www.karnatakatv.net : ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಭಾರತೀಯ ಜನತಾ ಪಕ್ಷದಿಂದ ಪ್ರತ್ಯೇಕವಾಗಿ ಸಿದ್ಧತೆ ಅಂತ ಏನು ಇಲ್ಲ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸಂಘಟನಾತ್ಮಕವಾದ ಪಕ್ಷ ಆಗಿರುವ ಹಿನ್ನೆಲೆಯಲ್ಲಿ ಮೊದಲಿನಿಂದಲೂ ನಮ್ಮಲ್ಲಿ ಸಿದ್ದತೆ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗುವುದು. ವಾರ್ಡ್ ಅಧ್ಯಕ್ಷರ ಮೂಲಕ ಬರುವ ಆಕಾಂಕ್ಷಿಗಳ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಆಕಾಂಕ್ಷಿಗಳು ಇಂದು ಸಂಜೆಯೊಳಗೆ ಅರ್ಜಿಗಳನ್ನು ವಾರ್ಡ್ ಅಧ್ಯಕ್ಷರಿಗೆ ಸಲ್ಲಿಸಬೇಕು ಎಂದರು.
ಇನ್ನೂ ಸ್ವೀಕರಿಸಿದ ಅರ್ಜಿಯನ್ನು ವಾರ್ಡ್ ಅಧ್ಯಕ್ಷರು ಅರ್ಜಿಗಳನ್ನು ಮಂಡಲ ಅಧ್ಯಕ್ಷರಿಗೆ ನೀಡಬೇಕು. ಅವರು ಅರ್ಜಿಗಳನ್ನು ಸ್ಕ್ರೀನಿಂಗ್ ಕಮಿಟಿಗೆ ನೀಡುತ್ತಾರೆ. ನಾಡಿದ್ದು ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು. ಬಿಜೆಪಿಯಲ್ಲಿ ಟಿಕೆಟ್ ಗೆ ಅರ್ಜಿ ಪಡೆಯಲು ಶುಲ್ಕ ಪಡೆಯಲಾಗುತ್ತಿಲ್ಲ. ಕಾಂಗ್ರೆಸ್ ನಂತೆ ಅರ್ಜಿಯಿಂದ ಹಣ ಮಾಡುವ ಅನಿವಾರ್ಯತೆ ನಮ್ಮ ಪಕ್ಷಕ್ಕೆ ಇಲ್ಲ ಎಂದು ಅವರು ಹೇಳಿದರು.
ಇನ್ನೂ ಅಫ್ಘಾನಿಸ್ತಾನದ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅಫಘಾನಿಸ್ಥಾನದ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಅಲ್ಲಿಯ ಭಾರತೀಯ ನಿವಾಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಬದ್ಧವಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯರ ರಕ್ಷಣೆಯ ಪ್ರಯತ್ನದಲ್ಲಿದ್ದೇವೆ. ಅಲ್ಲಿಯ ಜನರ ಜೀವನ ಕಾಪಾಡುವುದು ಅತ್ಯವಶ್ಯಕವಿದೆ. ಅಮೇರಿಕಾ ಸರ್ಕಾರ ಜನರ ರಕ್ಷಣೆ ಬಗ್ಗೆ ಖಾಳಜಿ ತೋರಬೇಕು ಎಂದು ಅವರು ಹೇಳಿದರು.
ಕರ್ನಾಟಕ ಟಿವಿ ಹುಬ್ಬಳ್ಳಿ