Sunday, October 27, 2024

Latest Posts

Pune : ಲಿವ್ ಇನ್ ಸಂಬಂಧದಲ್ಲಿ ಒಂದಾಗಿ ಬಾಳುತ್ತಿರುವ ಹಿರಿಯ ಜೀವಗಳು.!

- Advertisement -

ರಾಷ್ಟ್ರೀಯ ಸುದ್ದಿ : ಈಗಿನ ಆಧುನಿಕ ಯುಗದಲ್ಲಿ ನಗರಗಳಲ್ಲಿ ಲಿವ್ ಇನ್ ರಿಲೇಶನ್ ಸಂಬಂಧ ಹೆಚ್ಚಾಗುತ್ತಿದೆ. ಮದುವೆಯಾಗದೆ ಇದ್ದರೂ ಹೆಣ್ಣು ಮತ್ತು ಗಂಡು ಪರಸ್ಪರ ಒಪ್ಪಿಕೊಂಡು ಒಂದೇ ಮನೆಯಲ್ಲಿ ವಾಸಮಾಡುತ್ತಾರೆ ಇವರ ಮದ್ಯೆ ಎಲ್ಲಾ ರೀತಿಯ ಸಂಬಂಧಗಳು ನಡೆಯುತ್ತವೆ. ಸಮಾಜದ ಕಣ್ಣಿಗೆ ಗಂಡ ಹೆಂಡತಿ ತರ ಕಂಡರೂ ತಾಳಿ ಕಟ್ಟದೆ ಸಂಸಾರವನ್ನು ಮಾಡುತ್ತಾರೆ ಇಚ್ಚೆ ಪಟ್ಟರೆ ಮಕ್ಕಳನ್ನು ಸಹ ಹೊಂದಬಹುದು ಆದರೆ ಇದಕ್ಕೆ ಮನೆಯವರ ಒಪ್ಪಿಗೆ ಸಿಗುವುದು ತುಂಬಾ ಕಡಿಮೆ

ಈಗಿನ ಯುವಕ ಯುವತಿಯರಲ್ಲಿ ಈ ಸಂಬಂಧ ಜಾಸ್ತಿನೇ ಆಗಿಹೋಗಿದೆ ಮನೆಯವರ ವಿರೋಧದ ನಡುವೆಯು ಲಿವ್ ಇನ್ ಸಂಬಂಧವನ್ನು ಹೊಂದುತ್ತಾರೆ. ಮನೆಯವರು ನೋಡಿ ಬೆಳೆಸಿದ ಸಂಬಂಧಗಳೇ ಉಳಿಯದ ಈಗಿನ ಕಾಲದಲ್ಲಿ ಮನೆಯವರ ವಿರೋಧ ಕಟ್ಟಿಕೊಂಡು ಮಾಡಿದ ಈ ಸಂಬಂಧ ಎಷ್ಟು ದಿನ ಉಳಿಯುತ್ತೆ ನೀವೇ ಹೇಳಿ. ಆದರೆ ಇಲ್ಲೊಂದು ಲಿವ್ ಇನ್ ಕುಟುಂಬ ವಿಭಿನ್ನವಾಗಿದೆ. ಅಸಲಿಗೆ ಇವರು ಯುವಪೀಳಿಗೆಯವರು ಅಲ್ಲ ಬದಲಿಗೆ ಹಿರಿಯ ಜೀವಿಗಳು . ಈ ಜೋಡಿಯ ಹೆಸರು ಅನಿಲ್ ಯಾರೆಡ್ಡಿ , ಅಸಾವರಿ ಕುಲಕರ್ಣಿ.

ಹೌದು ಸ್ನೇಹಿತರೆ ಪುಣೆಯ ಈ 72 ವಯಸ್ಸಿನ  ಜೋಡಿಗಳು ಬರೋಬ್ಬರಿ ಒಂಬತ್ತು ವರ್ಷಗಳಿಂದ ಒಟ್ಟಿಗೆ ಲಿವ್ ಇನ್ ರಿಲೇಶನ್ ನಲ್ಲಿ ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಪ್ರೀತಿಯಿಂದ ಒಟ್ಟಿಗೆ ಬಾಳುತ್ತಿದ್ದಾರೆ.  ಈ ಜೋಡಿಯ ಹೆಸರು ಅನಿಲ್ ಯಾರೆಡ್ಡಿ ಮತ್ತು ಅಸಾವರಿ ಕುಲಕರ್ಣಿ. 2013 ರಲ್ಲಿ  ಪತ್ನಿಯನ್ನು ಕಳೆದುಕೊಂಡ ಅನೀಲ್ ಎರಡು ವರ್ಷಗಳ ಕಾಲ ಒಂಟಿಯಾಗಿ ಜೀವಿಸಿದರು  ಮಗಳ ಮದುವೆಯನ್ನು ಮಾಡಿದರು. ಇನ್ನು ಅಸಾವರಿ ಕುಲಕರ್ಣಿಯವರು ಪತಿಯನ್ನು ಕಳೆದುಕೊಂದು 16 ವರ್ಷಗಳ ಕಾಲ ಕುಟುಂಬದೊಂದಿಗೆ ಜೀವಿಸಿದರು, ಆದರೆ ಅವಳಿಗೂ ಒಂಟಿತನ ಕಾಡಲಾರಂಭಿಸಿತು. ಸುಖ ದುಃಖವನ್ನು ಹಂಚಿಕೊಳ್ಳಲು ಜೊತೆಗಾರನ ಅವಶ್ಯಕತೆ ಎದುರಾಯಿತು.

ಸ್ನೇಹಿತರಿಂದ ಲಿವ್ ಇನ್ ರಿಲೇಶನ್ ಬಗ್ಗೆ ಮಾಹಿತಿ ತಿಳಿದುಕೊಂಡ ಇವರಿಬ್ಬರು ಅವರು  ಪುಣೆಯ ಒಂದು ಸಂಘಟನೆಯಲ್ಲಿ ಪರಿಚಯವಾಗದರು. ಇಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಲಿವ್ ಇನ್ ಸಂಬಂಧದಲ್ಲಿ ಇರಲು ಒಪ್ಪಿಕೊಂಡರು ಸಂಸಾರ ನಡೆಸುತ್ತಿದ್ದಾರೆ. ಇನ್ನು ಇವರ ಈ ಸಂಬಂಧ ಯುವ ಪೀಳಿಗೆಗೆ ಸ್ಪೂರ್ತಿ ಎಂದರೆ ತಪ್ಪಾಗಲಾರದು.

HD Kote: ಆಫ್ರಿಕನ್ ಹಂದಿ ಜ್ವರ: ಮೈಸೂರು ಜಿಲ್ಲೆಯ ಕೇರಳ ಗಡಿಯಲ್ಲಿ ತಪಾಸಣೆ.!

Factory: ಕಾರ್ಖಾನೆಯಿಂದ ಪ್ರಾಣ ಸಂಕಟ, ಮನವಿ ಸಲ್ಲಿಸಿದರೂ ಸಿಗುತ್ತಿಲ್ಲ ಪರಿಹಾರ;

Speaker Wishes : ಚಂದ್ರನ ಅಂಗಳದಲ್ಲಿ ವಿಕ್ರಮ: ಬಸವರಾಜ ಹೊರಟ್ಟಿ ಕೋಟಿ ಕೋಟಿ ಅಭಿನಂದನೆ..

- Advertisement -

Latest Posts

Don't Miss