Thursday, September 19, 2024

Latest Posts

ಈ ಹಳ್ಳಿಯಲ್ಲಿ ಕಲ್ಲಿಗೂ ಜೀವ ಇದೆ.. ಬೆಳೆಯುತ್ತೆ ಚಲಿಸುತ್ತೆ!

- Advertisement -

ಕಲ್ಲುಗಳು ಚಲಿಸುವ ಬಗ್ಗೆ ಕೇಳಿದ್ದೀರಾ? ಕಲ್ಲುಗಳಿಂದ ಮತ್ತೊಂದು ಕಲ್ಲು ಸೃಷ್ಟಿಯಾಗುವ ಬಗ್ಗೆ ನಿಮಗೆ ಗೊತ್ತಿದೆಯಾ? ಆದರೆ, ಇಂತಹದ್ದೊಂದು ವಿಶಿಷ್ಟ ಕಲ್ಲುಗಳ ಲೋಕ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ರೊಮೇನಿಯಾ ದೇಶದ ಕೊಸ್ತೆಸ್ತಿ ಅನ್ನೋ ಹಳ್ಳಿಯಲ್ಲಿ ಚಮತ್ಕಾರಿ ಕಲ್ಲುಗಳಿದೆ. ಇದರ ವಿಶೇಷತೆ ಏನಂದ್ರೆ, ಇಲ್ಲಿ ಕಲ್ಲುಗಳಿಗೆ ಚಲಿಸುವ ಮತ್ತು ಬೆಳೆಯುವ ಗುಣಗಳಿದೆ. ಈ ಕಲ್ಲುಗಳಿಗೆ ಜೀವವಿದೆ ಎಂದೇ ಇಲ್ಲಿನ ಜನರು ನಂಬಿದ್ದಾರೆ. ಅದೆಷ್ಟೋ ಲಕ್ಷಾಂತರ ವರ್ಷಗಳ ಇತಿಹಾಸ ಇರುವ ಅಪರೂಪದ ಕಲ್ಲುಗಳು ಇವು. ಇಲ್ಲಿನ ಜನರು ಈ ಕಲ್ಲುಗಳನ್ನು ಟ್ರೊವೆಂಟ್ಸ್ ಎಂದು ಕರೆಯುತ್ತಾರೆ. ಈ ಕಲ್ಲುಗಳು ಚಲಿಸುತ್ತವೆ, ಬೆಳೆಯುತ್ತವೆ ಮತ್ತು ಹೊಸ ಚಿಕ್ಕ ಚಿಕ್ಕ ಕಲ್ಲುಗಳನ್ನೂ ಸೃಷ್ಟಿಸುತ್ತವೆ. ಸಾಕಷ್ಟು ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.


ಇದು ಬಲು ಅಪರೂಪದ ಕಲ್ಲುಗಳೂ ಹೌದು. ಟ್ರೊವೆಂಟ್ಗಳು ಮರಳುಗಲ್ಲಿನಿಂದ ಸುತ್ತುವರಿದ ಗಟ್ಟಿಯಾದ ಕಲ್ಲುಗಳು. ಅತ್ಯಂತ ಚಿಕ್ಕ ಗಾತ್ರದಿಂದ ಹಿಡಿದು ಸಾಕಷ್ಟು ಟನ್ಗಳಷ್ಟು ತೂಕದ ಕಲ್ಲುಗಳಾಗಿಯೂ ಇವುಗಳು ಬದಲಾಗುತ್ತವೆ. ಇವುಗಳು ರೊಮೇನಿಯಾದ ನಿರ್ದಿಷ್ಟ ಪ್ರದೇಶಗಳಲ್ಲಿ ಕಂಡುಬರುವ ವಿಸ್ಮಯಕಾರಿಯ ಬಂಡೆಗಳ ರಚನೆಯಾಗಿದೆ. ಭಾರೀ ಮಳೆ ಬಂದಾಗ ಅಥವಾ ಈ ಕಲ್ಲುಗಳು ನೀರಿನ ಸಂಪರ್ಕಕ್ಕೆ ಬಂದಾಗ ಇವುಗಳಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಈ ಕಲ್ಲು ಅಣಬೆಯ ರೀತಿ ಬೆಳೆಯುತ್ತದೆ. ಕೆಲವು ಮಿಲಿಮೀಟರ್ನಿಂದ ಹತ್ತು ಮೀಟರ್ ತನಕ ಈ ಕಲ್ಲುಗಳು ದೊಡ್ಡದಾಗುತ್ತವೆ. ಜತೆಗೆ, ಸಣ್ಣ ಕಲ್ಲುಗಳು ಅಷ್ಟೇ ಬೇಗ ಬೆಳೆಯುತ್ತವೆ.

ಈ ಸುದ್ದಿಯನ್ನೂ ಓದಿ: ರಾಜ್ಯಪಾಲ vs ಸರ್ಕಾರ; ಇಕ್ಕಟ್ಟಿಗೆ ಸಿಲುಕಿದ ಸಿದ್ದು ಸರ್ಕಾರ


ಬರೀ ಅಷ್ಟೇ ಅಲ್ಲ ಇನ್ನೊಂದು ವಿಶೇಷ ಎಂದರೆ ಈ ಕಲ್ಲುಗಳು ತನ್ನಷ್ಟಕ್ಕೇ ಚಲಿಸುವ ಶಕ್ತಿಯನ್ನೂ ಹೊಂದಿವೆ. ಕಲ್ಲುಗಳ ಈ ಚಲನೆಗೆ ತಾಪಮಾನದಲ್ಲಾಗುವ ಏರಿಳಿತವೇ ಕಾರಣ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಭೂಮಿ ಬಿಸಿಯಾದಾಗ ಅಥವಾ ತಣ್ಣಗಾದಾಗ ಇವುಗಳಲ್ಲಿ ಚಲನೆ ಕಾಣುತ್ತದೆ ಎಂದು ಹೇಳಲಾಗುತ್ತದೆ. ವಿಜ್ಞಾನಿಗಳು ಸೇರಿದಂತೆ ಎಲ್ಲರನ್ನೂ ಸೆಳೆದಿರುವ ಕಲ್ಲುಗಳು ಇವುಗಳು. ಲಕ್ಷಾಂತರ ವರ್ಷಗಳ ಹಿಂದೆ ಸಂಭವಿಸಿದ್ದ ಭೂಕಂಪದಿಂದ ಈ ಕಲ್ಲುಗಳು ಸೃಷ್ಟಿಯಾದವು ಎಂಬುದು ಇಲ್ಲಿನವರ ನಂಬಿಕೆ. ತನ್ನ ಚಲಿಸುವ ಮತ್ತು ಹೊಸ ಸೃಷ್ಟಿಯ ಕಾರಣದಿಂದ ಇಲ್ಲಿನ ಜನ ಈ ಕಲ್ಲುಗಳಿಗೆ ಜೀವ ಇದೆ ಎಂದು ನಂಬಿದ್ದಾರೆ.

ಈ ಸುದ್ದಿಯನ್ನೂ ಓದಿ: ಗಂಡನಿಂದ ಪ್ರತಿ ತಿಂಗಳು 6 ಲಕ್ಷ ಬೇಕು – ಮಹಿಳೆಗೆ ಹೈಕೋರ್ಟ್ ತರಾಟೆ


ಹೀಗೆ ಕಲ್ಲುಗಳು ಬೆಳೆಯಲು, ಚಲಿಸಲು ಕಾರಣ ಏನಿರಬಹುದು?. ನೀರಿನ ಸಂಪರ್ಕಕ್ಕೆ ಬರುತ್ತಿದ್ದಂತೆಯೇ ಈ ಕಲ್ಲುಗಳಲ್ಲಿ ಸಣ್ಣ ಸಣ್ಣ ಇತರ ಕಲ್ಲುಗಳು ಮೂಡಲಾರಂಭಿಸುತ್ತವೆ. ಹೀಗೆ ಸಣ್ಣದಾಗಿ ಚಿಗುರಿದ ಈ ಕಲ್ಲುಗಳು ಬೆಳೆದು ದೊಡ್ಡದಾಗುತ್ತಿದ್ದಂತೆಯೇ ಬೆಳೆದ ಕಲ್ಲಿನಿಂದ ಪ್ರತ್ಯೇಕವಾಗುತ್ತದೆ. ಬಳಿಕ ಈ ಕಲ್ಲುಗಳಿಂದ ಹೊಸ ಕಲ್ಲುಗಳ ಸೃಷ್ಟಿಯಾಗುತ್ತದೆ. ಇಂತಹ ಗುಣದಿಂದಲೇ ಈ ಕಲ್ಲುಗಳನ್ನು ಜೀವ ಇರುವ ಕಲ್ಲುಗಳು ಎಂದೇ ಕರೆಯಲಾಗುತ್ತದೆ. ಪ್ರತಿ ಮಳೆಗಾಲದಲ್ಲಿ ಈ ಕಲ್ಲುಗಳಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಕಾಣಿಸುತ್ತದೆ ಎಂಬುದು ಸ್ಥಳೀಯರ ಮಾತು. ಈ ಟ್ರೊವೆಂಟ್‌ಗಳ ಬೆಳವಣಿಗೆಗೆ ಕ್ಯಾಲ್ಸಿಯಂ ಕಾರ್ಬೋನೇಟ್ ಹೇರಳವಾಗಿರುವ ಯಾವುದೇ ದ್ರವವಸ್ತು ಅಗತ್ಯ ಎಂಬುದು ತಜ್ಞರ ಮಾತು.

 


ಇದೇ ಕಾರಣದಿಂದ ಭಾರೀ ಮಳೆಯ ಬಳಿಕ ಟ್ರೊವೆಂಟ್ಸ್‌ ಮಳೆ ನೀರಿನಲ್ಲಿದ್ದ ಖನಿಜ ಲವಣಾಂಶಗಳನ್ನು ಹೀರಿಕೊಳ್ಳುತ್ತದೆ. ಈ ಖನಿಜಾಂಶಗಳು ಈಗಾಗಲೇ ಕಲ್ಲಿನಲ್ಲಿ ಅಡಕವಾಗಿರುವ ಇತರ ರಸಾಯನಿಕಗಳ ಸಂಪರ್ಕಕ್ಕೆ ಬರುತ್ತಿದ್ದಂತೆಯೇ ಬದಲಾವಣೆಗಳು ಆರಂಭವಾಗುತ್ತವೆ. ಇದೇ ಪ್ರಕ್ರಿಯೆ ಕಲ್ಲಿನ ಬೆಳವಣಿಗೆ, ಹೊಸ ಕಲ್ಲಿನ ಸೃಷ್ಟಿಗೆ ಕಾರಣವಾಗುತ್ತವೆ ಎಂದು ಅಂದಾಜಿಸಲಾಗಿದೆ. ಈ ಜಾಗ ಒಂದು ಅದ್ಭುತ ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದೆ. ಈ ವಿಶಿಷ್ಟ ಕಲ್ಲುಗಳನ್ನು ನೋಡಲು ದೂರ ದೂರದಿಂದ ಜನರೂ ಇಲ್ಲಿಗೆ ಬರುತ್ತಾರೆ. ಇದೇ ಕಾರಣಕ್ಕೆ ಈ ಜಾಗವನ್ನು ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಿಲಾಗಿದೆ…

ಬೆಂಗಳೂರಿಂದ ತುಮಕೂರಿಗೆ ಹೋಗಲು 1 ಲೀಟರ್ ಪೆಟ್ರೋಲ್ ಸಾಕು!

- Advertisement -

Latest Posts

Don't Miss