Monday, December 23, 2024

Latest Posts

ಕೋಲಾರ ಜಿಲ್ಲೆಯ 6 ಕ್ಷೇತ್ರದಲ್ಲಿ ಕಮಲ ಅರಳಬೇಕು – ಸಚಿವ ಡಾ. ನಾರಾಯಣಗೌಡ.

- Advertisement -

ಕೋಲಾರ ಮಾ.31 : ಯುವಕರಿಗೆ ಕ್ರೀಡೆಗೆ ಹೆಚ್ಚಿನ ಸೌಕರ್ಯ ಮತ್ತು ಪ್ರೋತ್ಸಾಹ ಸಿಗಬೇಕು. ಇಲ್ಲದಿದ್ದಲ್ಲಿ ದಾರಿ ತಪ್ಪುತ್ತಾರೆ. ಹಾಗಾಗಿ ಕ್ರೀಡೆಗೆ ಎಲ್ಲ ರೀತಿಯ ನೆರವು ಒದಗಿಸಲು ಪ್ರಯತ್ನಿಸುತ್ತಿದ್ದೇನೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ಇದರಿಂದ ಪಕ್ಷಕ್ಕೂ, ಸರ್ಕಾರಕ್ಕು ಉತ್ತಮ ಹೆಸರು ಬರಲಿದೆ. ಆರೂ ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು. ಮುಂಬರುವ ಜಿ.ಪಂ. ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಗವ ರೀತಿಯಲ್ಲಿ ಎಲ್ಲರು ಶ್ರಮಿಸಬೇಕು. ಪ್ರಧಾನಿ ಮೋದಿಯವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ಅತ್ಯುತ್ತಮ ಕೆಲಸದಿಂದ ದೇಶ, ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಉಪ ಚುನಾವಣೆಗಳಲ್ಲು ಬಿಜೆಪಿಗೆ ಗೆಲುವು ನಿಶ್ಚಿತ. ಕಾರ್ಯಕರ್ತರೇ ಪಕ್ಷಕ್ಕೆ ಜೀವಾಳ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದರು.

ಸಚಿವರು ಕೋಲಾರ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಎಂದರೆ ಬೇರೆ ಪಕ್ಷದಂತಲ್ಲ. ಪಕ್ಷಕ್ಕಾಗಿ ಕಾರ್ಯಕರ್ತರನ್ನು ದುಡಿಸಿಕೊಂಡು ಕಾರ್ಯಕರ್ತರನ್ನು ಕೈ ಬಿಡುವ ಪಕ್ಷ ನಮ್ಮದಲ್ಲ. ಪ್ರತಿಯೊಬ್ಬ ಕಾರ್ಯಕರ್ತರನ್ನು ಗುರುತಿಸುವ ಏಕೈಕ ಪಕ್ಷ ಬಿಜೆಪಿ. ಸಾಮಾನ್ಯ ಕಾರ್ಯಕರ್ತನೊಬ್ಬ ರಾಜ್ಯ ಸಭಾ ಸದಸ್ಯರಾಗುತ್ತಾರೆ ಎಂದರೆ ಅದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಇದುವೆ ಪಕ್ಷದ ಶಕ್ತಿ. ಪಕ್ಷದಲ್ಲಿನ ಶಿಸ್ತು, ಸಂಘಟನಾ ಕಲೆ ಹಿಂದಿನಿಂದ ಬಂದಿದ್ದು. ಅದನ್ನು ಮುಂದುವರೆಸಿಕೊಂಡು ಹೋಗಬೇಕು. ಮುಂಬರುವ ಚುನಾವಣೆಗೆ ಈಗಿನಿಂದಲೆ ಸಿದ್ಧತೆ ಮಾಡಿಕೊಳ್ಳಬೇಕು. ಇಡಿ ಜಿಲ್ಲೆಯಲ್ಲಿ ಕಮಲ ಅರಳಬೇಕು ಎಂದು ಸಚಿವರು ಹೇಳಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಣ ಡಾ. ವೇಣುಗೋಪಾಲ್, ಮಾಜಿ ಶಾಸಕ ರಾಜಣ್ಣ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Latest Posts

Don't Miss