London: ಲಂಡನ್ ನಲ್ಲಿ ಭವ್ಯ ಬಂಗಲೆ ಖರೀದಿಸಿದ ಎಸ್ಸಾರ್ ಕಂಪನಿಯ ಮಾಲಿಕ..! ಬೆಲೆ ಎಷ್ಟು ಗೊತ್ತಾ

ಲಂಡನ್:ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ರಾಜಕೀಯ ನಾಯಕರು, ಸಿನಿಮಾ ನಟರು ಕ್ರೀಡಾ ಪಟುಗಳು ಉದ್ಯಮಿಗಳು ವಿದೇಶದಲ್ಲಿ ಆಸ್ತಿ ಮಾಡುವುದು ಸಾಮಾನ್ಯವಾಗಿದೆ . ಅದೇ ರೀತಿ ಈಗ ಮತ್ತೊಬ್ಬ ಉದ್ಯಮಿ ಭವ್ಯವಾದ ಬಂಗಲೆಯನ್ನು ಖರೀದಿ ಮಾಡಿದ್ದಾರೆ ಅದರ ಬೆಲೆ ಬರೋಬ್ಬರಿ145 ಮಿಲಿಯನ್ ಡಾಲರ್ ಆಗಿದೆ

ಬ್ಲೂಮ್‌ಬರ್ಗ್ ವರದಿಗಳ ಪ್ರಕಾರ, ಇದು ಇತ್ತೀಚಿನ ವರ್ಷದ ಅತ್ಯಂತ ದುಬಾರಿ ವ್ಯವಹಾರಗಳಲ್ಲಿ ಒಂದಾಗಿದೆ. ಭವ್ಯವಾದ ಈ ಆಧುನಿಕ ಅರಮನೆಯ ಬೆಲೆ 145 ಮಿಲಿಯನ್ ಡಾಲರ್ ಆಗಿದೆ.

ಎಸ್ಸಾರ್ ಗ್ರೂಪ್ ಒಂದು ಬಹುರಾಷ್ಟ್ರೀಯ ಸಂಸ್ಥೆಯಾಗಿದ್ದು, ಉಕ್ಕು, ತೈಲ ಮತ್ತು ಅನಿಲ, ವಿದ್ಯುತ್, ಹಡಗು, ಬಂದರುಗಳು ಮತ್ತು ಲಾಜಿಸ್ಟಿಕ್ಸ್ ಮತ್ತು ಖನಿಜಗಳ ಕ್ಷೇತ್ರಗಳಲ್ಲಿ ವ್ಯವಹಾರಗಳನ್ನು ಹೊಂದಿದೆ.

ಎರಡು ವರ್ಷಗಳ ಹಿಂದೆ ಕನ್ಸರ್ವೇಟಿವ್ ಪಾರ್ಟಿಯ ಸಹವರ್ತಿ ರಾಜ್ ಕುಮಾರ್ ಬಾಗ್ರಿ ಅವರಿಂದ 120 ಮಿಲಿಯನ್ ಪೌಂಡ್ ಎಂದರೆ 1,264 ಕೋಟಿ ರೂಪಾಯಿಗೆ ಆಸ್ತಿಯ ಬಾಕಿ ಇರುವ ಗುತ್ತಿಗೆಯನ್ನು ಅವರು 2012 ರಲ್ಲಿ ಖರೀದಿಸಿದ್ದರು.ಈಗ ಭಾರತೀಯ ಬಿಲಿಯನೇರ್ ರವಿ ರೂಯಾ, ಲಂಡನ್ ನ ಈ ಬಂಗಲೆಯನ್ನು 145 ಮಿಲಿಯನ್ ಡಾಲರ್ ಗೆ ಖರೀದಿಸಿದ್ದಾರೆ. ಈ ಭವ್ಯ ಬಂಗಲೆಯ ಹೆಸರು ‘ಹ್ಯಾನೋವರ್ ಲಾಡ್ಜ್’ ಆಗಿದೆ.

Anganavadi: ಅಂಗನವಾಡಿ ಮೇಲ್ಚಾವಣಿ ಇಲ್ಲದ ಕಾರಣ ಮಕ್ಕಳನ್ನು ಬೇರೆ ಕಡೆ ಸ್ಥಳಾಂತರ

Heaven Door : ಬೆಂಗಳೂರಲ್ಲಿ ಕಾಣಿಸಿಕೊಂಡ ಸ್ವರ್ಗದ ಬಾಗಿಲು..?!

Budjet: ಹುಬ್ಬಳ್ಳಿ ಅಭಿವೃದ್ದಿಗೆ ಅನುದಾನ ಸಿಗುತ್ತಿಲ್ಲ.ವಿಪಕ್ಷ ನಾಯಕಿ ಆರೋಪ

About The Author