www.karnatakatv.net : ಚಾಮರಾಜನಗರ: 84 ವರ್ಷಗಳ ಹಿಂದೆ ಮದ್ರಾಸ್ ಗೌವರ್ನಮೆಂಟ್ ಅವಧಿಯಲ್ಲಿ ಸ್ಥಾಪನೆಗೊಂಡ ಚಾಮರಾಜನಗರ ಜಿಲ್ಲೆಯ ಲೊಕ್ಕನಹಳ್ಳಿ ಪೊಲೀಸ್ ಉಪ ಠಾಣೆಯನ್ನು ಬೇರೆ ಕಡೆ ಸ್ಥಳಾಂತರ ಮಾಡಬಾರದೆಂದು ಲೊಕ್ಕನಹಳ್ಳಿ ಭಾಗದ ಜನತೆ ವಿರೋಧ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿರುವ ಪೊಲೀಸ್ ಉಪ ಠಾಣೆಯನ್ನು ಒಡೆಯರ್ ಪಾಳ್ಯಕ್ಕೆ ಸ್ಥಳಾಂತರ ಮಾಡಲು ಪೊಲೀಸ್ ಇಲಾಖೆ ಮುಂದಾಗಿರುವ ಬಗ್ಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಮದ್ರಾಸ್ ಗೌವರ್ನಮೆಂಟ್ ಸ್ಥಾಪಿಸಿರುವ ಲೊಕ್ಕನಹಳ್ಳಿ ಪೊಲೀಸ್ ಉಪ ಠಾಣೆಯನ್ನು ತೆರವುಗೊಳಿಸದೆ ಒಡೆಯರ್ ಪಾಳ್ಯಕ್ಕೆ ಮತ್ತೊಂದು ಉಪ ಪೊಲೀಸ್ ಠಾಣೆಯನ್ನು ಮಂಜೂರು ಮಾಡಲಿ, ಲೊಕ್ಕನಹಳ್ಳಿ ಗ್ರಾಮ ಸುತ್ತ ಮುತ್ತ ಕನ್ನಡ ಮತ್ತು ತಮಿಳು ಮಾತನಾಡುವ ಜನರು ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಹಾಗಾಗಿ ಇಲ್ಲಿ ಪೊಲೀಸ್ ಠಾಣೆ ಇರುವುದರಿಂದ ಭಾಷೇಯ ಘರ್ಷಣೆಗಳು ಕಡಿಮೆಯಾಗಿದ್ದು, ಈ ಎಲ್ಲಾ ಮಾಹಿತಿಯನ್ನು ಕಲೆ ಹಾಕಿ ಲೊಕ್ಕನಹಳ್ಳಿ ಪೊಲೀಸ್ ಉಪ ಠಾಣೆಯನ್ನು ಸ್ಥಳಾಂತರ ಮಾಡಬಾರದೆಂದು ಸುಬ್ರಮಣ್ಯ ರವರು ಮನವಿ ಮಾಡಿದ್ದಾರೆ.
ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ