Monday, April 14, 2025

Latest Posts

Lokayukta: ಮಿನಿ ವಿಧಾನಸೌಧದ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ ಲೋಕಾಯುಕ್ತ ದಾಳಿ..!

- Advertisement -

ಧಾರವಾಡ : ಜಿಲ್ಲೆಯ ಮಿನಿ ವಿಧಾನಸೌಧದಲ್ಲಿರುವ ಸರ್ಕಾರಿ ಕಚೇರಿಗಳಲ್ಲಿಹಣವಿಲ್ಲದೆ ಕೆಲಸ ಆಗೋದಿಲ್ಲ ಅನ್ನೋ ವಾತಾವರಣ ಸೃಷ್ಟಿ ಆಗಿತ್ತು. ಜನಸಾಮಾನ್ಯರ ಜೇಬಿಗೆ ಕತ್ತರಿ  ಹಾಕಿ ಕೆಲಸ ಮಾಡತ್ತಿದ್ದ ಅಧಿಕಾರಿಗಳ  ವಿರುದ್ದ ಕರ್ನಾಟಕ ಟಿವಿ ವರದಿ ಬಿತ್ತರಿಸಿತ್ತು ವರದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಪ್ಪಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಿನಿ ವಿಧಾನಸೌಧದ ಅಧಿಕಾರಿಗಳು ಕಕ್ಕಾಬಿಕ್ಕಿ ಆಗಿದ್ದಾರೆ.

ಸೋಮವಾರ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ಫೀಲ್ಡಿಗೆ ಇಳಿದ್ದಿದ್ದು ಮಿನಿ ವಿಧಾನಸೌಧದಲ್ಲಿ ಹಿಂದುಳಿದ ವರ್ಗಗಳ ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸೇರಿದಂತೆ ಹತ್ತಕ್ಕೂ ಹೆಚ್ಚು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿದರು. ಈ ವೇಳೆ ಯಾವುದೇ ನೇಮಕಾತಿ ಆದೇಶವಿಲ್ಲದೆಯೇ ಅನಧೀಕೃತವಾಗಿ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಿಕ್ಕಿಬಿದ್ದರು.

ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಹಾಜರಿ ಪುಸ್ತಕದಲ್ಲಿ ಸಿಬ್ಬಂದಿ ತಿಂಗಳು ಕಳೆದರೂ ಸಹಿ ಮಾಡದೆ ಇರುವುದು ಪತ್ತೆಯಾಗಿದೆ. ಇನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಸಹಾಯಕ ಆಯುಕ್ತರ ಕಚೇರಿ ಮೇಲೆ ದಾಳಿ ಮಾಡಿದ ವೇಳೆ ಯಾವುದೆ ಆದೇಶವಿಲ್ಲದೆಯೇ ಅನಧೀಕೃತವಾಗಿ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಿಕ್ಕಿಬಿದ್ದರು.ಇನ್ನೂ ಕೆಲವು   ಕಚೇರಿಗಳಲ್ಲಿ ಸಮಯವಾದರೂ ಕಚೇರಿಗೆ ಬರದ ಅನೇಕ ಅಧಿಕಾರಿಗಳು, ಸಿಬ್ಬಂದಿಯನ್ನ ಲೋಕಾಯುಕ್ತ ಪೊಲೀಸರು ತರಾಟೆಗೆ ತೆಗೆದುಕೊಂಡರು. ಈ ದಾಳಿ ವೇಳೆ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ಪಡಿತರ ಚೀಟಿ ಸೇರಿದಂತೆ ಅನೇಕ ಸಮಸ್ಯೆಗಳ ದೂರು ನೀಡಿದರು.

ಇನ್ನು ಮುಂದೆ ಆದರೂ ಅಧಿಕಾರಿಗಳು ಜನ ಸಾಮಾನ್ಯರ ರಕ್ತವನ್ನು ಹಿರುವದು ಬಿಟ್ಟು,ಕೆಲಸ ಮಾಡಿಕೊಡುತ್ತಾರೋ ಇಲ್ಲ ಮತ್ತೆ ಹಳೆಯ ಚಾಳಿ ಮುಂದುವರೆಸುತ್ತಾರೋ ಅನ್ನೋದೂ ಮಾತ್ರ ಕಾದುನೋಡಬೇಕು.

HK Patil: ಮೋಡ ಬಿತ್ತನೆ ಕುರಿತು ಮುಖ್ಯಮಂತ್ರಿಗಳಿಗೆ ವಿಶ್ವಾಸ ಮೂಡಿಸುತ್ತೇನೆ..!

Clouds: ಹಾವೇರಿಯಲ್ಲಿ ಬರಗಾಲ ನಿವಾರಣೆಗೆ ಮೋಡ ಬಿತ್ತನೆ..!

Lingayath: ಎಂದೂ ಇಲ್ಲದ ಜಾತಿ ಪ್ರೇಮ ಇಂದು ಉಕ್ಕಿ ಹರಿಯುತ್ತಿದೆ; ತೆಂಗಿನಕಾಯಿ

- Advertisement -

Latest Posts

Don't Miss