ಧಾರವಾಡ : ರಾಜ್ಯಾದ್ಯಂತ ಇಂದು 11 ಕಡೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆದಿದೆ. ಅದರಲ್ಲಿ ಧಾರವಾಡ ಜಿಲ್ಲೆಯಲ್ಲೂ ಕೂಡ ನಡೆದಿದೆ. ತನ್ನ ಸಹೋದರನ ಮಗನ ಮದುವೆಗೆ ಹೊರಟಿದ್ದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರೊಫೆಸರ್ ಸುಭಾಷಚಂದ್ರ ನಾಟಿಕರ್ ಅವರಿಗೆ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದಾರೆ.
ನಾಟಿಕರ್ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಕವಿವಿ ಅಂಬೇಡ್ಕರ್ ಸ್ಟಡೀಸ್ ವಿಭಾಗದ ಸಂಯೋಜಕರೂ ಆಗಿದ್ದಾರೆ. ಧಾರವಾಡದ ಶೆಟ್ಟರ್ ಕಾಲೊನಿಯಲ್ಲಿರುವ ಮನೆ ಹೊಂದಿರುವ ನಾಟಿಕರ್ ಅವರು, ತಮ್ಮ ಸಹೋದರನ ಮಗನ ಮದುವೆಗೆಂದು ಹೊರಟಿದ್ದರು. ಇವರ ಮನೆಗೆ ಅತಿಥಿಗಳೂ ಆಗಮಿಸಿದ್ದರು. ಇದೇ ವೇಳೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ.
ಅಲ್ಲದೇ ಮದುವೆಗೆಂದು ಹೊರಟಿದ್ದ ಎಲ್ಲ ವಾಹನಗಳನ್ನು ಲೋಕಾಯುಕ್ತ ಪೊಲೀಸರು ತಪಾಸಣೆ ನಡೆಸಿಯೇ ಹೊರಬಿಟ್ಟಿದ್ದಾರೆ. ಲೋಕಾಯುಕ್ತ SP ಸಿದ್ಧಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗ, ಅಂಬೇಡ್ಕರ್ ಸ್ಟಡೀಸ್ ವಿಭಾಗದ ಮೇಲೂ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ



