Saturday, July 27, 2024

Latest Posts

ನವೆಂಬರ್‌ನಲ್ಲಿ ತೆರೆಗಪ್ಪಳಿಸಲಿವೆ ಸಾಲು ಸಾಲು ಸಿನಿಮಾಗಳು..!

- Advertisement -

www.karnatakatv.net:ಲಾಕ್‌ಡೌನ್‌ನಿಂದಾಗಿ ಹೆಚ್ಚು ಕಡಿಮೆ ಎರಡು ವರ್ಷಗಳ ಕಾಲ ಚಿತ್ರಮಂದಿರಗಳು ಮುಚ್ಚುವಂತಾಗಿತ್ತು. ಹಾಗಾಗಿ ಚಿತ್ರೀಕರಣ ಮುಗಿಸಿ ರಿಲೀಸ್ ಆಗಬೇಕಿರುವ ಸಿನಿಮಾಗಳು ಸಾಕಷ್ಟಿವೆ. ಸದ್ಯ ಕರ್ನಾಟಕ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ.೧೦೦ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಇನ್ನೂ ಕೊರೊನಾ ಬರುವುದಕ್ಕಿಂತ ಮೊದಲು ಕನ್ನಡ ಚಿತ್ರರಂಗದಲ್ಲಿ ವಾರಕ್ಕೆ ಮೂರು ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತಿದ್ದವು. ಆದರೆ ಲಾಕ್‌ಡೌನ್ ಬಳಿಕ ಚಿತ್ರಣ ಬೇರೆ ಆಗಿದೆ. ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್‌ಗೆ ರೆಡಿ ಇದ್ದ ಕಾರಣ ಬೇರೆ ಸಿನಿಮಾಗಳು ಕೊಂಚ ಸೈಲೆಂಟ್ ಆಗಿದ್ದವು. ಈಗ ದೊಡ್ಡ ಸಿನಿಮಾಗಳ ಸರದಿ ಮುಗಿದ ನಂತರ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗುತ್ತಿವೆ. ದೊಡ್ಡ ಬಜೆಟ್‌ನ, ದೊಡ್ಡ ಸ್ಟಾರ್‌ಗಳ ಸಿನಿಮಾ ರಿಲೀಸ್ ಆಗುತ್ತಿರುವಾಗ ಮಾತ್ರ ಸಣ್ಣ ಸಿನಿಮಾಗಳ ರಿಲೀಸ್ ಸಂಖ್ಯೆ ಕಡಿಮೆ ಇರುತ್ತಿತ್ತು. ಅದನ್ನು ಹೊರತುಪಡಿಸಿದರೆ ಸ್ಯಾಂಡಲ್‌ವುಡ್‌ನಲ್ಲಿ ವಾರಕ್ಕೆ ಒಂಭತ್ತರಿoದ ಹನ್ನೊಂದು ಸಿನಿಮಾಗಳು ರಿಲೀಸ್ ಆಗಿರೋ ಉದಾಹರಣೆಗಳು ಕೂಡ ಉಂಟು.

ಸದ್ಯ ಕೋಟಿಗೊಬ್ಬ೩, ಸಲಗ, ಭಜರಂಗಿ೨ ಸಿನಿಮಾಗಳು ಈಗಾಗಲೇ ತೆರೆ ಕಂಡಿವೆ. ಹಾಗಾಗಿ ಮಿಕ್ಕ ಚಿತ್ರಗಳು ರಿಲೀಸ್‌ಗೆ ಸಾಲುಗಟ್ಟಿ ನಿಂತಿವೆ. ಒಟ್ಟಾರೆ ಹತ್ತು ಸಿನಿಮಾಗಳು ನವೆಂಬರ್‌ನಲ್ಲಿ ತೆರೆಗೆ ಬರೋಕೆ ಸಜ್ಜಾಗಿವೆ. ಈ ತಿಂಗಳ ನಾಲ್ಕು ವಾರದೊಳಗೆ ಹತ್ತಕ್ಕು ಹೆಚ್ಚು ಸಿನಿಮಾಗಳು ಚಿತ್ರ ಮಂದಿರಕ್ಕೆ ಎಂಟ್ರಿ ಕೊಡಲು ಸಿದ್ಧವಾಗಿವೆ.

ನವೆಂಬರ್ 5 ರಂದು ಬಿಗ್ ಬಾಸ್ ದಿವಾಕರ್ ಅಭಿನಯದ ಗುಲಾಲ್ ಡಾಟ್ ಕಾಮ್ ಚಿತ್ರ ರಿಲೀಸ್ ಆಗಿದೆ. ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಸಿನಿಮಾ ನವೆಂಬರ್ 12ಕ್ಕೆ ತೆರೆಗೆ ಬರುತ್ತಿದೆ. ಪ್ರೇಮಂ ಪೂಜ್ಯಂ ಹಲವು ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ. ಇದು ನಟ ಪ್ರೇಮ್ ಅಭಿನಯದ ೨೫ನೇ ಸಿನಿಮಾ. ಟೀಸರ್ ಮತ್ತು ಹಾಡುಗಳಿಂದ ಪ್ರೇಮಂ ಪೂಜ್ಯಂ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದೇ ದಿನ ರಾಘವ್ ವಿನಯ ಶಿವಗಂಗೆ ನಿರ್ದೇಶನದ, ನಿಶ್ಚಿತ್ ಮತ್ತು ಜೋಡಿಹಕ್ಕಿ ಖ್ಯಾತಿಯ ಚೈತ್ರ ರಾವ್ ನಟನೆಯ ಟಾಮ್ & ಜರ‍್ರಿ ಸಿನಿಮಾ ತೆರೆಕಾಣಲು ಸಿದ್ದವಾಗಿದೆ. ಇನ್ನು ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಮುಗಿಲ್ ಪೇಟೆ ಸಿನಿಮಾ ಇದೇ ನವೆಂಬರ್ 19ಕ್ಕೆ ತೆರೆ ಕಾಣುತ್ತಿದೆ,ಈ ವಿಚಾರವನ್ನು ಚಿತ್ರತಂಡ ಅಧಿಕೃತ ಪಡಿಸಿದೆ. ಹಾಗೂ 19ರಂದೆ ರಿಶಬ್ ಶೆಟ್ಟಿ ಮತ್ತು ರಾಜ್ ಬಿ ಶಟ್ಟಿ ಮುಖ್ಯ ಭೂಮಿಕೆಯ ಗರುಡ ಗಮನ ವೃಷಭ ವಾಹನ ರಿಲೀಸ್ ಆಗುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಕ್ಕತ್ ಚಿತ್ರ ಈ ತಿಂಗಳ 26ರಂದು ತೆರೆಗಪ್ಪಳಿಸಲಿದೆ. ಈ ಚಿತ್ರಗಳ ಜೊತೆಗೆ ಲೂಸ್ ಮಾದ ಯೋಗಿಯವರ ಒಂಭತ್ತನೇ ದಿಕ್ಕು ಚಿತ್ರ , ನಟ ರಮೇಶ್ ಅರವಿಂದ್ ಮತ್ತು ರಚಿತಾ ರಾಮ್ ಅಭಿನಯದ 100 ಚಿತ್ರ ಕೂಡ ಇದೇ ತಿಂಗಳು ತೆರೆಗೆ ಬರಲಿದೆ. ಇನ್ನು ಉಳಿದಂತೆ ಹಿಟ್ಲರ್, ಬೈ1 ಗೆಟ್1 ಫ್ರೀ, ಎಲ್ಲೋ ಬೋರ್ಡ್ ಮತ್ತು ಸ್ನೇಹಿತ ಸಿನಿಮಾಗಳು ಇದೇ ನವೆಂಬರ್‌ನಲ್ಲಿ ತೆರೆಗೆ ಬರುತ್ತಿದೆ.

ಇದು ಚಿತ್ರಗಳಿಗೆ ಒಂದು ರೀತಿ ಸಂಕಷ್ಟ. ಒಂದು ಕಡೆ ಚಿತ್ರಮಂದಿರದ ಸಮಸ್ಯೆ ಎದುರಾದರೆ. ಮತ್ತೊಂದು ಕಡೆ ಸಿನಿಮಾ ರಿಲೀಸ್ ಆದ ಒಂದೇ ವಾರಕ್ಕೆ ಥಿಯೇಟರ್ ಬಿಡುವ ಸಮಸ್ಯೆ ಎದುರಾಗಬಹುದು. ಹಾಗಾಗಿ ರಿಲೀಸ್ ಆಗುವ ಚಿತ್ರಗಳಲ್ಲಿ ಯಾವ ಚಿತ್ರಗಳನ್ನು ಪ್ರೇಕ್ಷಕ ಕೈ ಹಿಡಿಯುತ್ತಾನೋ ಎಂಬುದನ್ನು ನೋಡಬೇಕಿದೆ.

ರೂಪೇಶ್ ಫಿಲಂ ಬ್ಯೂರೋ, ಕರ್ನಾಟಕ ಟಿವಿ.

- Advertisement -

Latest Posts

Don't Miss