Friday, November 22, 2024

Latest Posts

ಈ ದೀಪವನ್ನು ಮನೆಯಲ್ಲಿ 3 ಶುಕ್ರವಾರ ಹಚ್ಚಿ ಸಾಕ್ಷಾತ್ ಮಹಾಲಕ್ಷ್ಮಿ ನಿಮ್ಮ ಮನೆಗೆ ಬರ್ತಾಳೆ..!

- Advertisement -

ಯಾರ ಮನೆಯಲ್ಲಿ ಹೆಚ್ಚಾಗಿ ದರಿದ್ರವಿರುತ್ತದೋ ಹಾಗೂ ಹಣಕಾಸಿನ ಸಮಸ್ಯೆ ಇರುತ್ತದೆಯೋ ಅವರು, ಈ ಒಂದು ದೀಪಾರಾಧನೆಯನ್ನು ನಿಮ್ಮ ಮನೆಯಲ್ಲಿ ಮೂರೂ ಶುಕ್ರವಾರಗಳು ಮಾಡಿದರೆ ವಿಶೇಷವಾದ ಮಹಾಲಕ್ಷ್ಮಿಯ ಅನುಗ್ರಹವಾಗುವುದು ಖಂಡಿತ ,ಸಾಲದ ಸಮಸ್ಯೆಗಳು ಜೀವನದಲ್ಲಿ ಹೆಚ್ಚಾಗಿದ್ದರೆ ಅಂಥಹವರು ಧನಪ್ರಾಪ್ತಿಗಾಗಿ ಈ ದೀಪಾರಾಧನೆಯನ್ನು ಮಾಡಬೇಕಾಗುತ್ತದೆ.

ಮೂರೂ ಶುಕ್ರವಾರ ಭಕ್ತಿಯಿಂದ ಸಂಕಲ್ಪವನ್ನು ಮಾಡಿಕೊಂಡು ಈ ದೀಪವನ್ನು ಹಚ್ಚಿದರೆ ನಿಮ್ಮ ಜೀವನದಲ್ಲಿ ಬದಲಾವಣೆ ಖಂಡಿತ ಆಗುತ್ತದೆ. ಎಲ್ಲರೀತಿಯಾದ ಕಷ್ಟಗಳು ಕಳೆಯುತ್ತದೆ .ಮಹಾಲಕ್ಷ್ಮೀದೇವಿ ಮನೆಗೆ ಖಂಡಿತ ಪ್ರವೇಶ ಮಾಡುತ್ತಾಳೆ ಅದು ಎಂಥಹ ಕಷ್ಟವೇ ಇರಲಿ ಬಹಳ ವರ್ಷಗಳಿಂದ ಹಣಕಾಸಿನ ಸಮಸ್ಯೆ ಕಾಡುತ್ತಿದ್ದರೆ ,ಯಾವುದೇ ಕೆಲಸವನ್ನು ಮಾಡಿದರು ನಷ್ಟವನ್ನು ಅನುಭವಿಸುತ್ತಿದ್ದರೆ ಈ ದೀಪವನ್ನು ಹಚ್ಚಿ ನೋಡಿ ಅದ್ಭುತವಾದ ಬದಲಾವಣೆಗಳು ನಿಮ್ಮ ಮನೆಯಲ್ಲಿ ನಡೆಯುತ್ತದೆ, ಮಹಾಲಕ್ಷ್ಮಿದೇವಿ ನಿಮ್ಮ ಮನೆಗೆ ಕಾಲಿಟ್ಟರೆ ನಿಮ್ಮ ಎಲ್ಲ ಹಣಕಾಸಿನ ಸಮಸ್ಯೆಗಳು ಕಳೆದುಹೋಗುತ್ತದೆ. ಹಾಗಾದರೆ ಈ ದೀಪವನ್ನು ಯಾವ ಸಮಯದಲ್ಲಿ ಹಚ್ಚಬೇಕು, ದೀಪವನ್ನು ಹಚ್ಚಿದಮೇಲೆ ಯಾವ ರೀತಿ ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿದುಕೊಳ್ಳೋಣ .

ಶುಕ್ರವಾರದ ದಿನ ಮನೆಯಲ್ಲಿ ಹೆಣ್ಣುಮಕ್ಕಳು ತಲೆ ಸ್ನಾನ ಮಾಡಿ, ಮಡಿಯುಟ್ಟು ಸೂರ್ಯ ಹುಟ್ಟುವ ಮುಂಚೆ ಈ ದೀಪಾರಾಧನೆಯನ್ನು ಮಾಡಬೇಕು, ಬೆಳಗ್ಗೆ ಅಥವಾ ಸಂಜೆ ಈ ದೀಪಾರಾಧನೆ ಮಾಡಬೇಕು ನಿಮಗೆ ಸಾಧ್ಯವದಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡು ಸಲ ದೀಪಾರಾಧನೆ ಮಾಡಿದರೆ ತುಂಬಾ ಒಳ್ಳೆಯದು, ಆದರೆ ಸೂರ್ಯ ಹುಟ್ಟುವ ಮುಂಚೆ ದೀಪಾರಾಧನೆಯನ್ನು ಮಾಡಿದರೆ ಬಹಳ ಒಳ್ಳೆಯದು .

ಮೊದಲು ಒಂದು ಮಣ್ಣಿನ ತಟ್ಟೆಯನ್ನು ತೆಗೆದುಕೊಳ್ಳಬೇಕು ಆ ತಟ್ಟೆಗೆ ಹರಿಶಿನವನ್ನು ಹಚ್ಚಬೇಕು ಅರಿಶಿನವನ್ನು ಹಚ್ಚಿದ ನಂತರ ಆ ತಟ್ಟೆಯಮೇಲೆ ಮಹಾಲಕ್ಷ್ಮಿಗೆ ಪ್ರಿಯವಾದ ಕಲ್ಲು ಉಪ್ಪನ್ನು ಹಾಕಬೇಕು .ನಂತರ ಅದರ ಮೇಲೆ ಹರಿಶಿನ ಹಚ್ಚಿದ ಒಂದು ದೀಪವನ್ನು ಇಡಬೇಕು ,ಆ ದೀಪಕ್ಕೆ ಸ್ವಲ್ಪ ಅಕ್ಷತೆ ಕಾಳನ್ನು ಹಾಕಬೇಕು ನಂತರ ಆ ದೀಪದ ಮೇಲೆ ಮತ್ತೊಂದು ದೀಪವನ್ನು ಇಡಬೇಕು , ಇಷ್ಟು ಕೆಲಸ ಮುಗಿಸಿದ ನಂತರ , ಮೇಲೆ ಇರುವ ದೀಪಕ್ಕೆ ಎಳ್ಳೆಣ್ಣೆಯನ್ನು ಹಾಕಬೇಕು. ಎಳ್ಳೆಣ್ಣೆ ಬಹಳ ಶ್ರೇಷ್ಠ ನೀವು ಶುಕ್ರವಾರ ಈ ರೀತಿಯಾಗಿ ದೀಪವನ್ನು ಹಚ್ಚಬೇಕು .ಯಾವುದೇ ಕಾರಣಕ್ಕೂ ಮೊದಲೇ ದೀಪಕ್ಕೆ ಬತ್ತಿಯನ್ನು ಹಾಕಬೇಡಿ ಎಣ್ಣೆ ಹಾಕಿದ ನಂತರ ಬತ್ತಿಯನ್ನು ಹಾಕಬೇಕು. ಈ ದೀಪವನ್ನು ದೇವರ ಮನೆಯಲ್ಲಿ ದೇವರಿಗೆ ಮುಖ ಮಾಡಿ ಈ ದೀಪವನ್ನು ಹಚ್ಚಬೇಕು ದೇವರ ಕಡೆಗೆ ಈ ದೀಪದ ಜ್ವಾಲೆ ಉರಿಯಬೇಕು , ಈ ರೀತಿಯಾಗಿ ದೀಪಾರಾಧನೆಯನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಪಾಸಿಟಿವ್ ಎನರ್ಜಿ ಬರುತ್ತದೆ ಈ ರೀತಿಯಾಗಿ ದೀಪಾರಾಧನೆಯನ್ನು 3ಶುಕ್ರವಾರಗಳ ಕಾಲ ಮಾಡಬೇಕು .

ಹೀಗೆ ಮಾಡಿದ ಮರುದಿನ ಅಂದರೆ ಶನಿವಾರ ಆ ಉಪ್ಪನ್ನು ಒಂದು ಪಪೆರ್ನಲ್ಲಿ ಅಥವಾ ಕವರ್ ನಲ್ಲಿ ಶೇಖರಣೆ ಮಾಡುತ್ತಾ ಬರಬೇಕು ಮೂರೂ ಶುಕ್ರವಾರಗಳು ಆದ ಮೇಲೆ ಈ ಉಪ್ಪನ್ನು ಜನರು ತುಳಿಯದೆ ಇರುವ ಜಾಗದಲ್ಲಿ ಎಸೆದು ಬರಬೇಕು . ಇದನ್ನು ಉಪ್ಪಿನದೀಪ ಅಥವಾ ಐಶ್ವರ್ಯ ದೀಪಾ ಎಂದು ಕರೆಯುತ್ತಾರೆ . ಈ ರೀತಿ ಮಾಡುವುದರಿಂದ ಅಷ್ಟ ಲಕ್ಷ್ಮಿಯರ ಅನುಗ್ರಹ ಖಂಡಿತ ಸಿಗುತ್ತದೆ. ಸಂಕಲ್ಪ ಅನ್ನೋದು ಬಹಳ ಮುಖ್ಯ ಭಕ್ತಿಯಿಂದ, ಮಡಿಯಿಂದ ಈ ದೀಪಾರಾಧನೆಯನ್ನು ಮಾಡಬೇಕು. ಈ ಮೂರೂ ವಾರಗಳ ಕಾಲ ಯಾವುದೇ ರೀತಿಯ ಮಾಂಸಾಹಾರವನ್ನು ಮನೆಗೆ ತರಬಾರದು ಮತ್ತು ಸೇವಿಸ ಬಾರದು ,ಶಕ್ತಿ ಇರುವವರು ಈ ವ್ರತವನ್ನು 3, 5,9 ವಾರಗಳು ಮಾಡಬಹುದು ಈ ನಿಯಮಗಳನ್ನು ಪಾಲಿಸಿ ಮಹಾಲಕ್ಷ್ಮಿಯ ಅನುಗ್ರಹ ಖಂಡಿತ ಪ್ರಾಪ್ತಿಯಾಗುತ್ತದೆ.

ಮನೆಯಲ್ಲಿ ಪೂಜೆ ಮಾಡುವಾಗ ಅನುಸರಿಸಬೇಕಾದ ನಿಯಮಗಳು ನಿಮಗಾಗಿ..!

2023 ಈ 5 ರಾಶಿಯವರಿಗೆ ಮರೆಯಲಾಗದ ವರ್ಷ…ಮುಟ್ಟಿದೆಲ್ಲಾ ಚಿನ್ನ..!

ಭೋಜನದ ನಂತರ ತಟ್ಟೆಯಲ್ಲಿ ಕೈ ತೊಳೆಯುವುದು ಒಳ್ಳೆಯದೋ ಕೆಟ್ಟದ್ದೋ..?

 

- Advertisement -

Latest Posts

Don't Miss