Tuesday, October 14, 2025

Latest Posts

‘ಸಿಂಹನಾ? ನಾಯಿ ಅಂತ ಹೆಸರಿಟ್ರೆ ಸೂಕ್ತ’- ಶಾಸಕ ಉದಯ್

- Advertisement -

ಮದ್ದೂರು ಕಾಂಗ್ರೆಸ್ ಶಾಸಕ ಕೆ.ಎಂ. ಉದಯ್ ಅವರು ಮಾಜಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರತಾಪ್‌ ಸಿಂಹನನ್ನು ಕೆಲವರು ತಪ್ಪಾಗಿ ಸಿಂಹ ಅಂತ ಹೆಸರಿಟ್ಟಿದ್ದಾರೆ. ಆತನ ಹೆಸರ ಮುಂದೆ ನಾಯಿ ಅಂತ ಹೆಸರಿಡಬೇಕಾಗಿತ್ತು. ನಿಜವಾಗಿ ಅವನ ನಡೆ-ನುಡಿಗಳು ಸರಿಯಿಲ್ಲ. ಮೈಸೂರಿನಲ್ಲಿ ಹಲವರು ಅವನನ್ನು ಕಚ್ಚೆಹರುಕನೆಂದೇ ಹೇಳುತ್ತಾರೆ. ಅವನ ಹೆಂಡತಿಯೇ ಸಹ ಅವನ ಕಿರುಕುಳ ಸಹಿಸಿಕೊಳ್ಳಲಾಗದೆ ಬಿಜೆಪಿ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಟಿಕೆಟ್‌ ಕೊಡದೆ ಪಕ್ಷವೇ ಅವನನ್ನು ಮನೆಗೆ ಕೂರಿಸಿತು. ಇವನಂಥವನು ಮಂಡ್ಯ ಜನತೆಗೆ ಬುದ್ಧಿ ಹೇಳ್ತಾನಾ? ಎಂದು ಪ್ರಶ್ನಿಸಿದ್ದಾರೆ.

ಮಂಡ್ಯವನ್ನು ಮಂಗಳೂರು ಮಾದರಿಯಲ್ಲಿ ಅಶಾಂತಿಗೊಳಿಸಲು ಯತ್ನಿಸುತ್ತಿದ್ದಾರೆ. ಪ್ರಚೋದನೆಯಿಂದ ಅಲ್ಲಿ ಯುವಕರು ಬಲಿಯಾಗಿದ್ದಾರೆ. ಅದೇ ಆಟವನ್ನು ಇಲ್ಲಿಯೂ ಆಡಲು ಹೊರಟಿದ್ದಾರೆ. ಆದರೆ ಮಂಡ್ಯದ ಜಾಗೃತ ಜನರು ಇದಕ್ಕೆ ಅವಕಾಶ ನೀಡುವುದಿಲ್ಲ. ಮದ್ದೂರಿನ ಗಣೇಶಮೂರ್ತಿ ಮೇಲೆ ನಡೆದ ಕಲ್ಲು ತೂರಾಟವನ್ನು ರಾಜಕೀಯ ಲಾಭಕ್ಕಾಗಿ ಬಳಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇಂತಹ ದುರುದ್ದೇಶವನ್ನು ಜನರು ತಿರಸ್ಕರಿಸುತ್ತಾರೆ, ಎಂದು ಎಚ್ಚರಿಕೆ ನೀಡಿದರು.

ಕಲ್ಲು ತೂರಾಟ ಮಾಡಿದವರಿಗೆ ಕ್ಷಮೆಯಿಲ್ಲ, ಅವರ ವಿರುದ್ಧ ಕಠಿಣ ಕ್ರಮವಾಗಲಿದೆ. ಯಾವ ಪಕ್ಷದವರೇ ಆಗಿದ್ದರೂ ಸಮಾಜದ ಶಾಂತಿ ಕಾಪಾಡಬೇಕು. ಆದರೆ ಬಿಜೆಪಿ ಸರ್ಕಾರದಲ್ಲಿ ಮದ್ದೂರು ತಾಲೂಕಿಗೆ ಕೊಡುಗೆ ಏನೂ ಇಲ್ಲ. ದೇವಸ್ಥಾನಗಳಿಗೂ, ರೈತರಿಗೂ, ರಸ್ತೆ ಅಭಿವೃದ್ಧಿಗೂ ಯಾವುದೇ ನೆರವು ನೀಡಿಲ್ಲ. ಆದರೆ ನಮ್ಮ ಸರ್ಕಾರದಲ್ಲಿ 1,500 ಕೋಟಿ ರೂ.ಗಳ ಅಭಿವೃದ್ಧಿ ಕೆಲಸಗಳು ನಡೆದಿವೆ. ಆದ್ದರಿಂದ ಜನರನ್ನು ಎತ್ತಿಕಟ್ಟುವ ಆಟ ಬಿಟ್ಟು ಅಭಿವೃದ್ಧಿಗೆ ಗಮನಹರಿಸಲಿ ಎಂದು ಬಿಜೆಪಿ ನಾಯಕರ ವಿರುದ್ಧ ಟೀಕೆ ಮಾಡಿದ್ದಾರೆ.

ಬಿ.ವೈ. ವಿಜಯೇಂದ್ರ ಮತ್ತು ಸಿ.ಟಿ. ರವಿ ವಿರುದ್ದವೂ ಉದಯ್ ಕಿಡಿಕಾರಿದರು. ಅಧಿಕಾರಕ್ಕಾಗಿ ಜನ ಕಷ್ಟಪಟ್ಟಿದ್ದು ಮರೆತುಬಿಟ್ಟಿದ್ದಾರೆ. ಅವರ ಕುಟುಂಬದವರ ಮೇಲೆ ಲಂಚ, ಪೋಕ್ಸೋ, ರೇಪ್ ಸೇರಿದಂತೆ ಎಷ್ಟು ಪ್ರಕರಣಗಳಿವೆ. ಇಂತಹವರು ಬಂದು ಮದ್ದೂರನ್ನು ಉಳಿಸುತ್ತಾರಾ? ಮಲೆನಾಡಿನಿಂದ ಬಂದವರು ಇಲ್ಲಿ ಬಂದು ಬುದ್ಧಿ ಹೇಳುವ ಅಗತ್ಯವೇ ಇಲ್ಲ. ಮೊದಲು ತಮ್ಮ ಮನೆಯನ್ನು ತೂತು ಸರಿಪಡಿಸಿಕೊಳ್ಳಲಿ ಎಂದು ಶಾಸಕ ಉದಯ್ ವ್ಯಂಗ್ಯವಾಡಿದ್ದಾರೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss