Thursday, June 13, 2024

Latest Posts

ಮಹಾದೇವ ಶಿವನ ಅವತಾರಗಳ ಬಗ್ಗೆ ನಿಮಗೆಷ್ಟು ಗೊತ್ತು…?

- Advertisement -

Devotional :

ಕೈಲಾಸವಾಸಿ ಶಿವ, ತ್ರಿಮೂರ್ತಿಗಳಲ್ಲಿ ಒಬ್ಬರು ಶಿವನು ಪ್ರಪಂಚದ ಉದ್ಧಾರಕಾಗಿ ಅನೇಕಬಾರಿ ಅವತಾರಗಳನ್ನೆತ್ತಿದ್ದಾರೆ ಎಂಬಉಲ್ಲೇಖವಿದೆ ಶಿವನು ಭಕ್ತರ ಕೋರಿಕೆಗಳನ್ನು ಈಡೇರಿಸಲೂ ಹಲವಾರು ಬಾರಿ ಅವತಾರವನ್ನೆತ್ತಿದನು ಹಾಗಾದರೆ ಶಿವನ ಅವತಾರಗಳ ಬಗ್ಗೆ ತಿಳಿದೂ ಕೊಳ್ಳೋಣ .

ಪಿಪ್ಲಾದ ಅವತಾರ :
ಋಷಿ ದಧೀಚಿಗೆ ಪಿಪ್ಲಾದ ಎಂಬ ಹೆಸರಿನ ಮಗನಾಗಿ ಶಿವ ಜನ್ಮ ತಾಳುತ್ತಾನೆ. ಒಮ್ಮೆ ಶನಿ ದೆಸೆಯಿಂದಾಗಿ ಋಷಿ ದಧೀಚಿ ಮುನಿಗಳಿಗೆ ಅವರ ಮನೆ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ಇದರಿಂದ ಕೋಪಗೊಂಡ ಪಿಪ್ಲಾದನು ಶನಿಯನ್ನು ಶಪಿಸಿ ಗ್ರಹಗಳ ಸ್ಥಾನದಿಂದ ಹೊರಗೆ ಹಾಕಿದನು. ಬಳಿಕ ಶನಿಯ ಪ್ರಾರ್ಥನೆಗೆ ಕ್ಷಮಿಸಿ, 16 ವರ್ಷ ಪ್ರಾಯದೊಳಗಿನ ಯಾರಿಗೂ ತೊಂದರೆ ಕೊಡ ಬಾರದೆಂದು ಶನಿಯಿಂದ ಮಾತು ಪಡೆದನು. ಹೀಗಾಗಿ ಶಿವನ ಈ ಪಿಪ್ಲಾದ ಅವತಾರವನ್ನು ಪೂಜಿಸುವುದರಿಂದ ಶನಿ ದೋಷದಿಂದ ಮುಕ್ತಿ ಪಡೆಯಬಹುದು ಎನ್ನಲಾಗಿದೆ.

ನಂದಿ ಅವತಾರ :
ಈ ಅವತಾರದಲ್ಲಿ ಶಿವನೂ ಶಿಲಾದ ಋಷಿಗೆ ಜನಿಸಿದನು. ಶಿಲಾದ ಋಷಿಯು ಶಿವನ ಆಶೀರ್ವಾದವನ್ನು ಪಡೆಯಲು ತೀವ್ರ ತಪಸ್ಸು ಮಾಡಿ ಅಮರನಾಗಿ ಉಳಿಯುವ ಮಗುವನ್ನು ಕೇಳಿದರು. ಆಗ ಋಷಿಯ ಭಕ್ತಿಯಿಂದ ಸಂತೋಷಗೊಂಡ ಶಿವನು ನಂದಿಯಾಗಿ ಜನ್ಮ ತಾಳಿದನು.

ವೀರಭದ್ರ ಅವತಾರ :
ಶಿವನ ವೀರಭದ್ರ ಅವತಾರವು ಅವನ ಉಗ್ರ ರೂಪಗಳಲ್ಲಿ ಒಂದಾಗಿದೆ. ಪ್ರಜಾಪತಿ ದಕ್ಷನ ಯಜ್ಞಕುಂಡದಲ್ಲಿ ತನ್ನ ಪತ್ನಿ ಸತಿಯ ಮರಣದ ನಂತರ ಶಿವನು ಉಗ್ರ ರೂಪ ತಾಳಿ ಕೋಪದಿಂದ ತನ್ನ ಕೂದಲನ್ನು ಒಂದೊಂದಾಗಿ ಕಿತ್ತು ಬಿಸಾಡಿದನು. ಈ ರೀತಿ ಬಿದ್ದ ಕೂದಲ ಎಳೆಯಿಂದ ವೀರಭದ್ರ ಮತ್ತು ರುದ್ರಕಾಳಿ ಹುಟ್ಟಿಕೊಂಡರು. ಕೊನೆಗೆ ಶಿವನ ವೀರಭದ್ರ ರೂಪವು ರಾಜ ದಕ್ಷನ ತಲೆಯನ್ನು ಕತ್ತರಿಸಿದನು.

ಭೈರವ ಅವತಾರ :
ಭೈರವ ಅವತಾರವು ದುರಾಸೆ, ಕಾಮ ಮತ್ತು ಸೊಕ್ಕಿನಿಂದ ಮೆರೆಯುತ್ತಿರುವವರನ್ನು ಶಿಕ್ಷಿಸುವುದೇ ಭೈರವ ಅವತಾರದ ಉದ್ದೇಶ. ಬ್ರಹ್ಮನಿಗೆ ತಾನೇ ಶ್ರೇಷ್ಠನೆಂಬ ಅಹಂಕಾರವಿತ್ತು ಆಗ ಶಿವನು ಭೈರವ ಅವತಾರವನ್ನು ತಾಳಿ ಬ್ರಹ್ಮನ ಐದನೇ ಶಿರಸ್ಸನ್ನು ಕಡಿದನು.

ಅಶ್ವತ್ಥಾಮ ಅವತಾರ:
ಗುರು ದ್ರೋಣಾಚಾರ್ಯರು ಭಗವಂತ ತನ್ನ ಮಗನಾಗಿ ಜನಿಸಬೇಕೆಂದು ತೀವ್ರ ತಪಸ್ಸು ಮಾಡಿದ್ದರು. ನಂತರ  ಭಕ್ತಿಗೆ ಸಂತಸಗೊಂಡ ಶಿವನು ಮಹಾಭಾರತದಲ್ಲಿ ಸಮರ್ಥ ಯೋಧನಾಗಿ ಅಶ್ವತ್ಥಾಮನಾಗಿ ಜನ್ಮ ತಾಳಿದರು. ಅಲ್ಲದೆ ಮತ್ತೋಂದೆಡೆ ಈ ರೀತಿ ಉಲ್ಲೇಖವಾಗಿದೆ. ಸಮುದ್ರ ಮಂಥನದ ನಂತರ ಹಾಲಾಹಲ ಕುಡಿದ ಶಿವನಿಂದ ಹೊರಹೊಮ್ಮಿದ ವಿಷ ಪುರುಷನೇ ನಂತರ ದುಷ್ಟ ಕ್ಷತ್ರೀಯರನ್ನು ಕೊಲ್ಲಲು ಆಶೀರ್ವಾದ ಪಡೆದು ಭಾರದ್ವಾಜರ ಮೊಮ್ಮಗನಾಗಿ ಜನಿಸಿದನು. ಇದೇ ವಿಷಪುರುಷನೇ ದ್ರೋಣ ಮತ್ತು ಕೃಪಿಗೆ ಮಗನಾಗಿ ಜನಿಸಿದ ಅಶ್ವತ್ಥಾಮ ಎನ್ನಲಾಗಿದೆ.

ಶರಭ ಅವತಾರ:
ಹಿರಣ್ಯಕಶಿಪುವನ್ನು ಕೊಂದ ನಂತರ ವಿಷ್ಣುವಿನ ಅವತಾರವಾದ ಉಗ್ರನರಸಿಂಹನನ್ನು ಶಾಂತಗೊಳಿಸಲು ಶಿವನು ಶರಭ ಅವತಾರ ತಾಳಿದರು. ಸಿಂಹ ಮತ್ತು ಪಕ್ಷಿಯನ್ನೊಳಗೊಂಡ ಕಾಯದ ಶರಭ ಅವತಾರವಿದಾಗಿದೆ.

ಗೃಹಪತಿ ಅವತಾರ:
ವಿಶ್ವನರ್ ಎಂಬ ಋಷಿಯ ಪತ್ನಿಯು, ಶಿವನು ತನ್ನ ಮಗನಾಗಿ ಜನಿಸಬೇಕೆಂದು ಬಯಸಿದಳು. ಆದುದರಿಂದ ಋಷಿಯು ಕಾಶಿಯಲ್ಲಿ ತೀವ್ರ ತಪಸ್ಸು ಮಾಡಿದನು. ಕೆಲವು ದಿನಗಳ ನಂತರ, ವಿಶ್ವಾನರ ಭಕ್ತಿಗೆ ಮೆಚ್ಚಿದ ಶಿವನು ಋಷಿ ಮತ್ತು ಅವನ ಹೆಂಡತಿಗೆ ಗೃಹಪತಿಯಾಗಿ ಜನಿಸಿದನು. ವೇದಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಈತನು ಗ್ರಹದೆಸೆಯಿಂದ ತನ್ನ ಚಿಕ್ಕ ವಯಸ್ಸಿನಲ್ಲೇ ಮರಣ ಹೊಂದಬಹುದೆಂದು ತಿಳಿದು ಬಂತು. ಕಾಶಿ ಹೋಗಬೇಕೆಂಬ ಇವನಾಸೆ, ಇಂದ್ರನಿಂದಾಗಿ ವಿಫಲವಾದಾಗ ಸ್ವಯಂ ಶಿವನೇ ಇವನ ರಕ್ಷಣೆಗೆ ಬಂದು ಕಾಲವಜ್ರನೇ ಬಂದರೂ ಕೊಲ್ಲಲು ಸಾಧ್ಯವಿಲ್ಲವೆಂದು ಆಶೀರ್ವದಿಸಿದನು. ಗ್ರಹಪತಿ ಆರಾಧಿಸುತ್ತಿದ್ದ ಶಿವಲಿಂಗವು ನಂತರ ಅಗ್ನಿಶ್ವರಲಿಂಗ ಎಂದು ಕರೆಯಲಾಯಿತು.

ದೂರ್ವಾಸ ಅವತಾರ:
ಭಗವಾನ್ ಶಿವನ ಈ ಅವತಾರವು ಋಷಿ ಅತ್ರಿ ಮತ್ತು ಅವರ ಪತ್ನಿ ಅನಸೂಯರಿಗೆ ಜನಿಸಿದ ದೂರ್ವಾಸ ಮುನಿಯದ್ದಾಗಿದೆ. ವಿಶ್ವದ ಶಿಸ್ತನ್ನು ಸಂರಕ್ಷಿಸಲು ಶಿವನು ಈ ಅವತಾರವನ್ನು ತಾಳಿದರು. ಮಹಾಮುನಿಯಾದ ದುರ್ವಾಸರು ಕೂಪಕ್ಕೆ ಹೆಸರಾದವರು.

ವೃಷಭ ಅವತಾರ :
ದಂತಕಥೆಯ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ವಿಷ್ಣುವು ರಾಕ್ಷಸರನ್ನು ಕೊಲ್ಲಲು ಸುಂದರಿಯರಾದ ಮಾಯಾ ಮೋಹಿನಿಯರನ್ನು ಸೃಷ್ಟಿಸಿದರು. ಈ ಸುಂದರಿಯರಿಗೆ ಮಾರು ಹೋದ ರಾಕ್ಷಸರು ಮೋಹಿನಿ  ಅವರನ್ನೆಲ್ಲ ಕರೆದುಕೊಂಡು ಪಾತಾಳಕ್ಕೆ ಹೋದರು. ಬಳಿಕ ಅವರು ದೇವತೆಗಳಿಂದ ಅಮೃತವನ್ನು ವಶಪಡಿಸಲು ಬಂದಾಗ ವಿಷ್ಣುವು ಅವರನ್ನೆಲ್ಲಸಂಹರಿಸಲು ಪಾತಾಳ ಲೋಕಕ್ಕೆ ಹೋದನು. ಆದರೆ ಅಲ್ಲಿ ಅವನು ತನ್ನದೇ ಮಾಯಾ ಜಾಲಕ್ಕೆ ಬಿದ್ದುದರ ಫಲವಾಗಿ ಅವನಿಗೆ ಅನೈತಿಕವಾಗಿ ಹಲವು ಕ್ರೂರಿ ಮಕ್ಕಳು ಹುಟ್ಟಿದವು. ಅವರು ದೇವತೆಗಳಿಗೆ ತೊಂದರೆ ಕೊಡಲಾರಂಭಿಸಿದರು. ಆಗ ಶಿವನು ವೃಷಭದ ಅವತಾರವೆತ್ತಿ ಈ ದುಷ್ಟ ಸಂತತಿಗಳನ್ನೆಲ್ಲಾ ನಾಶಮಾಡಿರು. ವಿಷ್ಣುವೂ ಈ ವೃಷಭದೊಂದಿಗೆ ಕಾಳಗಕ್ಕೆ ನಿಂತರೂ, ಕೊನೆಗೆ ಇದು ಮಹಾಶಿವನ ಅವತಾರವೆಂದು ತಿಳಿದ ನಂತರ ವೈಕುಂಟಕ್ಕೆ ಮರಳಿದರು.

ಯತಿನಾಥ ಅವತಾರ:
ಆಹುಕ ಎಂಬ ಶಿವಭಕ್ತ ಬುಡಕಟ್ಟು ಜನಾಂಗದವನು ತನ್ನ ಪತ್ನಿಯೊಂದಿಗೆ ಚಿಕ್ಕ ಗುಡಿಸಿಲಿನಲ್ಲಿ ವಾಸವಾಗಿದ್ದರು. ಒಂದು ದಿನ ಶಿವನು ಯತಿನಾಥನ ಅವತಾರ ತಾಳಿ ಅತಿಥಿಯಾಗಿ ಅಹುಕನ ಗುಡಿಸಿಲಿಗೆ ಭೇಟಿ ನೀಡಿದರೂ. ಗುಡಿಸಲು ಚಿಕ್ಕದಾದ ಕಾರಣ ಯತಿನಾಥನಿಗೆ ಒಳಗೆ ಮಲಗಲು ಹೇಳಿ ಅವರು ಗುಡಿಸಿಲಿನ ಹೊರಗೆ ಮಲಗಿದ್ದರು .ಅದೇ ಸಮಯದಲ್ಲಿ ಕ್ರೂರ ಮೃತವೊಂದು ಹೊರಗೆ ಮಲಗಿದ್ದ ಆಹುಕನನ್ನು ಕೊಂದು ಹಾಕಿತ್ತು. ಈ ನೋವನ್ನು ತಾಳಲಾರದೆ ಪತ್ನಿ ಕೂಡ ಜೀವತ್ಯಾಗ ಮಾಡಿದಳು. ಆಗ ಯತಿನಾಥನು ತನ್ನ ನಿಜರೂಪ ತಾಳಿ, ಮುಂದಿನ ಜನ್ಮದಲ್ಲಿ ಅವರಿಬ್ಬರಿಗೂ ನಳ ಮತ್ತು ದಮಯಂತಿ ಎಂಬ ಹೆಸರಿನಲ್ಲಿ ಸತಿ ಪತಿಯರಾಗಿ ಸೇರುವಂತೆ ಅನುಗ್ರಹಿಸಿದನು.

ಹನುಮಾನ ಅವತಾರ:
ಹನುಮಾ ಅಂಜನಿದೇವಿ ಹಾಗೂ ಕೇಸರಿಗೆ ಜನಿಸಿದವರು. ಸಮುದ್ರ ಮಂಥನದ ಸಮಯದಲ್ಲಿ ವಿಷ್ಣು ತಾಳಿದ ಮೋಹಿನಿ ಅವತಾರವನ್ನು ಮೆಚ್ಚಿಕೊಂಡ ಶಿವನ ವೀರ್ಯವು ನೆಲಕ್ಕೆ ಬಿದ್ದಾಗ ಅವನ ಅನುಮತಿಯಿಂದಲೇ ಸಪ್ತರಿಷಿಗಳು ಅದನ್ನು ಅಂಜನಿದೇವಿಯ ಗರ್ಭದಲ್ಲಿ ಸ್ಥಾಪಿಸುತ್ತಾರೆ ಈ ರೀತಿ ಹನುಮಾನ ಜನನವಾಗುತ್ತದೆ .

ಕೃಷ್ಣ ದರ್ಶನ ಅವತಾರ:
ಶಿವನ ಈ ಅವತಾರವು ಯಾಗದ ಮಹತ್ವವನ್ನು ಸಾರುತ್ತದೆ. ಮನುಷ್ಯ ಜೀವನದಲ್ಲಿ ಧರ್ಮಾಚರಣೆಗಳ ಅನುಷ್ಠಾನ, ಮೋಕ್ಷ ಪ್ರಾಪ್ತಿ ದಾರಿಯ ಮಹತ್ವವನ್ನು ಸುಗಮವಾಗಿಸುವ ತತ್ವಗಳನ್ನು ಜಗತ್ತಿಗೆ ತಿಳಿಸಲು ಶಿವನು ಈ ಅವತಾರವೆತ್ತಿದನು.

ಕಿರಾತೇಶ್ವರ ಅವತಾರ:
ಶಿವನ ಈ ಅವತಾರವು ಅರ್ಜುನನ ಶೌರ್ಯವನ್ನು ಪರೀಕ್ಷಿಸಲು ಕಾರಣವಾಯಿತು ಪಾಂಡವರು ವನವಾಸದಲ್ಲಿದ್ದಾಗ, ಅರ್ಜುನನು ಪಾಶುಪತಾಸ್ತ್ರಕ್ಕಾಗಿ ಧ್ಯಾನ ಮಾಡುತ್ತಿದ್ದನು. ಆಗ ಹಂದಿಯ ರೂಪದಲ್ಲಿದ್ದ ಮೂಕಾಸುರನ್ನು ಅರ್ಜುನನ ಮೇಲೆ ದಾಳಿ ಮಾಡಿದನು ಈ ವೇಳೆ ಬೇಟೆಗಾರನ ರೂಪ ತಾಳಿ ಶಿವನು ಪ್ರತ್ಯಕ್ಷನಾದನು. ಹಂದಿಯ ಶಬ್ದದಿಂದ ಧ್ಯಾನ ಭಂಗ ಗೊಂಡ ಅರ್ಜುನನು ತನ್ನ ಬಾಣದಿಂದ ಅದನ್ನು ಸಾಯಿಸಿದನು ಅದೇ ಸಮಯದಲ್ಲಿ, ಕಿರಾತರೂಪದ ಶಿವನೂ ಕೂಡ ಹಂದಿಯ ರೂಪದಲ್ಲಿದ್ದ ಮೂಕಾಸುರನ್ನು ತನ್ನ ಬಾಣದಿಂದ ಬೀಳಿಸಿದ್ದ. ಇಬ್ಬರೂ ತಾನೇ ಮೊದಲು ಸಾಯಿಸಿದ್ದು ಎಂದು ವಾಗ್ವಾದಕ್ಕಿಳಿದರು. ನಂತರ ಕೋಪಗೊಂಡ ಅರ್ಜುನನು ಶಿವನೊಂದಿಗೆ ಯುದ್ಧಕ್ಕೆ ಸಿದ್ದನಾದ. ಅರ್ಜುನನ ಧೈರ್ಯ, ಸಾಹಸಕ್ಕೆ ಮೆಚ್ಚಿದ ಶಿವನು ಅವನಿಗೆ ತನ್ನ ನಿಜ ರೂಪ ತೋರಿಸಿ ಪಾಶುಪತಾಸ್ತ್ರವನ್ನು ಕೊಟ್ಟನು.

ಸುರೇಶ್ವರ ಅವತಾರ:
ವ್ಯಘ್ರಪಾದ ಮುನಿಯ ಮಗ ಶಿವಭಕ್ತನಾದ ಉಪಮನ್ಯುವಿನ ಭಕ್ತಿ ಪರೀಕ್ಷಿಸಲು ಶಿವ ಮತ್ತು ಪಾರ್ವತಿಯು ಇಂದ್ರ ಮತ್ತು ಇಂದ್ರಾಣಿಯ ರೂಪದಲ್ಲಿ ಬಂದು ಉಪಮನ್ಯುವಿನಲ್ಲಿ ಶಿವ ಭಕ್ತಿಯನ್ನು ತ್ಯಜಿಸಬೇಕೆಂದೂ, ಇಲ್ಲದ ಪಕ್ಷ ಘೋರ ಶಾಪಕ್ಕೊಳಗಾಗಬೇಕು ಎಂದು ಹೇಳಿದರು. ಇದಕ್ಕೆ ಹೆದರದೇ ಶಿವಭಕ್ತಿಯನ್ನು ತ್ಯಜಿಸಲಾರೆನೆಂದು ಉಪಮನ್ಯು ಹೇಳಿದಾಗ ಅವನ ಭಕ್ತಿಗೆ ಮೆಚ್ಚಿ, ಶಿವನು ಇನ್ನು ಮುಂದಕ್ಕೆ ಸದಾಕಾಲ ತಾನು ಉಪಮನ್ಯುವಿನ ಆಶ್ರಮ ಪರಿಸರದಲ್ಲೇ ಪಾರ್ವತಿಯೊಂದಿಗೆ ಇರುವೆನೆಂದು ಹೇಳಿದನು. ಇಂದ್ರನ ವೇಷದಲ್ಲಿ ಬಂದ ಕಾರಣ ಶಿವನಿಗೆ ‘ಸುರೇಶ್ವರ’ ಎಂಬ ಹೆಸರೂ ಬಂತು.

ಬ್ರಹ್ಮಚಾರಿ ಅವತಾರ:
ಸತಿಯು ಪಾರ್ವತಿಯಾಗಿ ಜನ್ಮ ತಾಳಿದಾಗ  ಶಿವನನ್ನು ಮೆಚ್ಚಿಸಲು ತೀವ್ರವಾದ ತಪಸ್ಸು ಮಾಡಿದಾಗ, ಶಿವನು ಪಾರ್ವತಿಯ ಮುಂದೆ ಬ್ರಹ್ಮಚಾರಿಯಾಗಿ ಕಾಣಿಸಿಕೊಂಡನು. ಪಾರ್ವತಿಯ ಭಕ್ತಿಯನ್ನು ಪರೀಕ್ಷಿಸಲು ಅವನು ಶಿವನನ್ನು ನಿಂದಿಸಿದನು. ಮತ್ತು ಶಿವನನ್ನು ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸಿದ ಪಾರ್ವತಿಯು ಬ್ರಹ್ಮಚಾರಿಗೆ ತಕ್ಕ ಉತ್ತರವನ್ನು ನೀಡುತ್ತಾಳೆ. ಕಡೆಯದಾಗಿ ಶಿವನು ತನ್ನ ನಿಜ ದರ್ಶನ ನೀಡಿದನು.

ಯಕ್ಷೇಶ್ವರ ಅವತಾರ:
ಸಮುದ್ರ ಮಂಥನದ ನಂತರ ಅಸುರರನ್ನು ಸೋಲಿಸಿದರೆಂದು ಅಹಂಕಾರದಿಂದ ದೇವತೆಗಳು ಬೀಗುತ್ತಿದ್ದರು. ಆಗ ದೇವತೆಗಳ ಅಹಂಕಾರ ಮುರಿಯಲು ಶಿವನು ಈ ಅವತಾರವನೆತ್ತಿ ದೇವತೆಗಳಿಗೆ ಹುಲ್ಲನ್ನು ಕೊಟ್ಟು ಅದನ್ನು ಕತ್ತರಿಸಲು ಹೇಳಿದನು. ಹುಲ್ಲನ್ನು ಕತ್ತರಿಸಲಾಗದೆ ಕೊನೆಗೆ ದೇವತೆಗಳಿಗೆ ತಮ್ಮ ತಪ್ಪಿನ ಅರಿವಾಗಿ ಅಹಂಕಾರವನ್ನು ತ್ಯಜಿಸಿದರು.

ಅವಧೂತ ಅವತಾರ ಇಂದ್ರ ದೇವನ ಅಹಂಕಾರವನ್ನು ಇಳಿಸಲು ಶಿವನು ಅವಧೂತನ ಅವತಾರವನ್ನೆತ್ತಿದ.

ಕಾರ್ತಿಕ ಮಾಸದಲ್ಲಿ ಪ್ರತಿದಿನ ಹೀಗೆ ಪೂಜೆ ಮಾಡಿ…!

ಕಾರ್ತಿಕ ಮಾಸದಲ್ಲಿ ಕಾವೇರಿ ನದಿ ನೀರಿನ ಸ್ನಾನದ ಮಹತ್ವ..!

ಜ್ಯೋತಿಷ್ಯದ ಪ್ರಕಾರ ಭಾನುವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ…?

- Advertisement -

Latest Posts

Don't Miss