ಬೀದರ್‌ ವಿವಿ ಭ್ರಷ್ಟರಿಗೆ ಲೋಕಾಯುಕ್ತ ಶಾಕ್

ಬೀದರ್‌ನ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿಶ್ವ ವಿದ್ಯಾಲಯದಲ್ಲಿ, ಬರೋಬ್ಬರಿ 22 ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಅಖಾಡಕ್ಕಿಳಿದ ಲೋಕಾಯುಕ್ತ ಟೀಂ, ಕರ್ನಾಟಕದ 69 ಕಡೆ ದಾಳಿ ಮಾಡಿದೆ. ವಿವಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಅಧಿಕಾರಿಗಳ ಮನೆಗಳ ಮೇಲೆ, ಏಕಕಾಲಕ್ಕೆ ದಾಳಿ ನಡೆಸಿದೆ.

2017ರಿಂದ 2021ರ ಅವಧಿಯಲ್ಲಿ, ಬೀದರ್‌ ವಿವಿಯಲ್ಲಿ, ಅವ್ಯವಹಾರ ನಡೆದಿದೆ ಅಂತಾ ವೆಂಕಟ್‌ ರೆಡ್ಡಿ ಎಂಬುವರು ದೂರು ಸಲ್ಲಿಸಿದ್ರು. 35 ಕೋಟಿ ರೂ. ಹಗರಣ ನಡೆದಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದರು. 35 ಕೋಟಿಯಲ್ಲಿ 22 ಕೋಟಿ ಹಗರಣ ನಡೆದಿರುವುದು ಪತ್ತೆಯಾಗಿತ್ತು.

ಹೀಗಾಗಿ 2017ರಿಂದ 2021ರ ಅವಧಿಯಲ್ಲಿ ಕೆಲಸ ನಿರ್ವಹಿಸಿದ್ದ ವಿವಿಯ ಕುಲಪತಿಗಳು, ಕುಲಸಚಿವರು, ಡೀನ್‌ಗಳು, ಅಧಿಕಾರಿಗಳು, ಎಂಜಿನಿಯರ್‌ಗಳು, ಸಿಬ್ಬಂದಿ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಶೋಧ ಕಾರ್ಯ ಕೈಗೊಂಡಿದ್ದಾರೆ. ವಿಶ್ವವಿದ್ಯಾಲಯದ ಅಧಿಕಾರಿಗಳು & ಸಿಬ್ಬಂದಿ, ಎಂಟರ್ಪ್ರೈಸ್ ಜೊತೆ ಶಾಮೀಲಾಗಿ ಪೀಠೋಪಕರಣ, ಸ್ಟೇಷನರಿ ಖರೀದಿಯಲ್ಲಿ ಅಕ್ರಮ ಎಸಗಿದ್ದಾರೆ ಎನ್ನಲಾಗ್ತಿದೆ.

ಬೆಂಗೂರಿನ 31 ಕಡೆ, ಬೀದರ್‌ ಜಿಲ್ಲೆಯ 24 ಕಡೆ, ಕೊಪ್ಪಳ-ಚಿಕ್ಕಮಗಳೂರಿನ ತಲಾ 2 ಕಡೆ, ರಾಮನಗರ, ಹಾಸನ, ಕೋಲಾರ, ಉಡುಪಿ ಸೇರಿ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಎಡಿಜಿಪಿ ಮನೀಷ್‌ ಖರ್ಬಿಕರ್‌, ಐಜಿಪಿ ಸುಬ್ರಮಣ್ಯರಾವ್ ನೇತೃತ್ವದಲ್ಲಿ, ಕಾರ್ಯಾಚರಣೆ ಕೈಗೊಳ್ಳಲಾಗಿದೆ.

2017ರಲ್ಲಿ ಬೀದರ್‌ನ ಪಶು ವೈದ್ಯಕೀಯ ಮೀನುಗಾರಿಕೆ ವಿವಿಯಲ್ಲಿ ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸಿದ್ದ, ಸುರೇಶ್‌ ಅವರ ಸಹೋದರ ಮಲ್ಲಿಕಾರ್ಜುನ್ ಅವರ ಚಿಕ್ಕಮಗಳೂರಿನ ಮನೆ ಮೇಲೆ, ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ.

About The Author