ಹುಬ್ಬಳ್ಳಿ: ಭಾರತೀಯ ಜನತಾ ಪಾರ್ಟಿ ಎಂದಿಗೂ ಕೂಡ ಯಾವುದೇ ಜಾತಿಯನ್ನು ಕಡೆಗಣಿಸಿಲ್ಲ. ಎಂದೂ ಇಲ್ಲದ ಜಾತಿ ಪ್ರೇಮ ಇಂದು ಉಕ್ಕಿ ಹರಿಯುತ್ತಿರುವುದನ್ನು ನೋಡಿದರೆ ನಿಜಕ್ಕೂ ನನಗೆ ಮುಜುಗರ ಉಂಟಾಗುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಲಿಂಗಾಯತರಿಗೆ ಮಾತ್ರವಲ್ಲದೆ ಯಾವುದೇ ಜಾತಿ ಜನಾಂಗದವರನ್ನು ಬಿಜೆಪಿ ಕಡೆಗಣನೆ ಮಾಡಿಲ್ಲ. ಅಲ್ಲದೇ ಲಿಂಗಾಯತರನ್ನು ಕಡೆಗಣನೆ ಮಾಡಿದೆ ಧಾರವಾಡ ಜಿಲ್ಲೆಯಲ್ಲಿಯೇ ಎಳು ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಿದೆ ಎಂದರು
ರಾಜ್ಯದ ಇತಿಹಾಸವನ್ನು ನೋಡುವುದಾದರೆ ಲಿಂಗಾಯತರೆ ಹೆಚ್ಚಿನ ಸಂಖ್ಯೆಯಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಅಲ್ಲದೆ ಯಾವುದೇ ರೀತಿಯಲ್ಲಿ ಕಡೆಗಣನೆ ಮಾಡಿಲ್ಲ ಎಂದು ಅವರು ಹೇಳಿದರು.
ಬಕೆಟ್ ಹಿಡಿದವರಿಗೆ ಟಿಕೆಟ್ ನೀಡಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾಳೆ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಎಲ್ಲ ವಿಷಯದ ಬಗ್ಗೆ ಸ್ಪಷ್ಟನೆ ನೀಡುತ್ತೇನೆ. ಅಲ್ಲದೇ ಇಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿದೆ. ಸೂಕ್ತ ಸ್ಥಾನಮಾನವನ್ನು ಕೂಡ ನೀಡಿ ಗೌರವಯುತವಾಗಿ ನಡೆಸಿಕೊಂಡು ಬಂದಿದೆ ಎಂದು ಅವರು ಹೇಳಿದರು.
Letter Story: ಯಾರೋ ಬರೆದು ಕೊಟ್ಟ ಪತ್ರವನ್ನು ಅಧ್ಯಕ್ಷರು ಬಹಿರಂಗ ಪಡಿಸಿದ್ದಾರೆ: ಪ್ರದೀಪ್ ಶೆಟ್ಟರ್..!
Rayareddy Angry: ನಾನು ಸಿಟ್ಟಾಗಿದ್ದಕ್ಕೆ ಸಮಸ್ಯೆಗೆ ಪರಿಹಾರ’ : ರಾಯರೆಡ್ಡಿ
Bjp logo: ಜಗದೀಶ್ ಶೆಟ್ಟರ್ ಆರು ಬಾರಿ ಶಾಸಕರಾಗಿದ್ದೂ ಬಿಜೆಪಿ ಚಿಹ್ನೆಯಿಂದಲೇ.!!