ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಇದೀಗ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಹೌದು ‘ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇದ್ದ ಗಡುವನ್ನು ವಿಸ್ತರಣೆ ಮಾಡಲಾಗಿದ್ದು, ಇದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಗೃಹಬಳಕೆಯ ಅಡುಗೆ ಎಲ್ಪಿಜಿ ಸಂಪರ್ಕ ಹೊಂದಿರುವ ಗ್ರಾಹಕರು ಇ-ಕೆವೈಸಿ ಮಾಡಿಸಲು ತೈಲ ಮಾರಾಟ ಕಂಪನಿಗಳು ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿವೆ. ಈ ಮೊದಲು ಸೆಪ್ಟೆಂಬರ್ 7 ಕೊನೆಯ ದಿನವಾಗಿತ್ತು, ಆದರೆ ಗ್ಯಾಸ್ ಏಜೆನ್ಸಿಗಳ ಮುಂದೆ ಸಾರ್ವಜನಿಕರ ದಟ್ಟಣೆ ಹೆಚ್ಚಾಗಿ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದರಿಂದ, ಗಡುವನ್ನು ಸೆಪ್ಟೆಂಬರ್ 14ರವರೆಗೆ ವಿಸ್ತರಣೆ ಮಾಡಲಾಗಿದೆ.
ಅಡುಗೆ ಅನಿಲ ವಿತರಣೆಯಲ್ಲಿ ಪಾರದರ್ಶಕತೆ ತರಲು, ನಕಲಿ ಸಂಪರ್ಕಗಳನ್ನು ತಡೆಯಲು ಹಾಗೂ ಅರ್ಹ ಫಲಾನುಭವಿಗಳಿಗೆ ಸರಿಯಾಗಿ ಸಬ್ಸಿಡಿ ತಲುಪಿಸಲು ಈ ಇ-ಕೆವೈಸಿ ಕಡ್ಡಾಯವಾಗಿದೆ ಅಂತ ಹೇಳಲಾಗ್ತಿದೆ. ನೀವು ಇದನ್ನು ಆನ್ಲೈನ್ ಹಾಗೂ ಆಫ್ಲೈನ್ ಎರಡೂ ವಿಧಾನಗಳ ಮೂಲಕ ಮಾಡಿಕೊಳ್ಳಬಹುದು.
ಆನ್ಲೈನ್ನಲ್ಲಾದರೆ – ಇಂಡಿಯನ್ ಆಯಿಲ್ ಒನ್, ಹಲೋ ಬಿಪಿಸಿಎಲ್ ಅಥವಾ ಹೆಚ್ಪಿ ಪೇ ಆಪ್ಗಳ ಮೂಲಕ ಮತ್ತು ‘ಆಧಾರ್ ಫೇಸ್ ಆರ್ ಡಿ’ (Aadhaar FaceRD) ಆಪ್ ಬಳಸಿ ಮನೆಯಲ್ಲೇ ಮುಖದ ಗುರುತಿಸುವಿಕೆ ಮೂಲಕ ಇ-ಕೆವೈಸಿ ಮುಗಿಸಬಹುದು.
ಆಫ್ಲೈನ್ನಲ್ಲಾದರೆ – ನಿಮ್ಮ ಗ್ಯಾಸ್ ಪಾಸ್ಬುಕ್ ಹಾಗೂ ದಾಖಲೆಗಳೊಂದಿಗೆ ಹತ್ತಿರದ ಗ್ಯಾಸ್ ಏಜೆನ್ಸಿಗೆ ತೆರಳಿ ಬಯೋಮೆಟ್ರಿಕ್ ಮೂಲಕವೂ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಸಿಲಿಂಡರ್ ಡೆಲಿವರಿ ಮಾಡಲು ಬರುವ ಸಿಬ್ಬಂದಿಯ ಬಳಿಯೂ ಈ ಸೌಲಭ್ಯ ಇರುತ್ತದೆ.
ಒಂದು ವೇಳೆ ನಿಗದಿತ ಗಡುವಿನೊಳಗೆ ಇ-ಕೆವೈಸಿ ಮಾಡಿಸದಿದ್ದರೆ, ಸರ್ಕಾರದ ಸಬ್ಸಿಡಿ ತಡೆಹಿಡಿಯಲ್ಪಡುವ ಹಾಗೂ ಸಿಲಿಂಡರ್ ಬುಕಿಂಗ್ನಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಆದ್ದರಿಂದ ಇನ್ನು ಇ-ಕೆವೈಸಿ ಮಾಡಿಸದ ಗ್ರಾಹಕರು ಇದೆ ಸೆಪ್ಟೆಂಬರ್ 14ರೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಸಿಲಿಂಡರ್ ಸೇವೆಗಳಲ್ಲಿ ಯಾವುದೇ ಅಡೆತಡೆ ಉಂಟಾಗದಂತೆ ನೋಡಿಕೊಳ್ಳಿ.




