್ಯಾರ್ಹತೆ ಏನು ಇರಬೇಕು..?

ಪದವಿಧರರಾಗಿರಬೇಕು 10+2+3 ( ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ )

ನಿವೃತ್ತ ಯೋಧರು ಪದವಿಯೊಂದಿಗೆ ಕನಿಷ್ಟ ಸೇನೆಯಲ್ಲಿ 10 ವರ್ಷ ಸೇವೆ ಸಲ್ಲಿಸಿರಬೇಕು

ಎಸ್ಎಸ್ಎಲ್ಸಿ ಪಾಸಾದ ನಿವೃತ್ತಿ ಯೋಧರು 15 ವರ್ಷ ಸೇವೆ ಸಲ್ಲಿಸಿದ್ರೂ ಅರ್ಜಿ ಸಲ್ಲಿಸಬಹುದು

ಎಸ್ಎಸ್ಎಲ್ಸಿ ಪಾಸಾಗದ ನಿವೃತ್ತ ಯೋಧರು ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಕೆ ಜೊತೆ ಭಾರತೀಯ ಸೇನೆಯಲ್ಲಿ ಐಎಎಫ್ ಮತ್ತು ಐಎನ್ ಪರೀಕ್ಷೆ ಪಾಸ್ ಮಾಡಿದ್ರೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ವಯಸ್ಸಿನ ಮಿತಿ

ಕನಿಷ್ಠ 18 ವರ್ಷ ಯಸ್ಸಾಗಿರಬೇಕು

ಗರಿಷ್ಟ ವಯಸ್ಸು 30 ದಾಟಿರಬಾರದು

ಎಲ್ಐಸಿ ಸಹಾಯ ಹುದ್ದೆಗೆ ಆಯ್ಕೆಯಾಗಲು ಎರಡು ಪರೀಕ್ಷೆಗಳನ್ನ ಎದುರಿಸಬೇಕಿದೆ. ಆಲ್ ಲೈನ್ ಪ್ರಿಲಿಮಿನರಿ ಟೆಸ್ಟ್ ಜೊತಅಂತಿಮ ಯ್ಕೆಗೂ ಮುನ್ನ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತೆ.

ಎಲ್ಐಸಿ ಸಹಾಯಕ ಹುದ್ದೆಯ ಜವಾಬ್ದಾರಿಗಳೇನು..?

ಹುದ್ದೆಗೆ ಆಯ್ಕೆಯಾದವರು ಕ್ಲರಿಕಲ್ ಹುದ್ದೆ, ವಿಂಡೋಸ್ ಆಪರೇಟರ್ಸ್, ಕ್ಯಾಷಿಯರ್, ಗ್ರಾಹಕರ ಸೇವಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಬೇಕಿದೆ. ತಿಂಗಳಿಗೆ 14,435 ಸ್ಟೈಫಂಡ್ ಸಿಗಲಿದೆ.

ಕೆಲಸಕ್ಕೆ ಹೇಗೆ ಅಪ್ಲೈ ಮಾಡೋದು..?

ಹಂತ 1 : ಎಲ್ಐಸಿ ಡಾಟ್ ಇನ್ ವೆಬ್ ಸೈಟ್ ಲಾಗಿನ್ ಆಗಿ

ಹಂತ 2 : ಕೆರಿಯರ್ಸ್ ವಿಭಾಗ ಕ್ಲಿಕ್ ಮಾಡಿ ನಂತರ ಸಹಾಯಕರ ನೇಮಕಾತಿ 2019ರ ಮೇಲೆ ಕ್ಲಿಕ್ ಮಾಡಿ

ಹಂತ 3 : ನಂತರ ಜೋನ್ (ವಲಯ ) ಮೇಲೆ ಕ್ಲಿನ್ ಮಾಡಿದ ನಂತರ ಡಿವಿಷನ್ ( ವಿಭಾಗದ ) ಮೇಲೆ ಕ್ಲಿಕ್ ಮಾಡಿ

ಹಂತ 4 : ಆನ್ ಲೈನ್ ನೇಮಕಾತಿ ವಿಭಾಗ ನಿಮಗೆ ಗೋಚರವಾಗುತ್ತೆ

ಹಂತ 5 : ರಿಜಿಸ್ಟ್ರೇಷನ್ ಅಪ್ಲಿಕೇಷನ್ ನಲ್ಲಿ “ನ್ಯೂ ರಿಜಿಸ್ಟ್ರೇಷನ್ ಅಪ್ಲಿಕೇಷನ್” ನಲ್ಲಿ ಹೆಸರು, ದೂರವಾಣೀ ನಂಬರ್ ಹಾಗೂ ಇಮೇಲ್ ವಿಳಾಸ ನಮೂದಿ ಮಾಡಿ.

ಹಂತ 6 : ಸ್ಕ್ರೀನ್ ನಲ್ಲಿ ರಿಜಿಸ್ಟ್ರೇಷನ್ ನಂಬರ್ ಹಾಗೂ ಪಾಸ್ ವರ್ಡ್ ಡಿಸ್ ಪ್ಲೇ ಆಗುತ್ತೆ. ನಂತರ  ಆ  ರಿಜಿಸ್ಟ್ರೇಷನ್ ನಂಬರ್ ಹಾಗೂ ಪಾಸ್ ವರ್ಡ್ ಬರೆದಿಟ್ಟುಕೊಳ್ಳಿ. ನೀವು ರಿಜಿಸ್ಟ್ರೇಷನ್ ಮಾಡಿದ ಮೊಬೈಲ್ ನಂಬರ್ ಹಾಗೂ ಇಮೇಲ್  ಗೆ ರಿಜಿಸ್ಟ್ರೇಷನ್ ನಂಬರ್ ಹಾಗೂ ಪಾಸ್ ವರ್ಡ್ ಸಂದೇಶ ಬರಲಿದೆ.

ಹಂತ 7 :ಅರ್ಜಿಯನ್ನ ತುಂಬಿದ ನಂತ್ರ ಅಗತ್ಯ ದಾಖಲೆಗಳನ್ನಅಪ್ ಲೋಡ್ ಮಾಡಿ

ಹಂತ 8 : ಅರ್ಜಿಯನ್ನ ಸಂಪೂರ್ಣ ಪರಿಶೀಲನೆ ಮಾಡಿದ ನಂತರ ಫೋಟೋ ಹಾಗೂ ಅಗತ್ಯ ದಾಖಲೆ ಅಪ್ ಲೋಡ್ ಮಾಡಿರುವುದನ್ನ ಪರೀಕ್ಷೆ ಮಾಡಿದ ನಂತರ ಅಂತಿಮವಾಗಿ ಫೈನಲ್ ಸಬ್ಬಿಟ್ ಬಟನ್ ಅನ್ನು ಒತ್ತಿ.

ಹಂತ 9 : ಶುಲ್ಕ ಪಾವತಿ ಮಾಡಿದ ನಂತರ ಮತ್ತೊಮ್ಮೆ ರಿಜಿಸ್ಟರ್ ನಂಬರ್ ಹಾಗೂ ಪಾಸ್ವರ್ಡ್ ಅನ್ನು ಸೇವ್ ಮಾಡಿಟ್ಟುಕೊಳ್ಳಿ.

ಅರ್ಜಿ ಶುಲ್ಕ ಷ್ಟು..?

ಸಾಮಾನ್ಯ ವರ್ಗದವರು 510 ರೂ ಜೊತೆಗೆ ಜಿಎಸ್ಟಿ ಶುಲ್ಕ ಪಾವತಿ ಮಾಡಬೇಕು

ಎಸ್ಸಿ/ಎಸ್ಟಿ ವರ್ಗದಅಭ್ಯರ್ಥಿಗಳು 85 ರೂ ಜೊತೆ ಜಿಎಸ್ಟಿ ಶುಲ್ಕ ಪಾವತಿ ಮಾಡಬೇಕು

ದೇಶದ ಎಲ್ಲಾ ವಿಭಾಗಗಳಿಗೆ ಒಟ್ಟು 8000 ಹುದ್ದೆ ನೇಮಕಾತಿ ಮಾಡುತ್ತಿರುವ ಕಾರಣ ಆಯಾ ವಲಯಕ್ಕೆ ಅಗತ್ಯ ಸಿಬ್ಬಂದಿಯನ್ನ ನೇಮಕ ಮಾಡಲಾಗುತ್ತೆ..

- Advertisement -

Latest Posts

Don't Miss