ಹಾವೇರಿ ಜಿಲ್ಲೆಯಲ್ಲಿ ಲೋಕಾಯುಕ್ತ ಪೊಲೀಸರು ಇಂದು ದೊಡ್ಡ ಮಟ್ಟದ ದಾಳಿ ನಡೆಸಿ, ಲಂಚ ಸ್ವೀಕರಿಸುವ ಕ್ಷಣದಲ್ಲೇ ಅಧಿಕಾರಿಗಳನ್ನು ಲಾಕ್ ಮಾಡಿದ್ದಾರೆ. ಈ ಘಟನೆ ಹಾನಗಲ್ ತಹಶಿಲ್ದಾರರ ಕಚೇರಿಯಲ್ಲಿ ನಡೆದಿದೆ.
ಆರ್‌ಟಿಸಿ ದುರಸ್ಥಿ ಮಾಡುವ ಕೆಲಸಕ್ಕಾಗಿ ನವೀನ್ ಎಂಬುವರಿಂದ 12 ಸಾವಿರ ರೂ. ಲಂಚ ಪಡೆಯುತ್ತಿದ್ದ ಶಿರಸ್ತೇದಾರ ತಮ್ಮಣ್ಣ ಕಾಂಬಳೆ ಮತ್ತು ಕೇಸ್ ವರ್ಕರ್ ಗೂಳಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಇವರಿಬ್ಬರ ಜೊತೆಗೂಡಿ, ಲಂಚ ವ್ಯವಹಾರದಲ್ಲಿ ಸಹಕರಿಸಿದ್ದ ಮತ್ತೊಬ್ಬ ಸಿಬ್ಬಂದಿ ಶಿವಾನಂದನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಮೂವರನ್ನು ಲೋಕಾಯುಕ್ತ ಇಲಾಖೆಯ ತಂಡ ಸ್ಥಳದಲ್ಲೇ ಲಾಕ್ ಮಾಡಿ ವಿಚಾರಣೆ ಆರಂಭಿಸಿದೆ. ಸಂಪೂರ್ಣ ಕಾರ್ಯಚರಣೆಯನ್ನು ಲೋಕಾಯುಕ್ತ ಎಸ್‌ಪಿ ಎಮ್.ಎಸ್. ಕೌಲಾಪುರೆ ಅವರ ನೇತೃತ್ವದಲ್ಲಿ ಅತ್ಯಂತ ನಿಖರವಾಗಿ ನಡೆಸಲಾಗಿದೆ. ಈ ದಾಳಿ ಹಾವೇರಿ ಜಿಲ್ಲೆಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆ ನೀಡಿದೆ. ಸರ್ಕಾರದ ಕಚೇರಿಗಳಲ್ಲಿ ಲಂಚ ವ್ಯವಹಾರ ನಡೆಸುವವರ ವಿರುದ್ಧ ಲೋಕಾಯುಕ್ತ ಇಲಾಖೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ