Movie News: ನಟ ವಸಿಷ್ಠ ಸಿನಿಮಾ ಅಭಿನಯದ ಲವ್‌ಲೀ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಬಗ್ಗೆ ವಸಿಷ್ಟ ಸಿಂಹ ಕರ್ನಾಟಕ ಟಿವಿ ಜೊತೆ ಮಾತಮಾಡಿದ್ದು, ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.
ನಮ್ಮ ಜೀವನವನ್ನು ಒಂದು ಉತ್ತಮ ದಾರಿಗೆ ಕೊಂಡೊಯ್ಯುತ್ತದೆ. ನಮ್ಮ ಮನಸ್ಸಿಗೆ ನೆಮ್ಮದಿ ಸಿಗುವ ಹಾಗೆ ಮಾಡುತ್ತದೆ ಎಂದಾದರೆ, ಅದು ಪ್ರೀತಿ ಅಂತಾರೆ ವಸಿಷ್ಠ ಸಿಂಹ. ಮಫ್ತಿ ಸಿನಿಮಾ ಶೂಟಿಂಗ್ ನಡೆಯುವ ವೇಳೆ ಲವ್ಲಿ ಸಿನಿಮಾ ಡೈರೆಕ್ಟರ್ ಚೇತನ್, ವಸಿಷ್ಠ ಜೊತೆ ಈ ಸಿನಿಮಾ ಬಗ್ಗೆ ಮಾತನಾಡಿದ್ದರಂತೆ. ಆಗ ಯಾವಾಗಲೂ ಮಾಸ್ ಲುಕ್, ರಗಡ್ ಲುಕ್‌ನಲ್ಲಿ ಇರುತ್ತಿದ್ದ ವಸಿಷ್ಠ ಸಿಂಹ ಅವರನ್ನು ಲವರ್ ಬಾಯ್ ರೀತಿಯಲ್ಲಿ ಪ್ರೇಕ್ಷಕರಿಗೆ ತೋರಿಸಬೇಕು ಎಂಬ ಆಸೆಯನ್ನು ಚೇತನ್ ವಸಿಷ್ಠ ಬಳಿ ಹೇಳಿಕೊಂಡಿದ್ದರಂತೆ.
ಆಗ ಸ್ಕ್ರಿಪ್ಟ್‌ನ್ನು ತಿದ್ದಿತೀಡಿ ವಸಿಷ್ಠ ಸರಿ ಮಾಡಿದ್ದರಂತೆ. ವಸಿಷ್ಟ ಸಿಂಹ ಪ್ರಕಾರ, ಸಿನಿಮಾ ಕಂಟೆಂಟ್ ಜೊತೆ ಸಿನಿಮಾ ನೋಡಿದವರ ಮನಸ್ಸಿನಲ್ಲಿ ಆ ಸಿನಿಮಾ ಮನೆ ಮಾಡಿರಬೇಕು. ಸಿನಿಮಾ ಮುಗಿಸಿ, ಮನೆಗೆ ಹೋದಾಗಲೂ, ಸಿನಿಮಾ ಕಥೆ ಅವರ ಮನಸ್ಸಿನಲ್ಲಿರಬೇಕು ಎಂದು ವಸಿಷ್ಠ ಸಿಂಹ ಹೇಳಿದ್ದಾರೆ. ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.