Thursday, December 12, 2024

Latest Posts

ಕಾರ್ತಿಕ ಮಾಸದಲ್ಲಿ ಕಾವೇರಿ ನದಿ ನೀರಿನ ಸ್ನಾನದ ಮಹತ್ವ..!

- Advertisement -

Devotional:

ಕಾರ್ತಿಕ ಮಾಸದ ನದಿ ಸ್ನಾನಕ್ಕೆ ಹಿಂದೂ ಧರ್ಮದಲ್ಲಿ ಅತಿ ಹೆಚ್ಚು ಪ್ರಾಮುಕ್ಯತೆ ನೀಡಿದ್ದಾರೆ, ಈ ಮಾಸದಲ್ಲಿ ಮಾಡುವ ಪವಿತ್ರ ಸ್ನಾನ ,ಕಲ್ಮಶವನ್ನು ಹೋಗಲಾಡಿಸುವ ಜೊತೆಗೆ ಮನುಷ್ಯನ ಕೋಪ ತಾಪಗಳ್ಳನು ನಿಯಂತ್ರಿಸುತ್ತದೆ. ಮುಖ್ಯವಾಗಿ ಕಾವೇರಿ ನದಿ ಸ್ನಾನ ಅತ್ಯಂತ ಪವಿತ್ರ ಎಂದು ಭಾವಿಸಲಾಗಿದೆ. ಸಮಯದ ಅಭಾವ ಇರುವವರು ಹಾಗೂ ಕೆಲಸದ ಒತ್ತಡ ಇರುವವರು ಕಾವೇರಿ ನದಿ ಸ್ನಾನ ಮಾಡಲು ಆಗದೆ ಇರುವವರು ,ಸೂರ್ಯೋದಯಕ್ಕೆ ಮುಂಚೆ ಮನೆಯಲ್ಲೇ ತಣ್ಣೀರಿನ ಸ್ನಾನ ಮಾಡುವುದರಿಂದ ನಿಮಗೆ ಶುಭ ಫಲಿತಾಂಶಗಳು ಸಿಗುತ್ತದೆ .ಇದು ಈ ಮಾಸದಲ್ಲಿ ಮಾಡುವ ಪವಿತ್ರ ಸ್ನಾನಕ್ಕೆ ಸಮನಾಗಿರುತ್ತದೆ ಎಂದು ಹೇಳಬಹುದು .

ಪುರಾಣಗಳ ಪ್ರಕಾರ ಈ ವರ್ಷ ಕಾರ್ತಿಕ ಮಾಸವು ಅಕ್ಟೋಬರ್ 26 ರಿಂದ ಆರಂಭವಾಗಿ ನವೆಂಬರ್ 23 ರಂದು ಕೊನೆಗೊಳ್ಳುತ್ತದೆ. ನದಿ ಸ್ನಾನಕ್ಕೆ ಶ್ರೇಷ್ಠ ಮಾಸಗಳಾದ ,ಕಾರ್ತಿಕ ಮಾಸ ,ಮಾಘ ಮಾಸ ಮತ್ತು ವೈಶಾಖ ಮಾಸದಲ್ಲಿ ನದಿಸ್ನಾನ ಮಾಡಿದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಹಿಂದೂ ದರ್ಮದಲ್ಲಿದೆ . ಇನ್ನು ಕಾರ್ತಿಕ ಮಾಸ ಎಲ್ಲದಕ್ಕಿತಲೂ ಶ್ರೇಷ್ಠವಾದುದು. ಈ ಮಾಸದಲ್ಲಿ ಮಾಡುವ ಸ್ನಾನ ಬಹಳ ಮಹತ್ವ ಪಡೆದಿದೆ. ಮಾಸಗಳಲ್ಲಿ ಕಾರ್ತಿಕ ಮಾಸ, ಯುಗಗಳಲ್ಲಿ ಕೃತಯುಗ, ನದಿಗಳಲ್ಲಿ ಗಂಗಾ ನದಿ, ಇವುಗಳಿಗೆ ಸಮವಾದುದ್ದು ಶಾಸ್ತ್ರಗಳಲ್ಲಿ ಯಾವುದೂ ಇಲ್ಲ. ಯಾವುದೇ ಕೆಟ್ಟ ಕೆಲಸ ಮಾಡಿದವನಾದರೂ ಕಾರ್ತಿಕ ಮಾಸದಲ್ಲಿ ಸ್ನಾನ ಹಾಗೂ ಆಚರಣೆಗಳನ್ನು ನಡೆಸಿದರೆ ಪಾಪಗಳಿಂದ ದೋಷ ಮುಕ್ತನಾಗುತ್ತಾನೆ. ಹಾಗಾಗಿ ಈ ಮಾಸದಲ್ಲಿ ಕಾವೇರಿ ನದಿ ಸ್ನಾನ ಮಹತ್ವ ಪಡೆದಿದೆ

ಹಾಗಾದರೆ ಕಾರ್ತಿಕ ಮಾಸದಲ್ಲಿ ಕಾವೇರಿ ನದಿಸ್ನಾನ ಇಷ್ಟೊಂದು ಪವಿತ್ರ ಏಕೆ ಎಂದು ತಿಳಿದು ಕೊಳ್ಳೋಣ…
ಭಗೀರಥನು ಕಠಿಣ ತಪಸ್ಸು ಮಾಡಿ, ದೇವಲೋಕದಿಂದ ಗಂಗೆಯನ್ನು ಭೂಮಿಗೆ ತಂದು ಭೂಲೋಕ, ಪಾತಾಳ ಲೋಕದಲ್ಲೂ, ಪವಿತ್ರ ನದಿಯಾಗಿ ಹರಿಯುವಂತೆ ಮಾಡಿದನು. ದೇವ ನದಿ ಗಂಗೆಗಿಂತ ಪವಿತ್ರವಾದ ನದಿ ಬೇರೇ ಯಾವುದೂ ಇಲ್ಲ ‘ಗಂಗಾ ಸ್ನಾನಂ, ತುಂಗಾ ಪಾನಂ’ ಎಂಬ ನಾಣ್ನುಡಿ ಇದೆ. ಒಮ್ಮೆ ಗಂಗೆ ಶಿವನ ಬಳಿ ಹೋಗಿ ಲೋಕದ ಎಲ್ಲಾ ಜನರು ತಾವು ಮಾಡಿದ ಪಾಪಗಳನ್ನು ತೊಳೆದುಕೊಳ್ಳಲು ನನ್ನ ಬಳಿ ಬಂದು ಸ್ನಾನ ಮಾಡಿದರೆ ಆ ಪಾಪಗಳೆಲ್ಲ ನನ್ನೊಳಗೆ ಸೇರುತ್ತದೆ ಆ ಎಲ್ಲಾ ಪಾಪಗಳನ್ನು ನಾನು ಹೇಗೆ ಪರಿಹಾರ ಮಾಡಿಕೊಳ್ಳಲಿ…? ಎಂಬ ಪ್ರಶ್ನೆ ಕೇಳಿದಳು .ಹಾಗ ಪರಮೇಶ್ವರನು, ಬ್ರಹ್ಮನು ನಿನ್ನನ್ನು ಸೃಷ್ಟಿ ಮಾಡಿದ್ದೆ ಇದಕ್ಕಾಗಿ, ನೀನು ಯಾವ ಯೋಚನೆಯನ್ನೂ ಮಾಡ ಬೇಕಾಗಿಲ್ಲ. ನಿನಗೆ ಯಾವುದೇ ಪಾಪವೂ ಅಂಟುವುದಿಲ್ಲ. ನದಿಗಳಲ್ಲಿ ಪವಿತ್ರ ನದಿ ಎಂದರೆ ಕಾವೇರಿ ನದಿ. ನೀನು ಈ ಕಾರ್ತಿಕ ಮಾಸದಲ್ಲಿ ಕಾವೇರಿ ನದಿಯಲ್ಲಿ ಸೇರಿ ಸ್ನಾನ ಮಾಡಿದರೆ ನೀನು ಶುದ್ಧಳಾಗುವೆ ಎಂದು ಹೇಳಿದನು. ಶಿವನ ಮಾತಿನಂತೆ, ಪ್ರತಿವರ್ಷವೂ ಕಾರ್ತಿಕ ಮಾಸದಲ್ಲಿ ಗಂಗೆ ಕಾವೇರಿಯಲ್ಲಿ ಬಂದು ಸೇರುತ್ತಾಳೆ. ಕಾವೇರಿಯಲ್ಲಿ ಗಂಗಾ ನದಿ ಬಂದು ಸನ್ನಿಹಿತಳಾಗಿ ಇರುವುದರಿಂದ ಕಾರ್ತಿಕ ಮಾಸದಲ್ಲಿ ಕಾವೇರಿ ಸ್ನಾನ ಮಾಡುವುದು ಬಹಳ ಪುಣ್ಯ ಎಂಬುದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ರೊಮ್ಯಾಂಟಿಕ್ ಲೈಫ್‌‌‌‌‌‌ಗಾಗಿ ಗುಟ್ಟು…!

ಮಂಗಳವಾರ ಹನುಮನ ಕೃಪೆಗೆ ಪಾತ್ರರಾಗಬೇಕಾದರೆ ಹೀಗೆ ಪೂಜಿಸಿ….!

ಈ ಸಮಯದಲ್ಲಿ ನಿದ್ದೆ ಎಚ್ಚರಗೊಂಡರೆ ನಿಮಗೆ ನೀವೇ ಸೃಷ್ಟಿಕರ್ತ….

 

 

- Advertisement -

Latest Posts

Don't Miss