ಆಸ್ಕರ್‌ ಪ್ರಶಸ್ತಿಗಾಗಿ ಸಿನಿಮಾ ಟೈಟಲ್ ಬದಲಿಸಿದ ಲಾಪತಾ ಲೇಡೀಸ್ ಚಿತ್ರತಂಡ

Bollywood News: ಬಾಲಿವುಡ್ ನಟ ಆಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ಮಾಣ ಮತ್ತು ನಿರ್ದೇಶನದ ಸಿನಿಮಾ ಲಾಪತಾ ಲೇಡೀಸ್ 2024ರ ಅತ್ಯದ್ಭುತ ಚಿತ್ರ ಎನ್ನುವ ಮೆಚ್ಚುಗೆಗೆ ಪಾತ್ರವಾಗಿತ್ತು. ಓಟಿಟಿಗೆ ಬಂದು, ಉತ್ತಮ ವೀವ್ಸ್ ಪಡೆದಿತ್ತು. ಅಲ್ಲದೇ 2025ರಲ್ಲಿ ನಡೆಯುವ ಆಸ್ಕರ್ ಪ್ರಶಸ್ತಿಗೆ ಈ ಸಿನಿಮಾ ಆಯ್ಕೆಯಾಗಿದೆ. ಹಾಾಗಾಗಿಯೇ ಚಿತ್ರತಂಡ ದೊಡ್ಡದೊಂದು ನಿರ್ಧಾರ ತೆಗೆದುಕೊಂಡಿದೆ.

ಸಿನಿಮಾ ಟೈಟಲ್ ಚೇಂಜ್ ಮಾಡಿರುವ ಈ ತಂಡ, ಲಾಪತಾ ಲೇಡೀಸ್ ಎನ್ನುವ ಹೆಸರು ಬದಿಗಿರಿಸಿ, ಲಾಸ್ಟ್ ಲೇಡೀಸ್ ಎಂದು ಹೆಸರು ಇಟ್ಟಿದೆ. Lost Ladies ಎಂದರೆ ಕೂಡ ಲಾಪತಾ ಲೇಡೀಸ್ ಅಂತಲೇ ಅರ್ಥ. ಈ ಸಿನಿಮಾವನ್ನು ನ್ಯೂಯಾರ್ಕ್‌ನಲ್ಲಿ ಸ್ಪೆಶಲ್ ಶೋ ಮಾಡಲಾಗಿತ್ತು.

ಹೊಸದಾಗಿ ಮದುವೆಯಾಗಿ ಹೋಗುವಾಗ, ಮಾರ್ಗಮಧ್ಯೆ ಇಬ್ಬರು ಹೆಣ್ಣು ಮಕ್ಕಳು ಕಾಣೆಯಾಗುತ್ತಾರೆ. ಅವರನ್ನು ಕಟ್ಟಿಕೊಂಡ ಪತಿಯರಿಗೆ ಸಿನಿಮಾ ಪೂರ್ತಿ ಅವರನ್ನು ಹುಡುಕುವುದೇ ಕೆಲಸ. ಪತಿಯಾದವನು ಮನೆಗೆ ತನ್ನ ಪತ್ನಿಯನ್ನು ಕರೆತರುತ್ತಾನೆ. ಮುಸುಕುಧಾರಿಯಾಗಿದ್ದ ಪತ್ನಿಯ ಮಸುಕು ತೆಗೆದರೆ ಆಕೆ ಬೇರೆಯವಳಾಗಿರುತ್ತಾಳೆ. ನಿಜವಾದ ಮಧುಮಗಳು ಕಳೆದು ಹೋಗಿ ರೈಲ್ವೆ ನಿಲ್ದಾಣದಲ್ಲಿ ಅಲೆದಾಡುತ್ತಿರುತ್ತಾಳೆ. ಅಲ್ಲಿಂದ ಕಥೆ ಶುರು. ಕೊನೆಗೆ ಕಥೆಗೊಂದು ತಿರುವು ಸಿಗುತ್ತದೆ.

About The Author