Thursday, July 25, 2024

Latest Posts

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪತಿ ನಿಧನ

- Advertisement -

national story
ಶಿಕ್ಷಣ ತಜ್ಞ ಮತ್ತು ರಾಜಕಾರಣಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ಡಾ. ದೇವಿಸಿಂಗ್ ರಾಂಸಿಂಗ್ ಶೇಖಾವತ್ ಶುಕ್ರವಾರ ಬೆಳಿಗ್ಗೆ ಇಲ್ಲಿ ನಿಧನರಾದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
88 ವರ್ಷ ವಯಸ್ಸಿನ (ಡಾ ದೇವಿಸಿಂಗ್ ರಾಂಸಿಂಗ್ ಶೇಖಾವತ್ _ಅವರು ಕೆಇಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ ಮಾಜಿ ರಾಷ್ಟ್ರಪತಿ ಪತ್ನಿ ಪ್ರತಿಭಾ ಪಾಟೀಲ್, ಮಗ ರಾಜೇಂದ್ರ ಸಿಂಗ್ ಶೇಖಾವತ್, ಕಾಂಗ್ರೆಸ್ ನಾಯಕಿ ಮತ್ತು ಪುತ್ರಿ ಜ್ಯೋತಿ ರಾಥೋಡ್ ಅವರು ಇದ್ದರು.
ಒಬ್ಬ ಕೃಷಿಕ ಮತ್ತು ಶಿಕ್ಷಣತಜ್ಞರಾಗಿದ್ದ ಶೇಖಾವತ್ ರಾಜಕಾರಣಿಯಾಗಿ ಬದಲಾಗಿದ್ದರು. ಅಮರಾವತಿಯಿಂದ ಬಂದವರು. ಅಲ್ಲಿ ಅವರು ಮೊದಲ ಮೇಯರ್ ಆಗಿ (1991-1992) ಮತ್ತು ಮಹಾರಾಷ್ಟ್ರ ಶಾಸಕರಾಗಿ (1985-1990) ಸೇವೆ ಸಲ್ಲಿಸಿದರು.
ಮೂಲಗಳ ಪ್ರಕಾರ, ಫೆಬ್ರುವರಿ 12 ರಂದು ಪುಣೆಯಲ್ಲಿ ತಮ್ಮ ಮನೆಯ ಹೊರಗೆ ಬೆಳಿಗ್ಗೆ ಹುಲ್ಲುಹಾಸಿನ ಮೇಲೆ ಶೇಖಾವತ್ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಅವರು ಅಧಿಕ ರಕ್ತದೊತ್ತಡ, ಮೂತ್ರಪಿಂಡ ವೈಫಲ್ಯ ಸೇರಿದಂತೆ ಇತರೆ ತೊಡಕುಗಳನ್ನು ಎದುರಿಸಿದರು. ಇದುವೇ ಅವರ ಮರಣಕ್ಕೆ ಕಾರಣವಾಯಿತು.
ಲಭ್ಯವಿರುವ ಮಾಹಿತಿಯ ಪ್ರಕಾರ, ಶೇಖಾವತ್ ಅವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 7 ಗಂಟೆಗೆ ವೈಕುಂಠಧಾಮ್ ಸ್ಮಶಾನದಲ್ಲಿ ನೆರವೇರಿಸಲಾಗುವುದು ಎನ್ನಲಾಗಿದೆ.
ಒಬ್ಬ ಕೃಷಿಕ ಮತ್ತು ಶಿಕ್ಷಣತಜ್ಞರಾಗಿದ್ದ ಶೇಖಾವತ್ ರಾಜಕಾರಣಿಯಾಗಿ ಬದಲಾಗಿದ್ದರು. ಅಮರಾವತಿಯಿಂದ ಬಂದವರು. ಅಲ್ಲಿ ಅವರು ಮೊದಲ ಮೇಯರ್ ಆಗಿ (1991-1992) ಮತ್ತು ಮಹಾರಾಷ್ಟ್ರ ಶಾಸಕರಾಗಿ (1985-1990) ಸೇವೆ ಸಲ್ಲಿಸಿದರು.
ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿದ್ದ (2007-2012) ಅವರ ಪತ್ನಿ ಪ್ರತಿಭಾ (89) ತಮ್ಮ ಗಂಡನ ಹಠಾತ್ ನಿಧನದಿಂದಾಗಿ ಆಘಾತಕ್ಕೊಳಗಾಗಿದ್ದಾರೆ ಮತ್ತು ಅವರ ಕುಟುಂಬ ಸದಸ್ಯರು ಸಾಂತ್ವನ ವ್ಯಕ್ತಪಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಸಿರು ನಿಂತ ಮಗುವಿಗೆ ಮರು ಜೀವ..! ಅಚ್ಚರಿಗೆ ಸಾಕ್ಷಿಯಾದ ವೈದ್ಯಲೋಕ..!

ಮಂಗಳೂರು: ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಕುಲದೀಪ್ ಕುಮಾರ್ ಜೈನ್

ಅಂಬಾರಿ ಉತ್ಸವ ರಾಜ್ಯ ಸರ್ಕಾರಿ ಬಸ್ ನ ಮಾರ್ಗಗಳು ಪ್ರಯಾಣಿಕರಿಗೆ ಲಭ್ಯ

- Advertisement -

Latest Posts

Don't Miss