Wednesday, May 14, 2025

Latest Posts

Police-ಮನೆಯಲ್ಲಿ ಗಂಡನಿದ್ದರೂ ಪ್ರಿಯಕರನೊಂದಿಗೆ ಪರಾರಿ

- Advertisement -

ದೊಡ್ಡಬಳ್ಳಾಪುರ:ಇತ್ತೀಚಿನ ದಿನಗಳಲ್ಲಿ ಮದುವೆಯಾದರೂ ಹುಡುಗ ಅಥವಾ ಹುಡುಗಿ ದುಡ್ಡಿನ ವ್ಯಾಮೋಹಕ್ಕೆ ಅಥವಾ ,ಮಾತಿನ ಮೋಡಿಗೆ ಇನ್ನೊಬ್ಬರ ಜೊತೆ ಅಕ್ರಮ ಸಂಬಂಧ ಬೆಳೆಸುವುದು ಸಾಮಾನ್ಯವಾಗಿದೆ. ಅಕ್ರಮ ಸಂಭಂದವನ್ನು ಸಹಿಸದೇ ಕೊನೆಗೆ ಮರಣದಲ್ಲಿ ಅಂತ್ಯ ಕಾಣುತ್ತವೆ. ಇಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ.

ಹರೀಶ್ ಮತ್ತು ಭಾರತಿ ಇಬ್ಬರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ  ಪರಿಚಯ ಪ್ರೀತಿಗೆ ತಿರುಗಿ ಮದುವೆ ಮಾಡಿಕೊಂಡು ಇಬ್ಬರು ಮಕ್ಕಳಿಗೆ ಜನ್ಮವನ್ನು ಸಹ ನೀಡಿದ್ದರು ಆದರೆ ಈ ನಡುವೆ ಗಂಗರಾಜು ಎನ್ನುವವನ ಜೊತೆ ಭಾರತಿ ಮೋಹಕ್ಕೆ ಒಳಗಾಗಿ ಪ್ರೀತಿಸಿದ್ದಳು ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲುಕಿನ ಕೋಳೂರು ಎಂಬಲ್ಲಿಗೆ ಬಂದು ಗಂಡ ಹೆಂಡತಿ ಎಂದು ಸುಳ್ಳು ಹೇಳಿ ಬಾಡಿಗೆ ಮನೆ ಪಡೆದಿದ್ದರು.

ನಂತರ ವಿಷಯ ತಿಳಿದುಕೊಂಡ ಗಂಡ ಹರೀಶ್ ಸೀದಾ ಪತ್ನಿಯ ಹತ್ತಿರ ಹೋಗಿದ್ದಾನೆ . ಸಾಯಂಕಾಲ ಗಂಡ ಕುಡಿದು ಮನೆಗೆ ಬಂದಿದ್ದಾನೆ ಆದರೆ ಹೆಂಡತಿ ಪ್ರತಿಯಕರನ ಜೊತೆ ಕೋಣೆಯಲ್ಲಿ ಮಲಗಿದ್ದಾಳೆ ಎದನ್ನು ನೋಡಿದ ಗಂಡ ಹೆಂಡತಿಗೆ ದೊಣ್ಣೆಯಿಂದ ಹೊಡೆದು ಕತ್ತು ಹಿಸುಕಿ ಸಾಯಿಸಿದ್ದಾನೆ.

ಪ್ರಿಯಕರ ಕರೆ ಮಾಡಿದಾಗ ಸ್ವೀಕರಿಸಿಲ್ಲ ನಂತರ ಅನುಮಾನಗೊಂಡು ಮನೆಗೆ ಬಂದಾಗ ಹೆಂಡತಿ ಸತ್ತಿರುವುದು ಕಂಡುಬಂದಿದೆ.ಇನ್ನು ಈ ಸಂಬಂಧ ದೊಡ್ಡಬಳ್ಳಾಪರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಗಂಗರಾಜುವನ್ನು ಬಂಧಿಸಿದ್ದಾರೆ.

 

- Advertisement -

Latest Posts

Don't Miss