ಬೆಳಗಾವಿ:- ಬೆಳಗಾವಿಯಲ್ಲಿ ಕುರುಡು ಪ್ರೀತಿಯ ಮೋಹಕ್ಕೆ ಬಿದ್ದು ಜೀವವನ್ನೆ ಪ್ರೇಮಿಗಳು ಕಳೆದುಕೊಂಡ ಬೆಳ್ಳಂಬೆಳಗ್ಗೆ ನಡೆದಿದೆ.
ನಗರದ ಬಸವಕಾಲೋನಿ ಈ ಘಟನೆ ನಡೆದಿದೆ ತಾನು ಪ್ರೀತಿಸಿದ ವೈದ್ಯಕೀಯ ವಿದ್ಯಾರ್ಥಿನಿ ರೇಣುಕಾ ಎಂಬುವವಳನ್ನು ಸವದತ್ತಿ ಮೂಲದ ಭಗ್ನ ಪ್ರೇಮಿ ರಾಮಚಂದ್ರ ತೇಣಗಿ ಎಂಬುವವನು ಪ್ರೀತಿ ಸಿಗದ ಕಾರಣಕ್ಕಾಗಿ ಕೊಲೆ ಮಾಡಿದ್ದಲ್ಲದೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇನ್ನೂ ಘಟನಾ ಸ್ಥಳಕ್ಕೆ ಎಪಿಎಂಸಿ ಠಾಣೆಯ ಸಿಪಿಐ ಮಂಜುನಾಥ ಹಿರೇಮಠ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತ ಪ್ರೀತಿಯ ಬಲೆಗೆ ಬಲಿಯಾದ ಪ್ರೇಮಿಗಳ ಕುಟುಂಬಸ್ಥರ ಆಕ್ರಂದನ ಹೆಚ್ಚಿದೆ.




