ಲವ್ ಜಿಹಾದ್?. ಶ್ರೀರಾಮ ಸೇನಾ ಸಹಾಯವಾಣಿ ಮೊರೆ ಹೋದ ಮಹಿಳೆ

Dharwad News: ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಲವ್ ಜಿಹಾದ್ ಆಗಿದೆ ಎಂದು ಆರೋಪಿಸಿ ಕಲಘಟಗಿ ಪೊಲೀಸ್ ಠಾಣೆಗೆ ಶ್ರೀರಾಮ್ ಸೇನೆಯ ಕಾರ್ಯಕರ್ತರು ಲವ್ ಜಿಹಾದ್ ನಲ್ಲಿ ಸಿಲುಕಿದ ಯುವತಿಯೊಂದಿಗೆ ತೆರಳಿ ದೂರು ನೀಡಿದ್ದಾರೆ.

ಸಂತ್ರಸ್ತ ಮಹಿಳೆಯೊಂದಿಗೆ ಮದುವೆಯಾಗಿ ಮತಾಂತರಿಸಿ ಹಲ್ಲೆ ಮಾಡಿರುವುದಾಗಿ ಮಹಿಳೆ ದೂರು ನೀಡಿದ್ದು ದೂರು ದಾಖಲಾಗಿದೆ. ಬೆಂಗಳೂರಿನ ಕನಕನಗರ ನಿವಾಸಿ ಮುಜಾಹೀದ್‌ಖಾನ ವಿರುದ್ಧ ದೂರು ಅಶ್ವಿನಿ ಜೈನ್ ಎಂಬುವರಿಂದ ದೂರು ದಾಖಲ ಆಗಿದೆ ಎನ್ನಲಾಗಿದೆ.

ಅವಾಚ್ಯ ಶಬ್ಧಗಳಿಂದ ನಿಂದಿಸಿ, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿರುವ‌ ಆರೋಪ ಮಾಡಲಾಗಿದ್ದು ಈ ವಿಷಯ ಕುರಿತುಡೈವೋರ್ಸ್‌ಗೆ ಕಲಘಟಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ನ್ಯಾಯಾಲಯದ ಆವರಣ ಹಾಗೂ ಮನೆಗೆ ನುಗ್ಗಿ ಹಲ್ಲೆ ಮಾಡಿ, ಜೀವಬೆದರಿಕೆ ಹಾಕಿದ್ದಾನೆಂದು
ಮುಜಾಹೀದ್‌ಖಾನ್ ವಿರುದ್ಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಈ ಮಹಿಳೆ ಶ್ರೀರಾಮ್ ಸೇನಾ ಸಹಾಯವಾಣಿ ಮೊರೆ ಹೋಗಿದ್ದಳು.

About The Author